ಐಪಿಎಲ್ ಫೈನಲ್ ಪಂದ್ಯಕ್ಕೆ ಮ್ಯಾಚ್ ಫಿಕ್ಸಿಂಗ್ – ಗುಜರಾತ್ ಟೈಟಾನ್ಸ್ ವಿನ್ನರ್.. ಚೆನ್ನೈ ಸೂಪರ್ ಕಿಂಗ್ಸ್ ರನ್ನರ್ ಅಪ್?

ಐಪಿಎಲ್ ಫೈನಲ್ ಪಂದ್ಯಕ್ಕೆ ಮ್ಯಾಚ್ ಫಿಕ್ಸಿಂಗ್ – ಗುಜರಾತ್ ಟೈಟಾನ್ಸ್ ವಿನ್ನರ್.. ಚೆನ್ನೈ ಸೂಪರ್ ಕಿಂಗ್ಸ್ ರನ್ನರ್ ಅಪ್?

ಐಪಿಎಲ್ ಗೆ ಮತ್ತೆ ಮ್ಯಾಚ್ ಫಿಕ್ಸಿಂಗ್ ಭೂತ ವಕ್ಕರಿಸಿಕೊಂಡಿದೆ. ಫೈನಲ್ ಪಂದ್ಯಕ್ಕೂ ಮುನ್ನವೇ ವಿನ್ನರ್, ರನ್ನರ್ ಅಪ್ ಯಾರೆಂಬ ಸುದ್ದಿ ಹರಿದಾಡುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಫೈನಲ್ ಪಂದ್ಯ ನಡೆಯೋ ಮುನ್ನವೇ ಮ್ಯಾಚ್ ಫಿಕ್ಸಿಂಗ್ ಆಗಿದೆಯಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿದ್ದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನ ಬಿಗ್ ಸ್ಕ್ರೀನ್​ನಲ್ಲಿ ಕಾಣಿಸಿಕೊಂಡ ಬರಹ​.

ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಪಂದ್ಯವೇ ನಡೆದಿಲ್ಲ. ಅದಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ರನ್ನರ್ ಅಪ್ ಎಂಬ ಬರಹ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದ್ದು, ಜೊತೆಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೌದು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ಗುಜರಾತ್‌ ಟೈಟಾನ್ಸ್‌ (GT) ನಡುವಿನ ಫೈನಲ್ಸ್‌ (IPL Finals) ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದಾಗಿದೆ. ಸೋಮವಾರವೂ (ಮೇ 29) ಮಳೆಯ ಆರ್ಭಟ ಮುಂದುವರಿದರೆ, ಲೀಗ್‌ ರ‍್ಯಾಂಕಿಂಗ್‌ ಪಟ್ಟಿಯ ಆಧಾರದ ಮೇಲೆ ಚಾಂಪಿಯನ್ಸ್‌ ಪಟ್ಟ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ : ಸಿವಿಲ್ ಇಂಜಿನಿಯರ್ ಕ್ರಿಕೆಟರ್ ಆಗಿದ್ದೇ ರೋಚಕ – ಐಪಿಎಲ್‌ನಲ್ಲಿ ‘ಆಕಾಶ್ ಮಧ್ವಾಲ್’ ಕಮಾಲ್

ಮೇ 29 (ಸೋಮವಾರ)ರಂದು ಸಂಜೆ 7:30ಕ್ಕೆ ಫೈನಲ್ ಮ್ಯಾಚ್ ಆರಂಭವಾಗಲಿದೆ. ಈ ನಡುವೆ ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್‌ ಹೊರಬಿದ್ದಂತೆ ಕಾಣ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎಲ್‌ಇಡಿ ಸ್ಕ್ರೀನ್‌ನ ಫೋಟೋವೊಂದು ಸದ್ದು ಮಾಡುತ್ತಿದೆ. ಭಾನುವಾರ ರಾತ್ರಿ ಮಳೆಯಿಂದಾಗಿ ಪಂದ್ಯವನ್ನ ರದ್ದು ಮಾಡಲಾಯಿತು. ಈ ವೇಳೆ ಕ್ರಿಕೆಟ್‌ ವೀಕ್ಷಣೆಗೆ ಇರಿಸಲಾಗಿದ್ದ ಎಲ್‌ಇಡಿ ಸ್ಕ್ರೀನ್‌ಬೋರ್ಡ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ರನ್ನರ್‌ ಅಪ್‌ ಎಂದು ತೋರಿಸಲಾಗುತ್ತಿತ್ತು. ಈ ಫೋಟೋ ಸಖತ್‌ ವೈರಲ್‌ ಆಗ್ತಿದೆ. ಇದರಿಂದ ಮತ್ತೆ ಕ್ರಿಕೆಟ್‌ ಅಭಿಮಾನಿಗಳನ್ನ ಗೊಂದಲಕ್ಕೀಡು ಮಾಡಿದೆ, ಜೊತೆಗೆ ಮ್ಯಾಚ್‌ ಫಿಕ್ಸಿಂಗ್‌ ಸದ್ದು ಕೇಳಿಬರುತ್ತಿದೆ.

ಭಾನುವಾರದಂತೆ ಸೋಮವಾರವೂ ಸಹ ಮಳೆ ಮುಂದುವರಿದು ರಾತ್ರಿ 9:40ರ ಒಳಗೆ ಬಿಡುವು ಸಿಕ್ಕರೆ ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯಲಿದೆ. 5 ಓವರ್‌ಗಳ ಪಂದ್ಯವನ್ನಾಡಿಸಲು ರಾತ್ರಿ 12:06ರ ವರೆಗೆ ಸಮಯವಿರಲಿದೆ. ಅದೂ ಸಾಧ್ಯವಾಗದಿದ್ದಲ್ಲಿ ಸೂಪರ್‌ ಓವರ್‌ ಆಡಿಸಲು ರಾತ್ರಿ 12:50ರ ವರೆಗೆ ಸಮಯವಿರಲಿದೆ. ಒಂದು ವೇಳೆ ಸಂಪೂರ್ಣವಾಗಿ ಪಂದ್ಯ ರದ್ದಾದರೆ ಲೀಗ್‌ ಹಂತದ ಮುಕ್ತಾಯಕ್ಕೆ ಹೆಚ್ಚು ಅಂಕ ಪಡೆದ ತಂಡವನ್ನ ಚಾಂಪಿಯನ್‌ ಆಗಿ ಘೋಷಣೆ ಮಾಡಲಾಗುತ್ತದೆ.

ಐಪಿಎಲ್‌ 14 ಲೀಗ್‌ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಗುಜರಾತ್‌ ಟೈಟಾನ್ಸ್‌ +0.809 ರನ್‌ರೇಟ್‌ನೊಂದಿಗೆ 20 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. ಆದ್ರೆ 14ರಲ್ಲಿ 8ರಲ್ಲಿ ಗೆಲುವು ಸಾಧಿಸಿರುವ‌ ಚೆನ್ನೈ ಸೂಪರ್‌ ಕಿಂಗ್ಸ್‌ +0.652 ರನ್‌ರೇಟ್‌ನೊಂದಿಗೆ 17 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಲೀಗ್‌ ಹಂತದ ಪಾಯಿಂಟ್ಸ್‌ ಆಧರಿಸಿ ಚಾಂಪಿಯನ್ಸ್‌ ನಿರ್ಧರಿಸುವುದಾದರೆ, ಗುಜರಾತ್‌ ಟೈಟಾನ್ಸ್‌ ಸತತ 2ನೇ ಬಾರಿಗೆ ಚಾಂಪಿಯನ್‌ ಕಿರೀಟ ಧರಿಸಲಿದೆ.

suddiyaana