300 ಅಡಿ ಆಳಕ್ಕೆ  ಬಿದ್ದ ಕಾರು – ದಂಪತಿಯ ಜೀವ ಉಳಿಸಿದ ಐಫೋನ್

300 ಅಡಿ ಆಳಕ್ಕೆ  ಬಿದ್ದ ಕಾರು – ದಂಪತಿಯ ಜೀವ ಉಳಿಸಿದ ಐಫೋನ್

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಏಂಜಲೀಸ್ ಫಾರೆಸ್ಟ್ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದೆ. ಕಾರು ಪರ್ವತದಿಂದ 300 ಅಡಿ ಕೆಳಗೆ ಬಿದ್ದು, ದಂಪತಿಗಳಿಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.  ಈ ವೇಳೆ ಅವರ ಬಳಿ ಇದ್ದ ಐಫೋನ್ ಜೀವ ಉಳಿಸಿದೆ.

ಹೌದು, ದಂಪತಿ ಏಂಜಲೀಸ್ ಫಾರೆಸ್ಟ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ವೇಳೆ ಸುಮಾರು 300 ಅಡಿ ಆಳಕ್ಕೆ ಬಿದ್ದಿದ್ದಾರೆ. ಆ ವೇಳೆ ಫೋನ್‌ನಲ್ಲಿ ನೆಟ್‌ವರ್ಕ್ ಕೂಡ ಇರಲಿಲ್ಲ. ಆದರೆ ನಂತರ ಐಫೋನ್ 14 ಅವರ ಸಹಾಯಕ್ಕೆ ಬಂದಿದೆ.

ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ವಿವಾದಾತ್ಮಕ ಹೇಳಿಕೆ- ನನ್ನ ಮಾತಲ್ಲಿ ಸತ್ಯಾಂಶವಿದೆ ಎಂದ ಡಿಕೆಶಿ

ಮಾಂಟ್ರೋಸ್ ಸರ್ಚ್ ಆ್ಯಂಡ್ ರೆಸ್ಕ್ಯೂ ತಂಡ ವಿಡಿಯೋವೊಂದನ್ನು ಟ್ವೀಟ್ ಮಾಡಿದೆ. “ಅಪಘಾತದ ಸಮಯದಲ್ಲಿ ಐಫೋನ್‌ನಲ್ಲಿ ಯಾವುದೇ ನೆಟ್‌ವರ್ಕ್ ಇರಲಿಲ್ಲ. ಆದ್ದರಿಂದ ಉಪಗ್ರಹ ಸೇವೆಯ ಮೂಲಕ ತುರ್ತು ಎಸ್ಒಎಸ್ ರಕ್ಷಣಾ ತಂಡವನ್ನು ಸಂಪರ್ಕಿಸಲು ಸಹಾಯ ಮಾಡಿತು. ಉಪಗ್ರಹ ವೈಶಿಷ್ಟ್ಯವು ಆಪಲ್ ರಿಲೇ ಸೆಂಟರ್‌ಗೆ ಸಂದೇಶವನ್ನು ಕಳುಹಿಸಿತು ಮತ್ತು ನಂತರ ಎಲ್​ಎ ಕೌಂಟಿ ಶೆರಿಫ್‌ನ ಇಲಾಖೆಗೆ ಮಾಹಿತಿ ರವಾನಿಸಿದ್ದು, ರಕ್ಷಿಸಲಾಗಿದೆ” ಎಂದು ರಕ್ಷಣಾ ತಂಡ ಟ್ವೀಟ್​ ಮಾಡಿದೆ.

ಐಫೋನ್ 14 ಸರಣಿಯಲ್ಲಿ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವಿದೆ. ಅದು ನಿಮ್ಮ ಕಾರಿಗೆ ಅಪಘಾತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡುತ್ತದೆ. ಇದು ತುರ್ತು ಸಂಖ್ಯೆಯನ್ನು ಸಂಪರ್ಕಿಸುತ್ತದೆ ಮತ್ತು ಸಹಾಯಕ್ಕಾಗಿ ಕರೆ ಮಾಡುತ್ತದೆ. ಇದನ್ನು ಸ್ಯಾಟಲೈಟ್ ಎಸ್ಒಎಸ್ ವೈಶಿಷ್ಟ್ಯ ಎಂದು ಕರೆಯಲಾಗುತ್ತದೆ.

suddiyaana