ಗೆದ್ದರೂ ಗರಂ ಆದ ‘ಕೂಲ್’ ಕ್ಯಾಪ್ಟನ್.! –ಸಿಎಸ್‌ ಕೆ ಬೌಲರ್‌ಗಳಿಗೆ ಧೋನಿ ಕೊಟ್ಟ ಎಚ್ಚರಿಕೆಯೇನು?

ಗೆದ್ದರೂ ಗರಂ ಆದ ‘ಕೂಲ್’ ಕ್ಯಾಪ್ಟನ್.! –ಸಿಎಸ್‌ ಕೆ ಬೌಲರ್‌ಗಳಿಗೆ ಧೋನಿ ಕೊಟ್ಟ ಎಚ್ಚರಿಕೆಯೇನು?

ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪಂದ್ಯದ ನಂತರ ಸಿಟ್ಟಾಗಿದ್ದಾರಾ..?. ಹೀಗೊಂದು ಪ್ರಶ್ನೆ ಮೂಡಲೂ ಕಾರಣವೂ ಇದೆ. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಎಂಎಸ್ ಧೋನಿ, ಬೌಲರ್​ಗಳು ನೀಡಿದ ಪ್ರದರ್ಶನದಿಂದ ಕೋಪಗೊಂಡಿದ್ದಾರೆ. ನೀವು ಹೊಸ ನಾಯಕನ ಅಡಿಯಲ್ಲಿ ಆಟವಾಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಎಂಥದ್ದೇ ಪರಿಸ್ಥಿತಿಯಲ್ಲೂ ಕೂಲ್ ಆಗಿರುವ ಧೋನಿ ಏಪ್ರಿಲ್ 3ರಂದು ನಡೆದ ಪಂದ್ಯದಲ್ಲಿ ಗೆದ್ದರೂ ಕೂಡಾ ಹೀಗೆ ಖಾರವಾಗಿ ಮಾತಾಡಿದ್ದಾರೆ.

ಇದನ್ನೂ ಓದಿ: ಖಾತೆ ತೆರೆಯುವ ಹುಮ್ಮಸ್ಸಲ್ಲಿ ಧೋನಿ ಟೀಮ್ ಸಿಎಸ್‌ಕೆ- ಟಾಪರ್ ಆಗೋ ಉತ್ಸಾಹದಲ್ಲಿ ಎಲ್ಎಸ್‌ಜಿ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ರಲ್ಲಿ  ಸೋಲಿನ ಮೂಲಕ ಅಭಿಯಾನ ಆರಂಭಿಸಿತ್ತು. ಆದರೆ, ದ್ವಿತೀಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಸೋಮವಾರ ಚೆನ್ನೈನ ಎಮ್​ಎ ಚಿದಂಬರಂ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ 12 ರನ್​ಗಳ ರೋಚಕ ಗೆಲುವು ಕಂಡಿತು. ಎದುರಾಳಿಗೆ ಗೆಲ್ಲಲು 200ಕ್ಕೂ ಹೆಚ್ಚು ರನ್​ಗಳ ಗುರಿ ನೀಡಿದ್ದರೂ ಎಲ್​​ಎಸ್​ಜಿ ಟಾರ್ಗೆಟ್ ಹತ್ತಿರ ಬಂದ ನಂತರವೇ ಸೋಲೊಪ್ಪಿಕೊಂಡಿದ್ದು. ಇದಕ್ಕೆ ಕಾರಣ ಸಿಎಸ್‌ಕೆ ತಂಡದ ಬೌಲರ್‌ಗಳು ಅತಿಯಾಗಿ ಕೊಟ್ಟ ಹೆಚ್ಚುವರಿ ರನ್‌ಗಳು.  ಇದರಿಂದ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕೋಪಗೊಂಡಿದ್ದು ತಮ್ಮ ತಂಡದ ಬೌಲರ್​ಗಳ ಮೈಚಳಿ ಬಿಡಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಧೋನಿ, ಬೌಲರ್​ಗಳು ನೀಡಿದ ಪ್ರದರ್ಶನದಿಂದ ಕೋಪಗೊಂಡಿದ್ದಾರೆ. ಈ ಪಂದ್ಯದಲ್ಲಿ ಸಿಎಸ್​ಕೆ ಬೌಲರ್‌ಗಳು ಅತಿಯಾಗಿ ವೈಡ್ ಹಾಗೂ ನೋ ಬಾಲ್‌ಗಳನ್ನು ಎಸೆದಿದ್ದಾರೆ. ದೀಪಕ್ ಚಹರ್ ನಾಲ್ಕು ಓವರ್‌ಗಳ ಬೌಲಿಂಗ್‌ನಲ್ಲಿ ಒಂದೂ ವಿಕೆಟ್ ಪಡೆಯದೆ 55 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅಲ್ಲದೆ 5 ವೈಡ್ ಎಸೆತಗಳನ್ನು ಎಸೆದಿದ್ದರು. ಒಟ್ಟಾರೆಯಾಗಿ ಚೆನ್ನೈ ಬೌಲರ್​ಗಳು 3 ನೋ ಬಾಲ್‌ಗಳು ಮತ್ತು 13 ವೈಡ್‌ಗಳನ್ನು ಬಿಟ್ಟುಕೊಟ್ಟರು. ಇದರಿಂದ ಸಿಟ್ಟಾಗಿರುವ ಧೋನಿ, ಪಂದ್ಯದ ಮುಕ್ತಾಯದ ಬಳಿಕ ಎಚ್ಚರಿಕೆ ನೀಡಿದ್ದಾರೆ. ನೋ ಬಾಲ್, ವೈಡ್​ಗಳನ್ನು ಎಸೆಯುವುದನ್ನು ನಿಲ್ಲಿಸಿ, ಇಲ್ಲವೇ ಹೊಸ ನಾಯಕನ ಅಡಿಯಲ್ಲಿ ಆಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನೋ ಬಾಲ್ ಮತ್ತು ವೈಡ್‌ಗಳನ್ನು ಬೌಲ್ ಮಾಡಿ ಹೆಚ್ಚುವರಿ ಎಸೆತಗಳನ್ನು ಹಾಕುತ್ತಿದ್ದೇವೆ. ಅವುಗಳನ್ನು ಕಡಿತಗೊಳಿಸಬೇಕಾಗಿದೆ. ಇಲ್ಲದಿದ್ದರೆ ಆಟದ ಮೇಲೆ ಪರಿಣಾಮ ಬೀರಲಿದೆ. ಇದು ಮುಂದುವರಿಯಬಾರದು. ಬೌಲರ್​ಗಳು ನೋಬಾಲ್ ಇಲ್ಲದೆ, ವೈಡ್‌ಗಳನ್ನು ಕಡಿಮೆ ಮಾಡಿಕೊಂಡು ಬೌಲಿಂಗ್ ನಡೆಸಬೇಕು. ಇಲ್ಲವಾದರೆ ಅವರು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ, ಎಂದು ಧೋನಿ ಹೇಳಿದ್ದಾರೆ.

suddiyaana