ಯುರೋಪ್‌ಗೆ ಮುತ್ತಿಗೆ ಹಾಕಿದ ಇರುವೆಗಳ ಸೈನ್ಯ! – ಇರುವೆ ಮುಟ್ಟಿದ್ದೆಲ್ಲಾ ಸರ್ವನಾಶ!
ನಾವೆಲ್ಲಾ ಕೆಂಪು ಇರುವೆಗಳನ್ನು ನೋಡಿರುತ್ತೇವೆ. ಹಲವರಿಗೆ ಕೆಂಪಿರುವೆಗಳಿಂದ ಕಚ್ಚಿಸಿಕೊಂಡ ಅನುಭವ ಕೂಡ ಇದ್ದೇ ಇರುತ್ತೆ. ಈ ಕೆಂಪು ಇರುವೆ ಜಗತ್ತಿನ ಎಲ್ಲಾ ಕಡೆಗಳಲ್ಲೂ ಇಲ್ಲ. ಭಾರತ, ಅಮೆರಿಕ ಮತ್ತು ಆಸ್ಟ್ರೇಲಿಯಾ ಸೇರಿ ಕೆಲವು ದೇಶಗಳಲ್ಲಷ್ಟೇ ಇವುಗಳು ಕಾಣೋಕೆ ಸಿಗುತ್ತೆ. ಇದು ಒಮ್ಮೆ ಕಚ್ಚಿತು ಅಂದ್ರೆ ಸಿಕ್ಕಾಪಟ್ಟೆ ಉರಿ ಇರುತ್ತೆ. ಆದ್ರೆ ಇದೇ ಕೆಂಪು ಇರುವೆ ಈಗ ಯುರೋಪ್ ರಾಷ್ಟ್ರಗಳಿಗೆ ದೊಡ್ಡ ಕಂಟಕವಾಗಿದೆ.
ಕೆಂಪು ಇರುವೆಗಳ ಸೈನ್ಯ ಯುರೋಪ್ ರಾಷ್ಟ್ರಗಳನ್ನ ವೇಗವಾಗಿ ಆವರಿಸುತ್ತಿದೆ. ಯುರೋಪ್ನ ಪರಿಸರ, ಜನರ ಆರೋಗ್ಯ ಮತ್ತು ಆರ್ಥಿಕತೆಗೂ ಕೆಂಪು ಇರುವೆ ಸವಾಲಾಗಿದೆ. ಯುರೋಪಿಯನ್ನರ ದೇಹ ಅತ್ಯಂತ ಸೂಕ್ಷ್ಮವಾಗಿದ್ದು ಬೇಗನೆ ಅಲರ್ಜಿಗೆ ಒಳಗಾಗುತ್ತಾರೆ. ಈ ಕೆಂಪು ಇರುವೆ ಕಚ್ಚಿ ಯುರೋಪಿನ್ನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ. ಇದ್ರ ಜೊತೆಗೆ ಕೆಂಪು ಇರುವೆ ಬೆಳೆಯನ್ನ ಕೂಡ ನಾಶಪಡಿಸುತ್ತೆ. ಎಲೆ ತಿಂದು ಯುರೋಪ್ನ ಕೃಷಿ ಆರ್ಥಿಕತೆ ಕಂಟಕ ಎದುರಾಗಿದೆ.
ಇದನ್ನೂ ಓದಿ: ನಿಫಾ ವೈರಸ್ ಭೀತಿ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಪತ್ತೆ!
ಇಷ್ಟೇ ಅಲ್ಲ, ಕಂಪ್ಯೂಟರ್, ಕಾರು ಸೇರಿದಂತೆ ಎಲೆಕ್ಟ್ರಿಕಲ್ ಉಪಕರಣಗಳ ಒಳಗೆ ನುಗ್ಗಿ ಅವುಗಳನ್ನ ಹಾಳು ಮಾಡಬಲ್ಲದು. ಯುರೋಪ್ ರಾಷ್ಟ್ರಗಳ ಪೈಕಿ ಇಟಲಿಯಲ್ಲಿ ಕೆಂಪು ಇರುವೆಗಳ ಪ್ರಮಾಣ ತೀವ್ರಗೊಳ್ಳುತ್ತಿದೆ. ಈ ಕೆಂಪು ಇರುವೆಗಳ ಮೂಲ ದಕ್ಷಿಣ ಅಮೆರಿಕವಾದ್ರೂ ನಾನಾ ಸ್ವರೂಪಗಳಲ್ಲಿ ಸ್ಥಳಾಂತರಗೊಂಡಿವೆ.. ಸಸ್ಯಗಳ ಆಮದು, ರಫ್ತು ಹೆಚ್ಚಾಗಿರೋದ್ರಿಂದ ಹಡಗುಗಗಳ ಮೂಲಕವೂ ಯುರೋಪ್ ಸೇರಿ ವಿವಿಧ ದೇಶಗಳಿಗೆ ಸಸ್ಯಗಳ ಜೊತೆ ಈ ಕೆಂಪು ಇರುವೆಗಳೂ ರವಾನೆಯಾಗುತ್ತಿವೆ.