ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್ – ಬರೋಬ್ಬರಿ 63 ರನ್‌ಗಳ ಭರ್ಜರಿ ಗೆಲುವು
ತವರಿನಲ್ಲಿಸಿಎಸ್‌ಕೆ ಸಿಡಿಸಿದ ರನ್ ಮಳೆಗೆ ಗುಜರಾತ್ ಟೈಟಾನ್ಸ್ ಕೊಚ್ಚಿ ಹೋಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ 63 ರನ್‌ಗಳ ಭರ್ಜರಿ ಜಯದೊಂದಿಗೆ ಐಪಿಎಲ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ಇದನ್ನೂ ಓದಿ: ನಟ ಕಿಚ್ಚ ಸುದೀಪ್ vs ಎಮ್.ಎನ್.ಕುಮಾರ್ ಕೇಸ್ – ಸುದೀಪ್ ದಾಖಲಿಸಿದ್ದ ಕೇಸ್ ರದ್ದುಪಡಿಸಲು ಕೋರ್ಟ್ ನಕಾರ!
ಚೆನ್ನೈನ ಚೇಪಕ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 63 ರನ್‌ಗಳ ಗೆಲುವು ಸಾಧಿಸಿದೆ. ಚೆನ್ನೈ ನೀಡಿದ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಪರ ವೃದ್ಧಿಮಾನ್ ಸಾಹ 21, ಸಾಯಿ ಸುದರ್ಶನ್ 37, ಡೇವಿಡ್ ಮಿಲ್ಲರ್ 21 ರನ್ ಗಳಿಸಿದ್ರು. ಕ್ಯಾಪ್ಟನ್ ಗಿಲ್ 8 ರನ್ ಗಳಿಸಿ ಔಟಾದ್ರು. ಗುಜರಾತ್ ಟೈಟನ್ಸ್ 8 ವಿಕೆಟ್ ನಷ್ಟಕ್ಕೆ 20 ಓವರ್ನಲ್ಲಿ 143 ರನ್ ಗಳಿಸಿ ಸೋತಿದ್ದಾರೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡದ ಪರ ಓಪನರ್ ಆಗಿ ಬಂದ ಕನ್ನಡಿಗ ರಚಿನ್ ರವೀಂದ್ರ ಕೇವಲ 20 ಬಾಲ್ನಲ್ಲಿ 3 ಸಿಕ್ಸರ್, 6 ಫೋರ್ ಸಿಡಿಸಿದ್ರು. ಋತುರಾಜ್ ಗಾಯಕ್ವಾಡ್ 1 ಸಿಕ್ಸರ್, 6 ಫೋರ್ ಸಮೇತ 46 ರನ್ ಬಾರಿಸಿದ್ದಾರೆ. ರಹಾನೆ 12, ಬಳಿಕ ಬಂದ ಶಿವಂ ದುಬೆ ಕೇವಲ 23 ಬಾಲ್ನಲ್ಲಿ 5 ಸಿಕ್ಸರ್, 2 ಫೋರ್ 51 ರನ್, ಮಿಚೆಲ್ 24, ಸಮೀರ್ 14 ರನ್ ಗಳಿಸಿದ್ದಾರೆ. ಚೆನ್ನೈ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತ್ತು. ಈ ಮೂಲಕ ಗುಜರಾತ್ ಟೈಟನ್ಸ್ಗೆ 207 ರನ್‌ಗಳ ಬೃಹತ್ ಗುರಿ ನೀಡಿತ್ತು.