ಶ್ರೀಮಂತರು ಮತ್ತು ರಾಜಮಹಾರಾಜರಿಗೆ ಮಾತ್ರವೇ ಸೀಮಿತವಾಗಿತ್ತು ಮಿರರ್ – ಕನ್ನಡಿ ಕಂಡು ಹಿಡಿದಿದ್ದೇ ರೋಚಕ

ಶ್ರೀಮಂತರು ಮತ್ತು ರಾಜಮಹಾರಾಜರಿಗೆ ಮಾತ್ರವೇ ಸೀಮಿತವಾಗಿತ್ತು ಮಿರರ್ – ಕನ್ನಡಿ ಕಂಡು ಹಿಡಿದಿದ್ದೇ ರೋಚಕ

ಈಗಂತೂ ಕನ್ನಡಿಯಲ್ಲಿ ಮುಖ ನೋಡಿಕೊಳ್ಳದೆ ಮನೆಯಿಂದ ಹೊರಗೆ ಕಾಲಿಡೋದೇ ಇಲ್ಲ. ಅದ್ರಲ್ಲೂ  ಫಂಕ್ಷನ್ಸ್ ಇದ್ರಂತೂ ಮುಗಿದೇಹೋಯ್ತು. ಗಂಟೆಗಟ್ಟಲೆ ಮಿರರ್ ಬಿಟ್ಟು ಬರೋದೇ ಇಲ್ಲ. ಬದುಕಿನ ಭಾಗವೇ ಆಗಿರುವ ಇಂತಹ ಕನ್ನಡಿಯನ್ನ ಕಂಡು ಹಿಡಿದಿದ್ದು ಯಾರು ಗೊತ್ತಾ. ಈ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಕನ್ನಡಿ ಕೇವಲ ವಸ್ತುವಲ್ಲ. ಹಲವರಿಗೆ ಬೆಸ್ಟ್ ಫ್ರೆಂಡ್. ಕನ್ನಡಿ ಮುಂದೆ ನಿಂತು ತಮ್ಮ ನೋವು, ನಲಿವುಗಳನ್ನೆಲ್ಲಾ ಹೇಳಿಕೊಳ್ತಾರೆ. ಮಿರರ್ ಮುಂದೆ ನಿಂತು ರೀಲ್ಸ್ ಮಾಡೋರಿಗೂ ಏನ್ ಕಮ್ಮಿ ಇಲ್ಲ. ಆದ್ರೆ ಹಿಂದಿನ ಕಾಲದಲ್ಲಿ ಕನ್ನಡಿ ಇರಲಿಲ್ಲ. ಬದಲಾಗಿ ತಿಳಿಯಾದ ನೀರು, ಹೊಳೆಯುವ ಲೋಹ, ನಯವಾದ ಕಲ್ಲುಗಳ ಮೇಲೆ ತಮ್ಮ ಮುಖಗಳನ್ನು ನೋಡಿಕೊಳ್ಳುತ್ತಿದ್ದರು. ಕೆಲವರು ತಾಮ್ರ ಮತ್ತು ಬೆಳ್ಳಿಯ ಪಾತ್ರೆಗಳನ್ನು ಕನ್ನಡಿಗಳಾಗಿ ಬಳಸುತ್ತಿದ್ದರು. ಶ್ರೀಮಂತ ವರ್ಗಕ್ಕೆ ಸೇರಿದವರು ಬೆಳ್ಳಿಯಿಂದ ಮಾಡಿದ ಚಿಕ್ಕ ಕನ್ನಡಿಗಳನ್ನು ಬಳಸುತ್ತಿದ್ದರು.   ಇದಲ್ಲದೇ ಮುಖದ ಅಂದಕ್ಕೆ ಇತರರ ಸಹಾಯವನ್ನು ಬಳಸುತ್ತಿದ್ದರು. ವರ್ಣಚಿತ್ರಕಾರರು ಮೇಲ್ಮೈಯಲ್ಲಿ ನೀರು ಮತ್ತು ತೈಲದ ಪ್ರತಿಬಿಂಬವನ್ನು ನೋಡಿ ವರ್ಣಚಿತ್ರಗಳನ್ನು ರಚಿಸುತ್ತಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಿದೆ.

ಇದನ್ನೂ ಓದಿ : ಬಿಗ್ ಬಾಸ್ ನಲ್ಲೀಗ ‘ಹಳ್ಳಿಕಾರ್ ಒಡೆಯ’ನ ಹವಾ – ಹಳ್ಳಿಕಾರ್ ತಳಿಯ ಬಗ್ಗೆ ಜಗತ್ತಿಗೆ ತಿಳಿಸಲು ದೊಡ್ಮನೆಗೆ ಎಂಟ್ರಿ  

ಕನ್ನಡಿಯನ್ನು 1835 ರಲ್ಲಿ ಕಂಡುಹಿಡಿಯಲಾಯಿತು ಎಂದು ಹೇಳಲಾಗುತ್ತದೆ. ಜರ್ಮನ್ ರಸಾಯನಶಾಸ್ತ್ರಜ್ಞ ಜಸ್ಟಸ್ ವಾನ್ ಲೀಬಿಗ್ ಗಾಜಿನ ಫಲಕದ ಮೇಲ್ಮೈಯಲ್ಲಿ ಲೋಹದ ತೆಳುವಾದ ಪದರವನ್ನು ಅಂದರೆ ಬೆಳ್ಳಿಯನ್ನು ಲೇಪಿಸುವ ಮೂಲಕ ಮನುಷ್ಯನ ಪ್ರತಿಬಿಂಬವನ್ನು ಹೋಲುವ ಕನ್ನಡಿಯನ್ನು ಕಂಡುಹಿಡಿದರು. ಆದರೆ ಆ ಕಾಲದಲ್ಲಿ ಮನೆಯಲ್ಲಿ ಕನ್ನಡಿ ಇಡುತ್ತಿದ್ದುದ್ದು ಕೇವಲ ಐಷಾರಾಮಿ ಜೀವನ ನಡೆಸುವ ಅಂದರೆ ರಾಜ ಮನೆತನದವರು ಮಾತ್ರ. ವಾಸ್ತವವಾಗಿ ಕನ್ನಡಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ಆದಾಗ್ಯೂ, ಇದು 18 ನೇ ಶತಮಾನದವರೆಗೆ ಸಾಮಾನ್ಯ ಜನರಿಗೆ ಲಭ್ಯವಿರಲಿಲ್ಲ. 18 ನೇ ಶತಮಾನದ ನಂತರ, ಕನ್ನಡಿ ತಯಾರಿಕೆಯ ಸುಧಾರಣೆ ಮತ್ತು ಯಾಂತ್ರೀಕರಣವು ಕನ್ನಡಿ ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೂ ಸಿಗುವಂತಾಯಿತು.

Shantha Kumari