IPLನಲ್ಲಿ ಕನ್ನಡಿಗರಿಗೆ ಮಹಾಮೋಸ – 11 ಆಟಗಾರರಲ್ಲಿ ಚಾನ್ಸ್ ಸಿಕ್ಕಿದ್ದೆಷ್ಟು?
KL ಕ್ಯಾಪ್ಟನ್ಸಿಯಲ್ಲಿ Pass Or Fail?

ಪ್ರತೀ ಸಲದ ಐಪಿಎಲ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೆಂಡಿಂಗ್ನಲ್ಲೇ ಇರುತ್ತೆ. ಈ ಸಲ ಕಪ್ ನಮ್ದೇ ಅನ್ನೋ ಸ್ಲೋಗನ್ ಅಂತೂ ಸೋಶಿಯಲ್ ಮೀಡಿಯಾಗಳಲ್ಲಿ ರಾರಾಜಿಸುತ್ತಾ ಇರುತ್ತೆ. ಹೆಸರಲ್ಲಿ ಬೆಂಗಳೂರು ಅಂತಾ ಇರೋದ್ರಿಂದ ಕನ್ನಡಿಗರಿಗೂ ಒಂದಾಸೆಯಿದೆ. ಬೆಂಗಳೂರು ಟೀಮ್‌ನಲ್ಲಿ ನಮ್ಮ ಕನ್ನಡಿಗರು ಆಡ್ಬೇಕು ಅನ್ನೋದು. ಈ ಬಾರಿ ಬೆಂಗಳೂರು ಟೀಮ್‌ನಲ್ಲಿ ಇಬ್ಬರು ಕನ್ನಡಿಗರು ಇದ್ರೂ ಕೂಡಾ ಚಾನ್ಸ್ ಸಿಕ್ಕಿದ್ದು ಒಬ್ಬರಿಗೆ ಮಾತ್ರ. ಅದು ಕೂಡಾ ಎರಡೇ ಪಂದ್ಯ. ಇನ್ನೊಬ್ಬ ಕನ್ನಡಿಗ ಕೇವಲ ಬೆಂಚ್ ಕಾಯಲು ಮಾತ್ರ ಸೀಮಿತವಾಗಬೇಕಾಯ್ತು. ಹಾಗಂತ ಬೆಂಗಳೂರು ತಂಡದಲ್ಲಿ ಮಾತ್ರ ಹೀಗಾಗಿಲ್ಲ. ಕನ್ನಡಿಗರು ಬೇರೆ ಬೇರೆ ಫ್ರಾಂಚೈಸಿಗಳ ಪರ ಆಡಿದ್ರೂ ಚಾನ್ಸ್ ಸಿಕ್ಕಿದ್ದು ಮಾತ್ರ ಅಷ್ಟಕ್ಕಷ್ಟೇ. ಅಷ್ಟಕ್ಕೂ 2024ರ ಐಪಿಎಲ್ನಲ್ಲಿ ಎಷ್ಟು ಕನ್ನಡಿಗರು ಮೈದಾನಕ್ಕೆ ಇಳಿದಿದ್ರು? ಐಪಿಎಲ್ನಲ್ಲಿ ಕರ್ನಾಟಕದ ಆಟಗಾರರಿಗೆ ಮೋಸವಾಯ್ತಾ? ಅಥವಾ ಆಟಗಾರರೇ ಸಿಕ್ಕಿರೋ ಚಾನ್ಸ್ನ ಬಳಸಿಕೊಳ್ಳಲಿಲ್ವಾ? ಯಾರೆಲ್ಲಾ ಫೆಲ್ಯೂರ್ ಆದ್ರು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಿಶ್ವಕಪ್ ಫಸ್ಟ್ ಪಂದ್ಯಕ್ಕಿಲ್ಲ ಕೊಹ್ಲಿ – ರೋHIT ಗೆ ಕಾಡ್ತಿರೋ ಟೆನ್ಷನ್ ಏನು?
2024ರ ಆವೃತ್ತಿಯಲ್ಲಿ ಸಾಕಷ್ಟು ಯಂಗ್ ಪ್ಲೇಯರ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸದ್ದು ಮಾಡಿದ್ದಾರೆ. ಆದ್ರೆ ಕರ್ನಾಟಕದ ಯಾವೊಬ್ಬ ಪ್ಲೇಯರ್ ಕೂಡ ಅಷ್ಟೇನು ಸದ್ದು ಮಾಡ್ಲಿಲ್ಲ. ಸೀಸನ್ 17ನಲ್ಲಿ ಕರ್ನಾಟಕದ ಒಟ್ಟು 11 ಆಟಗಾರರು ವಿವಿಧ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಬಟ್ ಅವ್ರಲ್ಲಿ ಗ್ರೌಂಡ್ಗೆ ಇಳಿಯೋಕೆ ಚಾನ್ಸ್ ಸಿಕ್ಕಿದ್ದು 9 ಆಟಗಾರರಿಗೆ ಮಾತ್ರ. ಅದೂ ಕೂಡ ಒಂದೋ ಎರಡೋ ಪಂದ್ಯಕ್ಕೆ ಸೀಮಿತವಾಗಿತ್ತು. ಬಟ್ ಲೀಗ್ ಉದ್ದಕ್ಕೂ ಅಷ್ಟೂ ಪಂದ್ಯಗಳನ್ನ ಆಡಿದ ಏಕೈಕೆ ಕನ್ನಡದ ಆಟಗಾರ ಕೆ.ಎಲ್ ರಾಹುಲ್. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿದಿದ್ದ 9 ಆಟಗಾರರ ಪ್ರದರ್ಶನ ಹೇಗಿತ್ತು ಅನ್ನೋದನ್ನ ಒಂದೊಂದಾಗೇ ಹೇಳ್ತೇನೆ ನೋಡಿ.
ಕನ್ನಡಿಗ KL ರಾಹುಲ್ ಕಮಾಲ್
ಲಕ್ನೋ ಸೂಪರ್ಜೈಂಟ್ಸ್ ತಂಡದ ಕ್ಯಾಪ್ಟನ್ ಕೆ.ಎಲ್ ರಾಹುಲ್. ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ತಂಡವನ್ನು ಮುನ್ನಡೆಸಿದ ರೀತಿಯಂತೂ ಅದ್ಭುತ. ಪ್ರತಿ ಪಂದ್ಯದಲ್ಲೂ ತಂಡದ ಬ್ಯಾಟಿಂಗ್ ಬೆನ್ನುಲೆಬಾಗಿ ಕೆ.ಎಲ್ ನಿಂತಿದ್ದರು. ಒಂದೆರೆಡು ಮ್ಯಾಚ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ್ರೂ ಸಿಕ್ಕಿರೋ ಚಾನ್ಸ್ ಮಿಸ್ ಮಾಡ್ಕೊಳ್ಳಲು ಸಾಧ್ಯವೇ ಇಲ್ಲ ಅನ್ನೋ ರೀತಿ ಫರ್ಫಾಮೆನ್ಸ್ ಮಾಡಿದ್ದರು.. ಐಪಿಎಲ್ ನಲ್ಲಿ ಆಡಿದ 14 ಪಂದ್ಯಗಳಲ್ಲಿ 37.14 ರ ಸರಾಸರಿಯಲ್ಲಿ 520 ರನ್ ಕಲೆಹಾಕಿದರು. ಓಪನಿಂಗ್ ಬ್ಯಾಟ್ಸ್ಮನ್ ಜೊತೆಗೆ ಕೀಪಿಂಗ್ ಮೂಲಕವೂ ತಂಡಕ್ಕೆ ಕೊಡುಗೆ ನೀಡುವ ಆಟಗಾರ ಅನ್ನೋದನ್ನ ಪ್ರೂವ್ ಮಾಡಿದ್ರು. ಈ ಮೂಲಕ ಸಿಕ್ಕಿರೋ ಅವಕಾಶವನ್ನ ಚೆನ್ನಾಗೇ ಯೂಸ್ ಮಾಡಿಕೊಂಡ್ರು. ಅಲ್ದೇ ತಂಡದ ಪರ ಎಲ್ಲಾ ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು ಅನ್ನೋದೇ ಕನ್ನಡಿಗರಿಗೆ ಹೆಮ್ಮೆಯ ವಿಷಯ.
ದೇವದತ್ ಪಡಿಕ್ಕಲ್ ಫುಲ್ ಡಲ್
ದೇವದತ್ ಪಡಿಕ್ಕಲ್ ಬಗ್ಗೆ ಯಾರಿಗೆ ನಂಬಿಕೆಯಿತ್ತೋ ಇಲ್ವೋ, ಆದರೆ ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ಕೆ.ಎಲ್ ರಾಹುಲ್‌ಗೆ ದೇವದತ್ ಮೇಲೆ ಸಿಕ್ಕಾಪಟ್ಟೆ ನಂಬಿಕೆಯಿತ್ತು. ಹೀಗಾಗಿ ತನ್ನ ತಂಡದಲ್ಲಿ ದೇವದತ್ ಪಡಿಕ್ಕಲ್‌ಗೆ ಕೆ.ಎಲ್ ರಾಹುಲ್ ಚಾನ್ಸ್ ಕೊಟ್ರು. ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ಲಕ್ನೋ ಸೂಪರ್ಜೈಂಟ್ಸ್ ತಂಡವನ್ನು ಸೇರಿದ್ದ ದೇವದತ್ ಪಡಿಕ್ಕಲ್ ತನಗೆ ಸಿಕ್ಕ ಗೋಲ್ಡಲ್ ಆಪಾರ್ಚುನಿಟಿಯನ್ನ ಕೈಚೆಲ್ಲಿಕೊಂಡ್ರು. ಆಡಿದ 7 ಪಂದ್ಯಗಳಲ್ಲಿ ಪಡಿಕ್ಕಲ್ ಬ್ಯಾಟ್ನಿಂದ ಬಂದಿದ್ದು, ಕೇವಲ 38 ರನ್. ಹೀಗಾಗಿ ನಾಯಕ ರಾಹುಲ್ ನಂಬಿಕೆಯನ್ನು ಗಳಿಸುವಲ್ಲಿಯೂ ಪಡಿಕಲ್ ಯಶಸ್ವಿಯಾಗಲಿಲ್ಲ.
ಮಂಕಾದ ಮಯಾಂಕ್ ಅಗರ್ ವಾಲ್
ಕ್ರಿಕೆಟರ್ಸ್ ಲ್ಲಿ ಭರವಸೆ ಮೂಡಿಸಿದ್ದ ಮತ್ತೊಬ್ಬ ಕನ್ನಡಿಗ ಅಂದ್ರೆ ಮಯಾಂಕ್ ಅಗರ್ವಾಲ್. ಆದ್ರೆ ಯಾಕೋ ಈ ಬಾರಿ ಐಪಿಎಲ್‌ನಲ್ಲಿ ಮಯಾಂಕ್ ಕಂಪ್ಲೀಟ್ ಮಂಕಾಗಿ ಹೋಗಿದ್ರು. ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ಗೆ ಈ ಬಾರಿಯ ಐಪಿಎಲ್‌ನಲ್ಲಿ ತಂಡದಲ್ಲಿ ಆಡಲು ಹೆಚ್ಚು ಅವಕಾಶವೇ ಸಿಗಲಿಲ್ಲ. ಆರಂಭದಲ್ಲಿ ಅವಕಾಶ ಪಡೆದ ಮಯಾಂಕ್ ಆಡಿದ 4 ಪಂದ್ಯಗಳಲ್ಲಿ ಕೇವಲ 64 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಫ್ರಾಂಚೈಸಿ ಮಯಾಂಕ್ರನ್ನು ತಂಡದಿಂದ ಹೊರಗಿಟ್ಟು ಅವರ ಜಾಗದಲ್ಲಿ ಟ್ರಾವಿಸ್ ಹೆಡ್ರನ್ನು ಕಣಕ್ಕಿಳಿಸಿತ್ತು.
ಮೆರೆಯಲೇ ಇಲ್ಲ ಮನೀಶ್ ಪಾಂಡೆ
ಕರ್ನಾಟಕದ ಕ್ರಿಕೆಟಿಗರಲ್ಲಿ ಸ್ಟೈಲಿಶ್ ಮತ್ತು ಅತ್ಯಂತ ಫಿಟ್ ಆಟಗಾರ ಅಂದ್ರೆ ಮನೀಶ್ ಪಾಂಡೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಮನೀಶ್ ಪಾಂಡೆ ಈ ಸೀಸನ್‌ನಲ್ಲಿ ಆಡಿದ್ದು, ಕೇವಲ 1 ಪಂದ್ಯ ಮಾತ್ರ. ಆದರೆ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದ ಮನೀಶ್ 42 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಆದ್ರೆ, ಕೆಕೆಆರ್ ತಂಡದಲ್ಲಿ ಮನೀಶ್ ಪಾಂಡೆಗೆ ಹೆಚ್ಚಿನ ಅವಕಾಶ ಸಿಗಲೇ ಇಲ್ಲ. ಹೀಗಾಗಿ ಐಪಿಎಲ್‌ನಲ್ಲಿ ಮನೀಶ್ ಪಾಂಡೆಗೆ ಮೆರೆಯಲು ಆಗಲೇ ಇಲ್ಲ.
ಎರಡೇ ಪಂದ್ಯಕ್ಕೆ ಹೊರಬಿದ್ದ ಅಭಿನವ್
ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಳೆದ ಬಾರಿ ಗೇಮ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ದ ಅಭಿನವ್ ಮನೋಹರ್ ಕ್ರಿಕೆಟ್ ಅಭಿಮಾನಿಗಳಿಂದ ಶಹಬ್ಬಾಸ್ ಅನ್ನಿಸಿಕೊಂಡಿದ್ದರು. ಈ ಸೀಸನ್‌ನಲ್ಲಿ ಯಾಕೋ ಅಭಿನವ್ ಗೆ ಅದೃಷ್ಟವೇ ಕೈಹಿಡಿಯಲಿಲ್ಲ ಅನ್ಸುತ್ತೆ. ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆಡಿದ 2 ಪಂದ್ಯಗಳಲ್ಲಿ ಅಭಿನವ್ ಕೇವಲ 9 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಅವರನ್ನು ಪ್ಲೇಯಿಂಗ್ 11 ನಿಂದ ಗುಜರಾತ್ ಫ್ರಾಂಚೈಸಿ ಕೈಬಿಟ್ಟಿತ್ತು.
ಒಂದೇ ಪಂದ್ಯದಲ್ಲೇ ಮರೆಯಾದ ಶರತ್
ಗುಜರಾತ್ ಟೈಟನ್ಸ್ ಬಿಡ್‌ನಲ್ಲಿ ಪರ್‌ಚೇಸ್ ಮಾಡಿದ ಮತ್ತೊಬ್ಬ ಕನ್ನಡಿಗ ಆಟಗಾರ ಬಿ.ಆರ್ ಶರತ್. ಕನ್ನಡಿಗ ಬಿ. ಆರ್ ಶರತ್ಗೂ ಜಿಟಿ ಹೆಚ್ಚಿನ ಅವಕಾಶ ನೀಡಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ ಶರತ್ ಕೇವಲ 1 ರನ್ ಗೆ ತೃಪ್ತಿಪಡಬೇಕಾಯ್ತು.
ಕೃಷ್ಣಪ್ಪ ಗೌತಮ್ ಸ್ಪಿನ್ ಮ್ಯಾಜಿಕ್ ಠುಸ್
ಕನ್ನಡಿಗ ಕೃಷ್ಣಪ್ಪ ಗೌತಮ್ ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಲಕ್ನೋ ತಂಡದಲ್ಲಿದ್ದ ಸ್ಪಿನ್ ಆಲ್ರೌಂಡರ್ ಕೃಷ್ಣಪ್ಪ ಗೌತಮ್ಗೂ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ 14.50 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾದರು.
ವಿಧ್ವತ್ ಕಾವೇರಪ್ಪ ಬೇಡವಾಗಿದ್ದೇಕೆ?
ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ವೇಗಿ ವಿಧ್ವತ್ ಕಾವೇರಪ್ಪ, ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಉಯೋಗಿಸಿಕೊಂಡಿದ್ರು. ಕಾವೇರಪ್ಪ ಆರ್‌ಸಿಬಿ ವಿರುದ್ಧ ಪ್ರಮುಖ 2 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆ ಪಂದ್ಯದ ಬಳಿಕ ಇವರಿಗೆ ಪಂಜಾಬ್ ಪ್ಲೇಯಿಂಗ್ 11 ಅವಕಾಶವೇ ಸಿಗಲಿಲ್ಲ.
ವೈಶಾಕ್ ಬೌಲಿಂಗ್ ಮ್ಯಾಜಿಕ್ ವಿಫಲ
ಆರ್‌ಸಿಬಿ ತಂಡದಲ್ಲಿದ್ದ ವೈಶಾಕ್ ವಿಜಯ್ಕುಮಾರ್ಗೆ ಈ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡುವ ಅವಕಾಶ ನೀಡಲಾಯಿತು. ಆದರೆ ವೈಶಾಕ್ ತಮ್ಮ ಬೌಲಿಂಗ್ ಮ್ಯಾಜಿಕ್ ತೊರಿಸುವಲ್ಲಿ ಫೇಲ್ ಆಗಿದ್ರು. 4 ಪಂದ್ಯಗಳಲ್ಲಿ ಕೇವಲ 4 ವಿಕೆಟ್ ಉರುಳಿಸಿದ್ದೇ ವೈಶಾಕ್ ಸಾಧನೆ.
ಬೆಂಚ್ ಕಾದು ಸುಸ್ತಾದ ಮನೋಜ್ ಬಾಂಡಗೆ
ಕರ್ನಾಟಕದ ರಾಯಚೂರು ಜಿಲ್ಲೆಯವರಾದ ಮನೋಜ್ ಬಾಂಡಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದಾಗ ಬಿಸಿಲನಗರಿಯ ಜನ ಖುಷಿಯಾಗಿದ್ದರು. ಆರ್‌ಸಿಬಿ ಟೀಮ್‌ನಲ್ಲಿ ನಮ್ಮ ರಾಯಚೂರು ಹುಡುಗ ಇದ್ದಾನೆ ಅಂತಾ ಸಂತಸ ಪಟ್ಟಿದ್ದರು. ಎಡಗೈ ಬ್ಯಾಟ್ಸಮನ್ ಮತ್ತು ಮಧ್ಯಮ ವೇಗದ ಬೌಲರ್ ಮನೋಜ್ ಬಾಂಡಾಗೆ ಐಪಿಎಲ್‌ನಲ್ಲಿ ಕ್ರಿಕೆಟ್ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವಿತ್ತು. ಆದ್ರೆ, ಅದೃಷ್ಟ ಮನೋಜ್ ಪರವಾಗಿ ನಿಲ್ಲಲೇ ಇಲ್ಲ. ಆರ್‌ಸಿಬಿ ತಂಡ ಸೇರಿದ್ದ ಕನ್ನಡಿಗ ಮನೋಜ್ ಬಾಂಡಗೆ ಕೇವಲ ಬೆಂಚ್ ಕಾಯಬೇಕಾಗಿ ಬಂತು.
ಪ್ರವೀಣ್ ದುಬೆಗೂ ಸಿಗಲಿಲ್ಲ ಚಾನ್ಸ್
ಕರ್ನಾಟಕದ ಮತ್ತೊಬ್ಬ ಕ್ರಿಕೆಟ್ ಪ್ಲೇಯರ್ ಪ್ರವೀಣ್ ದುಬೆ. ಬಲಗೈ ಬ್ಯಾಟ್ಸಮನ್ ಮತ್ತು ಲೆಗ್ ಬ್ರೇಕ್ ಗೂಗ್ಲಿ ಬೌಲರ್ ಆಗಿರೋ ಪ್ರವೀಣ್ ದುಬೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ರು. ಆದ್ರೆ, ಪ್ರವೀಣ್ ದುಬೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಲೀಗ್ ಉದ್ದಕ್ಕೂ ಬೆಂಚ್ ಕಾದಿದ್ದೆ ಬಂತು.
ನಮ್ಮ ಕನ್ನಡಿಗ ಆಟಗಾರರಲ್ಲಿ ಕೆಲವ್ರು ಐಪಿಎಲ್‌ನಲ್ಲಿ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡ್ರು. ಇನ್ನು ಕೆಲವರಿಗೆ ಆಡುವ ಜೋಶ್ ಇದ್ದರೂ ಫೀಲ್ಡಿಗೆ ಎಂಟ್ರಿಯಾಗೋ ಯೋಗವೇ ಕೂಡಿಬಂದಿಲ್ಲ. ನೆಕ್ಷ್ಟ್ ಐಪಿಎಲ್‌ನಲ್ಲಾದ್ರೂ ನಮ್ಮ ಕನ್ನಡಿಗರ ಕ್ರಿಕೆಟರ್ಸ್‌ಗೆ ಚಾನ್ಸ್ ಸಿಗುತ್ತಾ ಅನ್ನೋದನ್ನ ಕಾದು ನೋಡ್ಬೇಕು.