ನೂಡಲ್ಸ್ ತಿನ್ನೋ ಮುನ್ನ ಎಚ್ಚರ.. – ಅರ್ಧಂಬರ್ಧ ಬೇಯಿಸಿದ ನೂಡಲ್ಸ್ ತಿಂದ್ರೆ ಜೀವಕ್ಕೆ ಕುತ್ತು?

ಈಗೀಗ ಜನರಿಗೆ ಉತ್ತಮ ಆಹಾರಕ್ಕಿಂತ ಜಂಕ್ ಫುಡ್ ಮೇಲೆಯೇ ಬಲು ಪ್ರೀತಿ.. ತಿನ್ನೋದಕ್ಕೂ ಟೇಸ್ಟಿಯಾಗಿರುತ್ತೆ.. ಮಾಡೋದಿಕ್ಕೂ ಈಸಿ ಅಂತಾ ಅದನ್ನೇ ತಿಂತಾರೆ. ಇದ್ರಲ್ಲಿ ನೂಡಲ್ಸ್ ಕೂಡ ಒಂದು.. ಮಕ್ಕಳಿಂದ ಹಿಡಿದು ದೊಡ್ಡವರಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ಸ್ನ್ಯಾಕ್. ಆದ್ರೆ ನೀವು ನೂಡಲ್ಸ್ ಪ್ರಿಯರಾಗಿದ್ರೆ ಈ ಸುದ್ದಿ ಓದಲೇಬೇಕು.. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಫಿಕ್ಸ್!
ಇದನ್ನೂ ಓದಿ: ಅಯ್ಯೋ.. ಇದೇನಿದು ಅವಸ್ಥೆ? – ರೋಡ್ಗೆ ಡಾಂಬರೀಕರಣ ಮಾಡ್ತಿದ್ದಂತೆ ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ!
ಹೌದು. ನೂಡಲ್ಸ್ ಅನೇಕರ ನೆಚ್ಚಿನ ಸ್ನ್ಯಾಕ್ಸ್ ಅಂದ್ರೆ ತಪ್ಪಾಗಲ್ಲ.. ಕೆಲವರಂತೂ ನೂಡಲ್ಸ್ ಇಷ್ಟ ಅಂತ ಮೂರು ಹೊತ್ತು ಅದನ್ನೇ ತಿಂತಾರೆ.. ಆದ್ರೆ ನೂಡಲ್ಸ್ ತಿನ್ನೋ ಮುನ್ನ ಎಚ್ಚರಿಕೆ ವಹಿಸೋದು ತುಂಬಾ ಮುಖ್ಯ.. ಅದನ್ನ ಸರಿಯಾಗಿ ಬೇಯಿಸದೇ ತಿಂದ್ರೆ ಜೀವಕ್ಕೆ ಅಪಾಯ.. ಇದೀಗ ಈಜಿಪ್ಟ್ನಲ್ಲಿ ದಾರುಣ ಘಟನೆಯೊಂದು ನಡೆದಿದೆ. 13 ವರ್ಷದ ಬಾಲಕನೊಬ್ಬ ಹಸಿವಿನಿಂದ ಕಚ್ಚಾ ನೂಡಲ್ಸ್ ತಿಂದಿದ್ದ. ಒಮ್ಮೆ ಅಲ್ಲ, ಮೂರು ಪ್ಯಾಕೆಟ್ ನೂಡಲ್ಸ್ ತಿಂದಿದ್ದ. ಸ್ವಲ್ಪ ಹೊತ್ತಿನಲ್ಲೇ ಅವನಿಗೆ ತೀವ್ರ ಹೊಟ್ಟೆನೋವು, ವಾಂತಿ ಪ್ರಾರಂಭವಾಯಿತು. ಕುಟುಂಬದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರಿಗೆ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ.
ಏಕೆ ನೂಡಲ್ಸ್ ಕಚ್ಚಾ ತಿನ್ನಬಾರದು?
ಇನ್ಸ್ಟಂಟ್ ನೂಡಲ್ಸ್ಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರುತ್ತದೆ. WHO ಮಾರ್ಗಸೂಚಿಗಳ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೆ ಗರಿಷ್ಠ 2000mg ಸೋಡಿಯಂ ಸೇವಿಸಬೇಕು. ಆದರೆ ಒಂದು ಪ್ಯಾಕೆಟ್ ಇನ್ಸ್ಟಂಟ್ ನೂಡಲ್ಸ್ನಲ್ಲೇ ಸುಮಾರು 1829mg ಸೋಡಿಯಂ ಇರುತ್ತದೆ. ಅಂದರೆ ದಿನಕ್ಕೆ ಎರಡು ಪ್ಯಾಕೆಟ್ ನೂಡಲ್ಸ್ ತಿಂದರೆ, ದೇಹದ ಅಗತ್ಯಕ್ಕಿಂತ ಹೆಚ್ಚಿನ ಸೋಡಿಯಂ ಪ್ರಮಾಣ ಶೇಖರಣೆಯಾಗುತ್ತದೆ. ಇದು ನೇರವಾಗಿ ರಕ್ತದೊತ್ತಡ ಹೆಚ್ಚಿಸಲು, ಹೃದಯಕ್ಕೆ ಹಾನಿ ಮಾಡಿಸಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಕಚ್ಚಾ ನೂಡಲ್ಸ್ ಜೀರ್ಣವಾಗುವುದು ಕಡಿಮೆ. ಇದು ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟುಮಾಡುತ್ತದೆ, ದೀರ್ಘಾವಧಿಯಲ್ಲಿ ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಕಚ್ಚಾ ನೂಡಲ್ಸ್ ದೇಹದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದರಿಂದ ಡೀಹೈಡ್ರೇಷನ್ ಉಂಟಾಗುತ್ತದೆ.
ಹೀಗಾಗಿ ಆದಷ್ಟು ನೂಡಲ್ಸ್ ತಿನ್ನುವುದನ್ನ ಕಡಿಮೆ ಮಾಡಬೇಕು. ಸರಿಯಾಗಿ ಬೇಯಿಸಿದ ನಂತರ ನೂಡಲ್ಸ್ ಅನ್ನ ಸೇವಿಸಬೇಕು. ಮಕ್ಕಳಿಗೆ ಕಚ್ಚಾ ಅಥವಾ ಅರ್ಧಂಬರ್ಧ ಬೇಯಿಸಿದ ನೂಡಲ್ಸ್ ಕೊಡಬಾರದು. ಆಹಾರದಲ್ಲಿ ಹಣ್ಣು, ತರಕಾರಿ, ಪ್ರೋಟೀನ್ಗಳು ಸೇರಿದಂತೆ ಪೌಷ್ಟಿಕಾಂಶ ಹೆಚ್ಚಿರುವ ಪದಾರ್ಥಗಳನ್ನು ಸೇರಿಸಬೇಕು.

ನೋಡಿರಿ

