ಕ್ಯಾಮರೂನ್​ ಕಿಡ್ನಿಗೆ ಏನಾಯ್ತು? – ಆಕ್ಷನ್​ ನಲ್ಲಿ RCB ಮತ್ತೆ ಎಡವಟ್ಟು?  ​

ಕ್ಯಾಮರೂನ್​ ಕಿಡ್ನಿಗೆ ಏನಾಯ್ತು? – ಆಕ್ಷನ್​ ನಲ್ಲಿ RCB ಮತ್ತೆ ಎಡವಟ್ಟು?  ​

ಐಪಿಎಲ್​​ನಲ್ಲಿ ಮೋಸ್ಟ್ ಅನ್​ಲಕ್ಕೀ ಟೀಂ ಅಂತಾ ಯಾವುದಾದ್ರು ಇದ್ರೆ ಅದು ನಮ್ಮ ರಾಯಲ್​ ಚಾಲೆಂಜರ್ಸ್ ಬೆಂಗಳೂರು. 16 ಸೀಸನ್​ಗಳನ್ನ ಆಡಿದ್ರೂ ಒಂದೇ ಒಂದು ಬಾರಿ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಎಂಥಾ ಘಟಾನುಘಟಿ ಪ್ಲೇಯರ್ಸ್​ಗಳನ್ನೇ ಪರ್ಚೇಸ್ ಮಾಡಿದ್ರೂ ಫೈನಲ್​​ವರೆಗೆ ಬಂದಿದ್ದಷ್ಟೇ ಸಾಧನೆ. ಪೇಪರ್​​ನಲ್ಲಿ ಮಾತ್ರ ಆರ್​ಸಿಬಿ ಯಾವಾಗಲೂ ಸ್ಟ್ರ್ಯಾಂಗ್​ ಟೀಂ. ಆಕ್ಷನ್​ ಬಳಿಕ ಅತ್ಯಂತ ಬಲಿಷ್ಠ ಆಟಗಾರರನ್ನ ಹೊಂದಿರೋ ಟೀಂನಲ್ಲಿ ಆರ್​ಸಿಬಿ ಯಾವಾಗಲೂ ಟಾಪ್​-5 ಪೊಸೀಶನ್​ನಲ್ಲಂತೂ ಇದ್ದೇ ಇರುತ್ತೆ. ಎಂತೆಂಥಾ ವರ್ಲ್ಡ್​​ಕ್ಲಾಸ್ ಕ್ರಿಕೆಟರ್ಸ್​ ಎಲ್ಲಾ ಆರ್​ಸಿಬಿಯಲ್ಲಿ ಆಡಿದ್ದಾರೆ. ನಿಮಗೆ ಗೊತ್ತೇ ಇದೆ.. ಆದ್ರೂ ಕಪ್​​ ಮಾತ್ರ ಗೆಲ್ಲೋಕೆ ಆಗಿಲ್ಲ.. ಈ ಬಾರಿ ಕಪ್ ನಮ್ದೇ ಅಂತಾ 16 ವರ್ಷಗಳಿಂದಲೂ ಹೇಳ್ತಾನೆ ಇದ್ದೀವಿ..  ಆದ್ರೆ ನಮ್ಮವರು ಸೋಲ್ತಾನೆ ಇದ್ದಾರೆ..  ಸರಿ ಬಿಡಿ ಇಷ್ಟು ವರ್ಷ ಸೋತಿದ್ದಾಯ್ತು.. ಆರ್​ಸಿಬಿ ಫ್ಯಾನ್ಸ್ ಎಲ್ಲಾ ಅರಗಿಸಿಕೊಂಡಿದ್ದೂ ಆಯ್ತು.. 2024ರಲ್ಲಾದ್ರೂ ಕಪ್​ ಗೆಲ್ರಪ್ಪಾ ಅಂತಾ ಅಂದ್ಕೊಂಡ್ರೆ ಟೂರ್ನಿ ಆರಂಭವಾಗೋಕೆ ಮೊದಲೇ ನಮ್ಮ ಆರ್​ಸಿಬಿಗೆ ಶಾಕ್ ಎದುರಾಗಿದೆ. ಬರೋಬ್ಬರಿ 17.5 ಕೋಟಿ ಕೊಟ್ಟು ಖರೀದಿಸಿದ ಆಟಗಾರ ಕ್ಯಾಮರೂನ್ ಗ್ರೀನ್ ಈ ಬಾರಿ ಆಡ್ತಾರಾ ಇಲ್ವಾ ಅನ್ನೋ ಪ್ರಶ್ನೆ ಕಾಡ್ತಿದೆ. ಇದ್ರ ಜೊತೆಗೆ ಆಕ್ಷನ್​​ನಲ್ಲೂ ಆರ್​ಸಿಬಿ ಒಂದಷ್ಟು ಚಾಲೆಂಜೆಸ್​ಗಳನ್ನ ಎದುರಿಸಲಿದೆ. ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಮುಂಬೈ ಟೀಂನಲ್ಲಿ ಆಡಲ್ವಾ ರೋಹಿತ್ ಶರ್ಮಾ – ಟಿ20 ಕ್ಯಾಪ್ಟನ್ಸಿಯಿಂದಲೂ ಕೊಕ್?

ಆಸ್ಟ್ರೇಲಿಯಾದ ಆಲ್​​ರೌಂಡರ್ ಕ್ಯಾಮರೂನ್ ಗ್ರೀನ್​​ ಕಳೆದ ಸೀಸನ್​​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ರು. ಆದ್ರೆ, ಈ ಬಾರಿ ಮುಂಬೈ ಇಂಡಿಯನ್ಸ್​ ಕ್ಯಾಮರೂನ್ ಗ್ರೀನ್​ ರಿಲೀಸ್ ಮಾಡಿತ್ತು. ಇತ್ತ ಆರ್​ಸಿಬಿ 17.5 ಕೋಟಿ ಕೊಟ್ಟು ಆಲ್ರೌಂಡರ್​​ ಪ್ಲೇಯರ್​​ನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆರ್​​ಸಿಬಿ ಹಿಸ್ಟ್ರರಿಯಲ್ಲೇ ಒಬ್ಬ ಪ್ಲೇಯರ್ ಮೇಲೆ ಇಷ್ಟೊಂದು ಇನ್​​ವೆಸ್ಟ್​ಮೆಂಟ್ ಮಾಡಿರೋದು ಇದೇ ಮೊದಲು. ಫುಲ್​ ಕ್ಯಾಶ್ ಕೊಟ್ಟು ಮುಂಬೈ ಇಂಡಿಯನ್ಸ್​​ನಿಂದ ಗ್ರೀನ್​​ರನ್ನ ಕರೆದುಕೊಳ್ಳಲಾಗಿದೆ. ಗ್ರೀನ್ ಎಂಟ್ರಿಯಿಂದ ಆರ್​ಸಿಬಿಗೆ ಇನ್ನಷ್ಟು ಬಲ ಬಂದತಾಗಿತ್ತು. ಆದ್ರೆ ಈಗ ನೋಡಿದ್ರೆ, 2024ರ ಐಪಿಎಲ್​ನಲ್ಲಿ ಕ್ಯಾಮರೂನ್ ಗ್ರೀನ್ ಆಡೋದೆ ಅನುಮಾನವಾಗಿದೆ.

ಆಸ್ಟ್ರೇಲಿಯಾದ ಚಾನೆಲ್-7 ಜೊತೆಗೆ ಮಾತನಾಡಿರೋ ಕ್ಯಾಮರೂನ್ ಗ್ರೀನ್ ತಾವು ಗಂಭೀರವಾದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಹುಟ್ಟಿದಾಗಿನಿಂದಲೇ ಕ್ಯಾಮರೂನ್​​ ಗ್ರೀನ್​ಗೆ ಕಿಡ್ನಿ ಸಮಸ್ಯೆ ಇತ್ತಂತೆ. ಅಂದ್ರೆ ಕ್ಯಾಮರೂನ್ ಗ್ರೀನ್​ ಬಾಡಿಯಲ್ಲಿರೋ ಕಿಡ್ನಿ ರಕ್ತವನ್ನ ಫಿಲ್ಟರ್​ ಮಾಡ್ತಾ ಇಲ್ಲ. ಜೊತೆಗೆ ಈ ಪ್ರಾಬ್ಲಂ ಸೆಕೆಂಡ್ ಸ್ಟೇಜ್​ನಲ್ಲಿ ಇದ್ಯಂತೆ. ಹೇಗೆ ಕ್ಯಾನ್ಸರ್​ ತಗುಲಿದಾಗ ಫಸ್ಟ್ ಸ್ಟೇಜ್, ಸೆಕೆಂಡ್ ಸ್ಟೇಜ್, ಥರ್ಡ್ ಸ್ಟೇಜ್ ಅಂತಾ ಇರುತ್ತೋ ಅದೇ ರೀತಿ, ಕ್ಯಾಮರೂನ್ ಗ್ರೀನ್ ಎದುರಿಸ್ತಿರೋ ಕಿಡ್ನಿಗೆ ಸಂಬಂಧಿಸಿದ ರೋಗದಲ್ಲೂ ವಿವಿಧ ಹಂತಗಳಿವೆ. ಈಗ ಕ್ಯಾಮರೂನ್ ಗ್ರೀನ್ 2ನೇ ಸ್ಟೇಜ್​​ನಲ್ಲಿದ್ದಾರೆ. ಅಂದ್ರೆ ಕ್ಯಾಮರೂನ್ ಕಿಡ್ನಿ 60 ಪರ್ಸೆಂಟ್​​ನಷ್ಟು ಮಾತ್ರ ಕೆಲಸ ಮಾಡುತ್ತೆ. ನಮ್ಮ ನಿಮ್ಮೆಲ್ಲರ ದೇಹದಲ್ಲಿರೋ ರಕ್ತದಲ್ಲಿ ಅಮೋನಿಯಾ ಅಂಶ ಇರುತ್ತೆ. ಈ ಅಮೋನಿಯಾ ದೇಹಕ್ಕೆ ಒಳ್ಳೆಯದಲ್ಲ. ಅದನ್ನ ಶುದ್ಧೀಕರಿಸುವ ಕೆಲಸವನ್ನ ಕಿಡ್ನಿ ಮಾಡುತ್ತೆ. ರಕ್ತದಲ್ಲಿರುವ ಕಲ್ಮಶವನ್ನ ಫಿಲ್ಟರ್​ ಮಾಡೋ ಕೆಲಸವನ್ನ ಕಿಡ್ನಿ ಮಾಡುತ್ತೆ. ಬಳಿಕ ಯುರೀನ್ ಮೂಲಕ ಹೊರ ಹೋಗುತ್ತೆ. ಆದ್ರೆ ಕ್ಯಾಮರೂನ್ ಗ್ರೀನ್ ಕಿಡ್ನಿ ಬ್ಲಡ್​​ನ್ನ ಫಿಲ್ಟರ್ ಮಾಡ್ತಾನೆ ಇಲ್ಲ. ಇದ್ರಿಂದಾಗಿ ಕ್ಯಾಮರೂನ್ ದೇಹದಲ್ಲಿ ಪ್ರೊಟೀನ್ ಅಂಶವೂ ಕಡಿಮೆಯಿದೆ. ಬೇಗನ ಸುಸ್ತಾಗುತ್ತೆ. ಎಲ್ಲರಿಗೂ ಇರುವಷ್ಟು ಎನರ್ಜಿ ಇರೋದಿಲ್ಲ. ಒಂದು ವೇಳೆ ಈ ಡಿಸೀಸ್ 5ನೇ ಸ್ಟೇಜ್ ತಲುಪಿದ್ರೆ ಕ್ಯಾಮರೂನ್ ಗ್ರೀನ್ ಕಿಡ್ನಿ ಟ್ರಾನ್ಸ್​ಪ್ಲ್ಯಾಂಟ್ ಮಾಡಬೇಕಾಗುತ್ತೆ. ಇಲ್ಲಾ ಆಗಾಗ ಡಯಾಲಿಸಿಸ್​ಗೆ ಒಳಗಾಗಬೇಕಾಗುತ್ತೆ. ಸದ್ಯ ಸೆಕೆಂಡ್​ ಸ್ಟೇಜ್​​ನಲ್ಲಿರೋ ಕ್ಯಾಮರೂನ್ ಗ್ರೀನ್ ಭವಿಷ್ಯದಲ್ಲಿ 5ನೇ ಸ್ಟೇಜ್​​ಗೆ ತಲುಪಿಯೇ ತಲುಪುತ್ತಾರೆ. ಇದನ್ನ ಕಂಪ್ಲೀಟ್ ಆಗಿ ಸ್ಟಾಪ್​​ ಮಾಡೋಕೆ ಅಂದ್ರೆ ಪರ್ಮನೆಂಟ್ ಸೊಲ್ಯೂಷನ್ ಅಂತೂ ಇಲ್ವಂತೆ. ಹೀಗಾಗಿ ಸದ್ಯ ಕ್ಯಾಮರೂನ್​ ಗ್ರೀನ್​ಗ ಇರೋದು ಒಂದೇ ಆಪ್ಷನ್. ತಮ್ಮ ಕಿಡ್ನಿ ಬಗ್ಗೆ ಎಚ್ಚರಿಕೆ ವಹಿಸಲೇಬೇಕು. ರೋಗ 5ನೇ ಸ್ಟೇಜ್​​ಗೆ ತಲುಪೋ ಪ್ರಾಸೆಸ್​​​ನ್ನ ಸ್ಲೋ ಮಾಡಬೇಕಷ್ಟೆ. ಹೀಗಾಗಿ ಕ್ಯಾಮರೂನ್ ಗ್ರೀನ್ ಕ್ರಿಕೆಟ್ ವಿಚಾರದಲ್ಲೂ ಹೆಚ್ಚು ರಿಸ್ಕ್ ತೆಗೆದುಕೊಳ್ಳುವಂತೆ ಇಲ್ಲ. ಆಗಾಗ ರೆಸ್ಟ್ ಬೇಕೇ ಬೇಕಾಗುತ್ತೆ.

IPL ಆಡಲ್ವಾ ಕ್ಯಾಮರೂನ್​ ಗ್ರೀನ್?

ಈಗ ಆರ್​ಸಿಬಿ ಫಾಲೋವರ್ಸ್​ಗಳಿಗಿರೋ ಪ್ರಶ್ನೆ ಇದೇ.. 17.5 ಕೋಟಿ ಕೊಟ್ಟು ಕ್ಯಾಮರೂನ್ ಗ್ರೀನ್​​ರನ್ನ ಆರ್​​ಸಿಬಿ ಕ್ಯಾಂಪ್​ಗೆ ವೆಲ್​​ಕಮ್ ಮಾಡಿಯಾಗಿದೆ. ಇನ್ನು ಆಡಿಲ್ಲ ಅಂದ್ರೆ ಕಥೆಯೇನು? ಸದ್ಯಕ್ಕಂತೂ ನೋ ವರಿ. ಕ್ಯಾಮರೂನ್ ಗ್ರೀನ್ ಐಪಿಎಲ್ ಆಗಲಿ ಆಸ್ಟ್ರೇಲಿಯಾ ಪರವೇ ಆಗಲಿ ಕ್ರಿಕೆಟ್​​ ಆಡೋದಿಲ್ಲ ಅಂತಾ ಎಲ್ಲೂ ಹೇಳಿಲ್ಲ. ಈಗಿನವರೆಗೆ ಕ್ಯಾಮರೂನ್ ಗ್ರೀನ್​​ಗೆ ಕಿಡ್ನಿ ಪ್ರಾಬ್ಲಂ ಅವರ ಪರ್ಫಾಮೆನ್ಸ್​​ ಮೇಲೆ ಎಫೆಕ್ಟ್ ಆಗಿಲ್ವಂತೆ. ಹೀಗಾಗಿ 2024ರ ಐಪಿಎಲ್​​​ನಲ್ಲಿ ಆರ್​ಸಿಬಿ ಪರ ಕ್ಯಾಮರೂನ್ ಆಡೋದಂತೂ ಗ್ಯಾರಂಟಿ. ಈ ಬಗ್ಗೆ ಯಾವುದೇ ಡೌಟ್ ಬೇಡ. ಒಂದು ವೇಳೆ ತಮ್ಮ ಕಿಡ್ನಿ ಅಷ್ಟೊಂದು ಸಿವಿಯರ್ ಆಗಿರ್ತಿದ್ರೆ, ಆಡೋಕೆ ಸಾಧ್ಯವೇ ಇಲ್ಲ ಅನ್ನೋದಾಗಿದ್ರೆ ಕ್ಯಾಮರೂನ್ ಗ್ರೀನ್ 17.5 ಕೋಟಿಯ ಟ್ರೇಡ್ ಡೀಲ್​ಗೆ ಒಪ್ಪಿಕೊಳ್ತಾರೆ ಇರ್ತಿರಲಿಲ್ಲ. ಕಿಡ್ನಿ ಸಮಸ್ಯೆ ಇದೆ, ಸೆಕೆಂಡ್​ ಸ್ಟೇಜ್​​ನಲ್ಲಿ ಇದ್ದೀನಿ ಅನ್ನೋದು ಕ್ಯಾಮರೂನ್ ಗ್ರೀನ್​ಗೆ ಈ ಹಿಂದೆಯೇ ಗೊತ್ತಿತ್ತು. ಆದ್ರೆ ಈಗಷ್ಟೇ ಬಹಿರಂಗವಾಗಿ ಅದನ್ನ ಹೇಳಿಕೊಂಡಿದ್ದಾರೆ ಅಷ್ಟೇ.

ಆದ್ರೆ ಆರ್​ಸಿಬಿ ಇಲ್ಲಿ ಇನ್ನೊಂದು ಚಾಲೆಂಜ್​ ಎದುರಿಸ್ತಾ ಇದೆ. ಡಿಸೆಂಬರ್​ 19ಕ್ಕೆ ಐಪಿಎಲ್​​ ಆಕ್ಷನ್ ನಡೀತಾ ಇದೆ. ಆರ್​ಸಿಬಿ ಒಟ್ಟು 11 ಪ್ಲೇಯರ್ಸ್​ಗಳನ್ನ ಈಗಾಗ್ಲೇ ರಿಲೀಸ್ ಮಾಡಿದೆ. ಪೇಸ್​​ ಬೌಲರ್ ಜಾಶ್ ಹೇಜಲ್​​​ವುಡ್ ಇಲ್ಲ, ಸ್ಪಿನ್ನರ್ ಕಂ ಬ್ಯಾಟ್ಸ್​ಮನ್ ಹಸರಂಗ ಕೂಡ ಇಲ್ಲ. ಇನ್ನೂ ಆರು ಸ್ಲಾಟ್​ಗಳನ್ನ ಆರ್​ಸಿಬಿ ಭರ್ತಿ ಮಾಡಬೇಕಿದೆ. ರಾಯಲ್​​ ಚಾಲೆಂಜರ್ಸ್ ಬೆಂಗಳೂರು ಪರ್ಸ್​ನಲ್ಲಿರೋದು 23.25 ಕೋಟಿ ರೂಪಾಯಿ. ಈ ಬಜೆಟ್​ನಲ್ಲಿ ಒಟ್ಟು 6 ಮಂದಿ ಪ್ಲೇಯರ್ಸ್​​ಗಳನ್ನ ಪರ್ಚೇಸ್ ಮಾಡಬೇಕು. ದಿನೇಶ್ ಕಾರ್ತಿಕ್​ಗೆ ಬ್ಯಾಕ್​​ಅಪ್​ ಆಗಿ ವಿಕೆಟ್​​ ಕೀಪರ್​ನ ಅಗತ್ಯ ಕೂಡ ಇದೆ. ಇನ್ನು ಸ್ಪಿನ್ನರ್​ ವಿಚಾರಕ್ಕೆ ಬಂದ್ರೆ ಮತ್ತೆ ಹಸರಂಗರನ್ನೇ ಕಡಿಮೆ ಮೊತ್ತಕ್ಕೆ ಪರ್ಚೇಸ್ ಮಾಡಿದ್ರೂ ಆಶ್ಚರ್ಯ ಇಲ್ಲ. ಈಗ ರಿಲೀಸ್ ಮಾಡಿದ್ರೂ ಆಕ್ಷನ್ ವೇಳೆ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಾರದು ಅಂತೇನಿಲ್ಲ. ಇನ್ನು ಹೇಜಲ್​ವುಡ್​ರನ್ನ ರಿಲೀಸ್ ಮಾಡಿರೋದ್ರಿಂದ ಒಬ್ಬ ಎಕ್ಸ್​​ಪರ್ಟ್ ಡೆತ್ ಬೌಲರ್​ನ ಅಗತ್ಯ ಕೂಡ ಇದೆ. ಓಪನಿಂಗ್​ ಸ್ಪೆಲ್​​ನಲ್ಲಿ ಮೊಹಮ್ಮದ್ ಸಿರಾಜ್​ಗೆ ಕಂಪನಿ ಕೊಡುವಂಥಾ ಫಾಸ್ಟ್ ಬೌಲರ್​ ಬೇಕಿದೆ. ಟೋಟಲಿ,​ ವಿಕೆಟ್ ಕೀಪರ್, ಸ್ಪಿನ್ನರ್ ಮತ್ತು ಒಬ್ಬ ಡೆತ್ ಬೌಲರ್.. ಒಟ್ಟು ಮೂವರು ಕೀ ಪ್ಲೇಯರ್ಸ್ ಬೇಕೇಬೇಕು. ಯಾವಾಗಲೂ ಆರ್​ಸಿಬಿ ಬ್ಯಾಟಿಂಗ್ ಲೈನ್​ಅಪ್ ಸ್ಟ್ರಾಂಗ್ ಆಗಿರುತ್ತೆ. ಆದ್ರೆ ಕಳೆದ ಒಂದು ದಶಕದಿಂದ ಬೌಲಿಂಗೇ ಆರ್​ಸಿಬಿಯ ವೀಕ್ನೆಸ್. ಆದ್ರೀಗ ಭಾರಿ ಹಣ ಸುರಿದು ಟಾಪ್​ ಕ್ಲಾಸ್​ ಬೌಲರ್​ನ್ನ ಖರೀದಿಸೋದು ಅನುಮಾನವೇ. ಯಾಕಂದ್ರೆ ಪರ್ಸ್​ನಲ್ಲಿರೋದು 23.25 ಕೋಟಿ. ಹೀಗಾಗಿ ಆಕ್ಷನ್ ವೇಳೆ ಆರ್​ಸಿಬಿ ಯಾರಿಗೆ ಬಲೆ ಬೀಸುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.

Shwetha M