ಆರ್‌ಸಿಬಿ ವಿರುದ್ಧ ಮುಂಬೈಗೆ 7 ವಿಕೆಟ್ಗಳ ಭರ್ಜರಿ ಜಯ – ಸೂರ್ಯನ ವೇಗದ ಆಟಕ್ಕೆ ಎಲ್ಲರೂ ಶಾಕ್
ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ ಎನ್ನುವಂತಾಗಿದೆ ಆರ್‌ಸಿಬಿ ಕತೆ. ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಸತತ ಸೋಲುನಿಂದಾಗಿ ಆರ್‌ಸಿಬಿ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಇಳಿದಿದೆ.
ವಾಂಖೆಡೆಯಲ್ಲಿ ನಡೆಯತ್ತಿರುವ ಪಂದ್ಯದಲ್ಲಿ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಮೈದಾನಕ್ಕಿಳಿದ ಇಶಾನ್ ಕಿಶನ್ ಮಾತ್ರ ಅರ್ಧ ಶತಕಕ್ಕೂ ಹೆಚ್ಚಿನ ರನ್ ಬಾರಿಸುವ ಮೂಲಕ ಅಭಿಮಾನಿಗಳ ಸಂಸತಕ್ಕೆ ಕಾರಣರಾಗಿದ್ದಾರೆ. 34 ಎಸೆತದಲ್ಲಿ 7 ಬೌಂಡರಿ ಮತ್ತು 5 ಸಿಕ್ಸ್ ಬಾರಿಸಿ 69 ರನ್ ಬಾರಿಸಿದ್ದಾರೆ. ಆ ಮೂಲಕ ಅವರ ಸ್ಟ್ರೈಕ್ ರೇಟ್ 202.94ಕ್ಕೇರಿದೆ. ಅತ್ತ ರೋಹಿತ್ ಶರ್ಮಾ 24 ಎಸೆತದಲ್ಲಿ 3 ಸಿಕ್ಸ್ ಮತ್ತು 3 ಬೌಂಡರಿ ಬಾರಿಸಿ 28 ರನ್ ಕಲೆಹಾಕಿ ಔಟ್ ಆದರು.
ಇದನ್ನೂ ಓದಿ : ದಿನೇ ದಿನೆ ಹೆಚ್ಚಾಗುತ್ತಿದೆ ಬಿಸಿಲಿನ ತಾಪ – ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ!
ಸೂರ್ಯ ಕುಮಾರ್ ಆಟ ಮಾತ್ರ ಮುಂಬೈ ಅಭಿಮಾನಿಗಳನ್ನ ಅಚ್ಚರಿಗೆ ದೂಡಿದೆ. 19 ಎಸೆತಕ್ಕೆ 5 ಬೌಂಡರಿ ಮತ್ತು 4 ಸಿಕ್ಸ್ ಹೊಡೆಯುವ ಮೂಲಕ 52 ರನ್ ಬಾರಿಸಿದ್ದಾರೆ. ಆ ಮೂಲಕ ವೇಗವಾಗಿ ಅರ್ಧ ಶತಕ ಬಾರಿಸಿದ ಹೆಗ್ಗಳಿಕೆ ಸೂರ್ಯನ ಹೆಗಲೇರಿದೆ.
ತವರಿನಲ್ಲೇ ಆರ್‌ಸಿಬಿ ನೀಡಿದ 196 ರನ್ ಸವಾಲನ್ನು ಸುಲಭವಾಗಿ ಸ್ವೀಕರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇನ್ನು ಆಡಿರುವ ನಾಲ್ಕು ಪಂದ್ಯದಲ್ಲಿ ಮೂರು ಪಂದ್ಯ ಸೋತ ಮುಂಬೈಗೆ ಇದೊಂದು ಜಯ ದೊಡ್ಡ ಟರ್ನ್ ನೀಡಿದೆ. ಅದರಲ್ಲೂ ಮುಂಬೈ ಮಾಲೀಕ ಆಕಾಶ್ ಅಂಬಾನಿ ಮತ್ತು ನೀತಾ ಅಂಬಾನಿಗೆ ಸಂತಸದಲ್ಲಿ ತೇಲಾಡುತ್ತಿದ್ದಾರೆ.