ಸೆಲೆಬ್ರಿಟಿಗಳ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಕಮಾಲ್ – ಹೇಗಿದೆ ಗೊತ್ತಾ ‘ಕೆಸಿಸಿ’ ಕದನ..?
ಕ್ರಿಕೆಟ್ ಕ್ರೇಜ್ ಎಲ್ಲರಿಗೂ ಇದ್ದೇ ಇರುತ್ತದೆ. ಕಾಲೇಜು, ಆಫೀಸ್ಗಳಲ್ಲೂ ಕ್ರಿಕೆಟ್ ಆಯೋಜನೆ ಮಾಡಲಾಗುತ್ತದೆ. ಅದ್ರಲ್ಲೂ ಸೆಲೆಬ್ರಿಟಿಗಳಿಗೂ ಕೂಡ ಕ್ರಿಕೆಟ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಬೆಂಗಳೂರಲ್ಲಿ ಈಗ ‘ಕನ್ನಡ ಚಲನಚಿತ್ರ ಕಪ್’ ಫೀವರ್ ಶುರುವಾಗಿದೆ. ಕೆಸಿಸಿ ಮೂರನೇ ಆವೃತ್ತಿಯು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಚಂದನವನದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.
ಕಿಚ್ಚ ಸುದೀಪ್, ಡಾಲಿ ಧನಂಜಯ್, ಗಣೇಶ್, ಶಿವರಾಜ್ಕುಮಾರ್, ಧ್ರುವ ಸರ್ಜಾ ಮುಂತಾದ ಸ್ಟಾರ್ಸ್ ಕನ್ನಡ ಚಲನಚಿತ್ರ ಕಪ್ನಲ್ಲಿ (Kannada Chalanachitra Cup) ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇಂದು (ಫೆಬ್ರವರಿ 24) ಅದ್ಧೂರಿಯಾಗಿ ಕೆಸಿಸಿ ಪಂದ್ಯಗಳು ಆರಂಭ ಆಗಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮ್ಯಾಚ್ ನಡೆಯುತ್ತಿದೆ. ಆರು ತಂಡಗಳ ನಡುವೆ ಕೆಸಿಸಿ ಫೈಟ್ ನಲ್ಲಿ ಕನ್ನಡದ ಸೆಲೆಬ್ರಿಟಿಗಳ ಜೊತೆ ಅಂತಾರಾಷ್ಟ್ರೀಯ ಆಟಗಾರರು ಕೂಡ ಫೀಲ್ಡ್ಗೆ ಇಳಿದಿದ್ದಾರೆ. ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ‘ಕನ್ನಡ ಚಲನಚಿತ್ರ ಕಪ್’ (KCC) ಪಂದ್ಯಗಳು ನಡೆಯಲಿದ್ದು, ಕ್ರೀಡಾಭಿಮಾನಿಗಳು ಮತ್ತು ಕ್ರಿಕೆಟ್ ಪ್ರಿಯರನ್ನು ಆಕರ್ಷಿಸಿದೆ.
ಇದನ್ನೂ ಓದಿ : ಸತತ ಸೋಲಿನ ಬೆನ್ನಲ್ಲೇ ಕಾಂಗರೂಗಳಿಗೆ ಶಾಕ್ – ಟೆಸ್ಟ್ ಸರಣಿಯಿಂದ ಹೊರಬಿದ್ದ ಆಸೀಸ್ ನಾಯಕ
ಕೆಸಿಸಿ ಪಂದ್ಯದಲ್ಲಿ ಎರಡು ಗ್ರೂಪ್ನ ಆರು ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಎ ಗ್ರೂಪ್ನಲ್ಲಿ ಕದಂಬ ಲಯನ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪ್ಯಾಟ್ರಿಯಾಟ್ಸ್ ತಂಡಗಳಿವೆ. ಬಿ ಗ್ರೂಪ್ನಲ್ಲಿ ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್, ಒಡೆಯರ್ ಚಾರ್ಜಸ್ ಟೀಮ್ಗಳಿವೆ. ಫೆಬ್ರವರಿ 24ರ ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್, ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್, ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ ಪಂದ್ಯಗಳು ನಡೆಯಲಿವೆ.
ಫೆಬ್ರವರಿ 25ರಂದು ವಿಜಯನಗರ ಪೇಟ್ರಿಯಾಟ್ಸ್ vs ಕದಂಬ ಲಯನ್ಸ್, ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ vs ವಿಜಯನಗರ ಪೇಟ್ರಿಯಾಟ್ಸ್ ತಂಡಗಳ ನಡುವೆ ಪಂದ್ಯ ಇರಲಿದೆ. 30 ದೇಶಗಳಲ್ಲಿ ಕ್ರಿಕೆಟ್ ಪ್ರಸಾರ ಆಗಲಿದೆ.
ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಕಿಚ್ಚ ಸುದೀಪ್ ಅವರು ಕೆಸಿಸಿ ಬಗ್ಗೆ ಮಾತನಾಡಿದ್ದರು. ‘ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ, ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್ ನೋಡಿಕೊಂಡು ಬರುತ್ತಾರೆ’ ಎಂದಿದ್ದರು.