ಮೆಟ್ರೋದಲ್ಲಿ ಅನ್ನದಾತನಿಗೆ ಅವಮಾನ – ಸಿಬ್ಬಂದಿಯನ್ನು ವಜಾಗೊಳಿಸಿದ ಬಿಎಂಆರ್‌ಸಿಎಲ್‌

ಮೆಟ್ರೋದಲ್ಲಿ ಅನ್ನದಾತನಿಗೆ ಅವಮಾನ –  ಸಿಬ್ಬಂದಿಯನ್ನು ವಜಾಗೊಳಿಸಿದ ಬಿಎಂಆರ್‌ಸಿಎಲ್‌

ಬಟ್ಟೆ ಕ್ಲೀನ್‌ ಇಲ್ಲ ಎಂಬ ಕಾರಣಕ್ಕೆ ರೈತನ ಮೆಟ್ರೋದಲ್ಲಿ ಪ್ರಯಾಣಿಸಲು ಬಿಡದೇ ಮೆಟ್ರೋ ಸಿಬ್ಬಂದಿ ಅವಮಾನಿಸಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅನ್ನದಾತನಿಗೆ ಅವಮಾನಿಸಿದ್ದ ಮೆಟ್ರೋ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟ್ರಕ್, ಜೀಪ್ ಮತ್ತು ಬೈಕ್ ನಡುವೆ ಅಪಘಾತ – 9 ಮಂದಿ ದುರ್ಮರಣ

ಬೆಂಗಳೂರಿನ ರಾಜಾಜಿನಗರದಲ್ಲಿ ರೈತನೊಬ್ಬ ಮೆಟ್ರೋದಲ್ಲಿ ಪ್ರಯಾಣಿಸಲು ಬಂದಿದ್ದರು. ಈ ವೇಳೆ ಆತನ ಬಟ್ಟೆ ಕೊಳಕಾಗಿದ್ದರಿಂದ ಮೆಟ್ರೋ ಸಿಬ್ಬಂದಿ ರೈಲಿನಲ್ಲಿ ಪ್ರಯಾಣಿಸಲು ಬಿಟ್ಟಿಲ್ಲ. ಈ ವೇಳೆ ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಇದನ್ನು ವಿಡಿಯೋ ಮಾಡಿ  ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ, ಬಿಎಂಆರ್ ಸಿಎಲ್‍ಗೆ ಟ್ಯಾಗ್ ಮಾಡಿದ್ದರು. ಅಲ್ಲದೇ ಟಿಪ್ ಟಾಪ್ ಆಗಿ ರೆಡಿಯಾಗಿ ಬಂದರೆ ಮಾತ್ರ ಮೇಟ್ರೋದೊಳಗೆ ಎಂಟ್ರಿ, ಇಲ್ಲವಾದರೆ ಎಂಟ್ರಿ ಇಲ್ಲವೇ? ವಿಐಪಿಗಳಿಗೆ ಮಾತ್ರ ಮೆಟ್ರೋ ಸೌಲಭ್ಯವೇ ಎಂದು ಪ್ರಶ್ನಿಸಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಘಟನೆಗೆ ಕಾರಣವಾದ ಸೆಕ್ಯುರಿಟಿ ಸೂಪರ್ ವೈಸರ್ ಅನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಈ ಬಗ್ಗೆ ನಾವು ಸಂಪೂರ್ಣ ತನಿಖೆ ಮಾಡ್ತೀವಿ ಎಂದು ಎಂಡಿ ಮಹೇಶ್ವರನ್ ಮಾಹಿತಿ ನೀಡಿದ್ದಾರೆ.

ಈ ಘಟನೆ ತಡವಾಗಿ ಬೆಳಕಿಗೆ ಬಂತು. ಇದು ಯಾವುದೇ ಕಾರಣಕ್ಕೂ ಕ್ಷಮಿಸುವಂತದ್ದಲ್ಲ. ಕೂಡಲೇ ಘಟನೆಗೆ ಕಾರಣರಾದವರನ್ನ ಟರ್ಮಿನೇಟ್ ಮಾಡಲಾಗಿದೆ. ಘಟನೆಯನ್ನ ಬಿಎಂಆರ್‍ಸಿಎಲ್ ಖಂಡಿಸುತ್ತಿದೆ ಎಂದು ಬಿಎಂಆರ್ ಸಿಎಲ್ ಪಿಆರ್ ಒ ಯಶವಂತ ಚೌಹಾಣ್ ತಿಳಿಸಿದ್ದಾರೆ.

Shwetha M