ಆರೋಗ್ಯಕ್ಕಾಗಿ ಆಯುರ್ವೇದ – 8ನೇ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಆರೋಗ್ಯಕ್ಕಾಗಿ ಆಯುರ್ವೇದ – 8ನೇ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಆಯುರ್ವೇದವು 3,000 ವರ್ಷಗಳಿಗೂ ಹಳೆಯದಾದ ಭಾರತದಲ್ಲಿ ಹುಟ್ಟಿದ ಔಷಧ ಮತ್ತು ಚಿಕಿತ್ಸಾ ಪದ್ಧತಿಯಾಗಿದೆ.  ಇದು ನೈಸರ್ಗಿಕ ಚಿಕಿತ್ಸಾ ಪದ್ಧತಿ ಆಗಿದೆ. ಯಾವುದೇ ಅಡ್ಡ ಪರಿಣಾಮಗಳಿಂದಲೂ ಆಯುರ್ವೇದ ಚಿಕಿತ್ಸೆ ಮುಕ್ತವಾಗಿರುತ್ತದೆ. ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆರೋಗ್ಯ ಹಾಗೂ ಧೀರ್ಘ ಆಯಸ್ಸು ಪಡೆಯುವುದು ಹೇಗೆ ಎಂಬುದನ್ನು ಹೇಳುವುದೇ ಆಯುರ್ವೇದದ ಮೂಲ ಉದ್ದೇಶ.  ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಆಯುರ್ವೇದ ಚಿಕಿತ್ಸೆ ಪ್ರಾಚೀನ ಭಾರತದಿಂದ ಬೆಳೆದು ಬಂದಿದೆ.

ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆಗೆ ಕಾರಣಗಳೇನು – ಹೇರ್ ಲಾಸ್ ಚಿಕಿತ್ಸೆ ವಿಧಾನ ಹೇಗೆ? ಪರಿಹಾರಗಳೇನು?

ಆಯುರ್ವೇದ ಎಂಬುವುದು ಜೀವ ವಿಜ್ಞಾನ ನಮ್ಮ ಹಿರಿಯರ,ಋಷಿಮುನಿಗಳ ಸಾವಿರಾರು ವರ್ಷಗಳ ಅನ್ವೇಷಣೆಯ ಫಲ ಇದಾಗಿದೆ. ಮಾನವನ ಶರೀರ, ಇಂದ್ರಿಯ, ಮನಸ್ಸು ಹಾಗೂ ಆತ್ಮ ಈ ನಾಲ್ಕು ಭಾಗಗಳು ಸಮತೋಲನದಲ್ಲಿರುವುದೇ ಸ್ವಾಸ್ಥ್ಯ /ಆರೋಗ್ಯ ಎಂಬುದಾಗಿ ಹೇಳಲಾಗುತ್ತದೆ.  ‘ಸ್ವಸ್ಥಸ್ಯ ಸ್ವಾಸ್ತ್ಯ ರಕ್ಷಣಂ ಆತುರಸ್ಯ ವಿಕಾರ ಪ್ರಶಮನಂ’  ರೋಗಬಾರದ ಹಾಗೆ ಮುನ್ನೆಚ್ಚರಿಕೆಯಿಂದ ಇರಲು ಬೇಕಾದ ಸುಲಭೋಪಾಯಗಳನ್ನು ತಿಳಿಸುವುದು ಹಾಗೂ ರೋಗ ಬಂದಾಗ ಅದರ ಮೂಲ ಕಾರಣವನ್ನು ತಿಳಿದು ನಿವಾರಣೋಪಾಯವನ್ನು ತಿಳಿಸುವುದೇ ಆಯುರ್ವೇದದ ಮೂಲ ಉದ್ದೇಶ

ಚತುರ್ವೇದಗಳಲ್ಲಿ ಒಂದಾದ ಅಥರ್ವ ವೇದದಲ್ಲಿ ಆಯುರ್ವೇದದ ಬಗ್ಗೆ ಅತ್ಯದ್ಭುತ ಹಾಗೂ ವಿಚಾರಪೂರಿತ ವಿವರಗಳನ್ನು ಹೇಳಲು ಪಟ್ಟಿದೆ ಮೊಟ್ಟಮೊದಲಾಗಿ ಆಯುರ್ವೇದವನ್ನು ಜಗತ್ತಿಗೆ ಕೊಟ್ಟವರು ಶ್ರೀ ಧನ್ವಂತರಿ  ಎಂಬ ದಿವ್ಯತೇಜಸ್ವಿ ಹಾಗೂ ದೇವಪುರುಷ ಎಂಬುದಾಗಿ ತಿಳಿದು ಬಂದಿದೆ.  ಆಯುರ್ವೇದದ ಆದಿದೇವತೆ ಎಂದು ಪೂಜಿಸಲ್ಪಡುವ ಶ್ರೀ ಧನ್ವಂತರಿ ಜಯಂತಿಯಂದು ಆಯುರ್ವೇದ ದಿನಾಚರಣೆಯನ್ನಾಗಿ ಪ್ರತಿ ವರ್ಷವೂ ಆಚರಿಸಲಾಗುತ್ತದೆ. ಹೀಗಾಗಿ  ನವೆಂಬರ್ 10ರಂದು 8ನೇ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪಂಚಕರ್ಮ ಚಿಕಿತ್ಸೆ,. ದಿನಾಚರ್ಯ,ಪಥ್ಯ ಆಹಾರ ವಿಹಾರ, ಯೋಗಾಸನ, ವ್ಯಾಯಾಮ, ನೈಸರ್ಗಿಕ ಗಿಡ ಮೂಲಿಕೆಗಳಿಂದ ತಯಾರಿಸಿದ ಔಷಧಿಗಳ ಬಳಕೆಯನ್ನು ವಿವರವಾಗಿ ತಿಳಿಸಲಾಗಿದೆ. ಪ್ರಾಚೀನ ಭಾರತದಿಂದ ಬೆಳೆದು ಬಂದ ಈ ಆಯುರ್ವೇದ ವೈದ್ಯ ಪದ್ಧತಿಯನ್ನು ತಾವೆಲ್ಲರೂ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲಿ.  ಭಗವಾನ್ ಶ್ರೀ ಧನ್ವಂತರಿ ಯು ಎಲ್ಲರಿಗೂ ಉತ್ತಮವಾದ ಆರೋಗ್ಯವನ್ನು ನೀಡಲಿ.

ಡಾ. ಜ್ಯೋತಿ ಕೆ  BAMS MD

ಲಕ್ಷ್ಮೀ ಕ್ಲಿನಿಕ್  ಮಂಗಳೂರು

Sulekha