ಸಿಲಿಕಾನ್ ಸಿಟಿಯಲ್ಲಿ ಐಫೋನ್ ತಯಾರಿಕಾ ಕಾರ್ಖಾನೆ ? -300 ಎಕರೆ ಪ್ರದೇಶದಲ್ಲಿ ಸ್ಥಾಪನೆ ಸಾಧ್ಯತೆ

ಸಿಲಿಕಾನ್ ಸಿಟಿಯಲ್ಲಿ ಐಫೋನ್ ತಯಾರಿಕಾ ಕಾರ್ಖಾನೆ ? -300 ಎಕರೆ ಪ್ರದೇಶದಲ್ಲಿ ಸ್ಥಾಪನೆ ಸಾಧ್ಯತೆ

ರಾಜ್ಯ ರಾಜಧಾನಿ ಬೆಂಗಳೂರಿನ ಬಳಿ ಐಫೋನ್ ತಯಾರಿಕಾ ಕಾರ್ಖಾನೆ ಸ್ಥಾಪನೆಯಾಗುವ ಸಾಧ್ಯತೆ ಇದೆ. ಆ್ಯಪಲ್ ಸಂಸ್ಥೆಯ ಪಾಟ್ನರ್ ಆಗಿರುವಂಥಾ ಫಾಕ್ಸ್​ಕಾನ್ ಟೆಕ್ನಾಲಜಿ ಗ್ರೂಪ್ ಐಪೋನ್​​ಗಳನ್ನ ತಯಾರಿಸುತ್ತೆ. ಇದೀಗ ಫಾಕ್ಸ್​ಕಾನ್ ಭಾರತದಲ್ಲಿ 700 ಮಿಲಿಯನ್ ಡಾಲರ್​ ಮೊತ್ತದ ಕಾರ್ಖಾನೆ ಸ್ಥಾಪಿಸೋಕೆ ಮುಂದಾಗಿದೆ. ಬೆಂಗಳೂರು ಏರ್​​ಪೋರ್ಟ್​ ಬಳಿ 300 ಎಕರೆ ಪ್ರದೇಶದಲ್ಲಿ ಕಾರ್ಖಾನೆಯನ್ನ ನಿರ್ಮಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಈ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ಕೂಡ ನಿರ್ಮಾಣ ಮಾಡಬಹುದು ಅನ್ನೋ ಮಾಹಿತಿ ಸಿಕ್ಕಿದೆ. ಬೆಂಗಳೂರಿನ ಬಳಿ ಐಫೋನ್ ನಿರ್ಮಾಣದ ಕಾರ್ಖಾನೆ ಸ್ಥಾಪನೆಯಾಗಿದ್ದೇ ಆದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರಕುವ ನಿರೀಕ್ಷೆ ಇದೆ. ಸದ್ಯ ಚೀನಾದಲ್ಲಿ ಹೆಚ್ಚಿನ ಪ್ರಮಾಣದ ಐಫೋನ್​​ಗಳನ್ನ ಉತ್ಪಾದಿಸಲಾಗ್ತಿದೆ. ಆದ್ರೀಗ ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು, ಹೀಗಾಗಿ ಅಮೆರಿಕ ಮೂಲದ ಆ್ಯಪಲ್ ಮತ್ತು ಫಾಕ್ಸ್​ಕಾನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡೋಕೆ ಆಸಕ್ತಿ ತೋರಿವೆ.

suddiyaana