ಬಿಸಿಯೂಟದ ಅಕ್ಕಿ ಖಾಲಿಯಾಯ್ತು ಎಂದು ವಿದ್ಯಾರ್ಥಿಗಳಿಗೆ ಮಂಡಕ್ಕಿ ನೀಡಿದ ಶಿಕ್ಷಕರು!

ಬಿಸಿಯೂಟದ ಅಕ್ಕಿ ಖಾಲಿಯಾಯ್ತು ಎಂದು ವಿದ್ಯಾರ್ಥಿಗಳಿಗೆ ಮಂಡಕ್ಕಿ ನೀಡಿದ ಶಿಕ್ಷಕರು!

ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೋತ್ಸಾಹಿಸಲು ಶಾಲೆಗಳಲ್ಲಿ ಬಿಸಿ ಊಟ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಮಕ್ಕಳು ಹಸಿವಿನಿಂದ ಬಳಲದಿರಲಿ, ಹೊಟ್ಟೆ ತುಂಬಾ ಊಟ ಮಾಡಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಇಲ್ಲೊಂದು ಶಾಲೆಯಲ್ಲಿ ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟದ ಅನ್ನ ನೀಡುವ ಬದಲು ಮಂಡಕ್ಕಿ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಇನ್ನು ಮುಂದೆ ನ್ಯೂಯಾರ್ಕ್ ನಲ್ಲೂ ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ರಜೆ!

ಒಡಿಶಾದ ಬ್ರಹ್ಮಪುರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕೆ ಅನ್ನ ನೀಡುವ ಬದಲು ಶಾಲಾ ಅಡುಗೆ ಸಿಬ್ಬಂದಿ ಮಂಡಕ್ಕಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಶಾಲೆಯಲ್ಲಿ ಅಕ್ಕಿ ಖಾಲಿಯಾಗಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ದಾಲ್‌ನೊಂದಿಗೆ ಮಂಡಕ್ಕಿ ನೀಡಿದ್ದಾರೆ. ಈ ವಿಚಾರ ಪೋಷಕರ ಗಮನಕ್ಕೆ ಬಂದಿದ್ದು, ಶಾಲಾ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರವನ್ನು  ಪೋಷಕರು ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ಗಮನಕ್ಕೂ ತಂದಿದ್ದಾರೆ.

ವಿದ್ಯಾರ್ಥಿಗಳಿಗೆ ಶುಕ್ರವಾರ ಮತ್ತು ಶನಿವಾರದಂದು ಪಫ್ಡ್ ರೈಸ್ ನೀಡಲಾಯಿತು. ಆದರೆ ಶನಿವಾರವೇ ಅಕ್ಕಿ ದಾಸ್ತಾನು ಶಾಲೆಗೆ ಬಂದಿದ್ದು, ಶಿಕ್ಷಕರ ಸೂಚನೆ ನೀಡಿದ ಕಾರಣ ಅಡುಗೆಗೆ ಅಕ್ಕಿಯನ್ನು ಬಳಸಿಲ್ಲ ಎಂದು ಅಡುಗೆ ಮಾಡುವವರು ಆರೋಪಿಸಿದ್ದಾರೆ.

ಬ್ಲಾಕ್‌ ಶಿಕ್ಷಣಾಧಿಕಾರಿ ಮಾಲತಿ ತುಡು ಈ ಸಂಬಂಧ ಮಾತನಾಡಿದ್ದು, ಅಕ್ಕಿ ಖಾಲಿಯಾಗಿದ್ದರೆ ಮುಖ್ಯೋಪಾಧ್ಯಾಯರು ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಅಕ್ಕಿ ದಾಸ್ತಾನು ಖಾಲಿಯಾಗಿದ್ದರೆ ಮುಖ್ಯ ಶಿಕ್ಷಕರು ವರದಿ ಮಾಡಬೇಕಿತ್ತು. ಆದರೆ ಅವರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

suddiyaana