‘ರಷ್ಯಾ ಅಧ್ಯಕ್ಷನಿಂದ ಉಕ್ರೇನ್ ಮಕ್ಕಳ ಅಪಹರಣ’ – ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್..!

‘ರಷ್ಯಾ ಅಧ್ಯಕ್ಷನಿಂದ ಉಕ್ರೇನ್ ಮಕ್ಕಳ ಅಪಹರಣ’ – ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್..!

ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಕಳೆದ ಫೆಬ್ರವರಿ 24ಕ್ಕೆ ಒಂದು ವರ್ಷವಾಗಿದೆ. ಆದರೂ ಎರಡು ದೇಶಗಳ ನಡುವಿನ ಸಮರ ಮುಂದುವರಿದಿದೆ. ಇದೀಗ ಉಕ್ರೇನ್‌ನಲ್ಲಿ (Ukraine) ನಡೆದ ಮಕ್ಕಳ ಅಪಹರಣ ಹಾಗೂ ಯುದ್ಧ ಅಪರಾಧಗಳ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಬಂಧಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ವಾರೆಂಟ್ ಹೊರಡಿಸಿದೆ.

ಇದನ್ನೂ ಓದಿ : ವರ್ಷ ಕಳೆದ್ರೂ ನಿಲ್ಲುತ್ತಿಲ್ಲ ಪುಟಿನ್ ಯುದ್ಧದಾಹ – ರಷ್ಯಾ ಅಧ್ಯಕ್ಷನ ಹತ್ಯೆಗೆ ಆಪ್ತರೇ ಇಟ್ಟರಾ ಮುಹೂರ್ತ..?

ಉಕ್ರೇನಿನಿಂದ ಮಕ್ಕಳನ್ನು ಅಕ್ರಮವಾಗಿ ಗಡಿಪಾರು ಮಾಡುವ ಮತ್ತು ರಷ್ಯಾದ ಒಕ್ಕೂಟಕ್ಕೆ ಜನರನ್ನು ಅಕ್ರಮವಾಗಿ ವರ್ಗಾಯಿಸಿದ ಯುದ್ಧಾಪರಾಧಕ್ಕೆ (War Crimes) ಪುಟಿನ್ ಜವಾಬ್ದಾರಿಯಾಗಿದ್ದಾರೆ. ಜನರನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿರುವುದಕ್ಕೆ ಸಮಂಜಸವಾದ ಆಧಾರಗಳಿವೆ ಎಂದು ನ್ಯಾಯಾಲಯವು ತನ್ನ ವಾರೆಂಟ್‌ನಲ್ಲಿ ತಿಳಿಸಿದೆ. ರಷ್ಯಾ ಆಕ್ರಮಿತ ಉಕ್ರೇನ್ ನ ಪ್ರಾಂತ್ಯಗಳಿಂದ ಮಕ್ಕಳನ್ನು ಅಕ್ರಮವಾಗಿ, ಕಾನೂನು ಬಾಹಿರವಾಗಿ ರಷ್ಯಾಕ್ಕೆ ಬಲವಂತವಾಗಿ ಕದ್ದೊಯ್ದಿರುವ ಆರೋಪವು, ಹಲವಾರು ವಿಚಾರಣೆಗಳಲ್ಲಿ ಸಾಬೀತಾಗಿರುವುದರಿಂದ ಈ ವಾರಂಟ್ ಜಾರಿಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಹಾಗೇ ರಷ್ಯಾದ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನೂ ಬಂಧಿಸಲು ವಾರೆಂಟ್ ಹೊರಡಿಸಿದೆ. ರಷ್ಯಾದ ಅಧ್ಯಕ್ಷರು ಉಕ್ರೇನ್ ನಿಂದ ಮಕ್ಕಳನ್ನು ರಷ್ಯಾಕ್ಕೆ ಕದ್ದೊಯ್ದಿದ್ದರೂ ಅದರ ವಿರುದ್ಧ ಚಕಾರವೆತ್ತದೆ, ರಷ್ಯಾ ನಡೆಸಿದ ಮಕ್ಕಳ ಹಕ್ಕುಗಳ ಹರಣಕ್ಕೆ ಪರೋಕ್ಷವಾಗಿ ಸಾಥ್ ನೀಡಿದ್ದ ಕಾರಣಕ್ಕಾಗಿ, ಮರಿಯಾ ವಿರುದ್ಧವೂ ಬಂಧನ ವಾರಂಟ್ ಜಾರಿಗೊಳಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಆದರೆ ಈ ಆರೋಪವನ್ನು ಮಾಸ್ಕೋ ತಳ್ಳಿಹಾಕಿದೆ. ರಷ್ಯಾದ ಸೇನಾಪಡೆಗಳು ದೌರ್ಜನ್ಯ ಎಸಗಿಲ್ಲ ಎಂದು ಹೇಳಿದೆ.

suddiyaana