ಆರ್‌ಸಿಬಿ ವಿರುದ್ಧ ಮುಂಬೈಗೆ 7 ವಿಕೆಟ್​ಗಳ ಭರ್ಜರಿ ಜಯ – ಸೂರ್ಯನ ವೇಗದ ಆಟಕ್ಕೆ ಎಲ್ಲರೂ ಶಾಕ್​

ಆರ್‌ಸಿಬಿ ವಿರುದ್ಧ ಮುಂಬೈಗೆ 7 ವಿಕೆಟ್​ಗಳ ಭರ್ಜರಿ ಜಯ – ಸೂರ್ಯನ ವೇಗದ ಆಟಕ್ಕೆ ಎಲ್ಲರೂ ಶಾಕ್​

ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ ಎನ್ನುವಂತಾಗಿದೆ ಆರ್‌ಸಿಬಿ ಕತೆ.  ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಸತತ ಸೋಲುನಿಂದಾಗಿ ಆರ್‌ಸಿಬಿ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಇಳಿದಿದೆ.

ವಾಂಖೆಡೆಯಲ್ಲಿ ನಡೆಯತ್ತಿರುವ ಪಂದ್ಯದಲ್ಲಿ ಓಪನಿಂಗ್​ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿದ ಇಶಾನ್​ ಕಿಶನ್​ ಮಾತ್ರ ಅರ್ಧ ಶತಕಕ್ಕೂ ಹೆಚ್ಚಿನ ರನ್​ ಬಾರಿಸುವ ಮೂಲಕ ಅಭಿಮಾನಿಗಳ ಸಂಸತಕ್ಕೆ ಕಾರಣರಾಗಿದ್ದಾರೆ. 34 ಎಸೆತದಲ್ಲಿ 7 ಬೌಂಡರಿ ಮತ್ತು 5 ಸಿಕ್ಸ್​ ಬಾರಿಸಿ 69 ರನ್​ ಬಾರಿಸಿದ್ದಾರೆ. ಆ ಮೂಲಕ ಅವರ ಸ್ಟ್ರೈಕ್​ ರೇಟ್​​ 202.94ಕ್ಕೇರಿದೆ. ಅತ್ತ ರೋಹಿತ್​ ಶರ್ಮಾ 24 ಎಸೆತದಲ್ಲಿ 3 ಸಿಕ್ಸ್​ ಮತ್ತು 3 ಬೌಂಡರಿ ಬಾರಿಸಿ 28 ರನ್​ ಕಲೆಹಾಕಿ ಔಟ್​ ಆದರು.

ಇದನ್ನೂ ಓದಿ : ದಿನೇ ದಿನೆ ಹೆಚ್ಚಾಗುತ್ತಿದೆ ಬಿಸಿಲಿನ ತಾಪ – ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ!

ಸೂರ್ಯ ಕುಮಾರ್​ ಆಟ ಮಾತ್ರ ಮುಂಬೈ ಅಭಿಮಾನಿಗಳನ್ನ ಅಚ್ಚರಿಗೆ ದೂಡಿದೆ. 19 ಎಸೆತಕ್ಕೆ 5 ಬೌಂಡರಿ ಮತ್ತು 4 ಸಿಕ್ಸ್​ ಹೊಡೆಯುವ ಮೂಲಕ 52 ರನ್​ ಬಾರಿಸಿದ್ದಾರೆ. ಆ ಮೂಲಕ ವೇಗವಾಗಿ ಅರ್ಧ ಶತಕ ಬಾರಿಸಿದ ಹೆಗ್ಗಳಿಕೆ ಸೂರ್ಯನ ಹೆಗಲೇರಿದೆ.

ತವರಿನಲ್ಲೇ ಆರ್​ಸಿಬಿ ನೀಡಿದ 196 ರನ್​ ಸವಾಲನ್ನು ಸುಲಭವಾಗಿ ಸ್ವೀಕರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇನ್ನು ಆಡಿರುವ ನಾಲ್ಕು ಪಂದ್ಯದಲ್ಲಿ ಮೂರು ಪಂದ್ಯ ಸೋತ ಮುಂಬೈಗೆ ಇದೊಂದು ಜಯ ದೊಡ್ಡ ಟರ್ನ್​ ನೀಡಿದೆ. ಅದರಲ್ಲೂ ಮುಂಬೈ ಮಾಲೀಕ ಆಕಾಶ್​ ಅಂಬಾನಿ ಮತ್ತು ನೀತಾ ಅಂಬಾನಿಗೆ ಸಂತಸದಲ್ಲಿ ತೇಲಾಡುತ್ತಿದ್ದಾರೆ.

Shwetha M