ಇನ್ಸ್‌ಸ್ಟಾಗ್ರಾಂನಲ್ಲಿ ತಾಂತ್ರಿಕ ದೋಷ – ಬಳಕೆದಾರರಿಂದ ದೂರುಗಳ ಸುರಿಮಳೆ

ಇನ್ಸ್‌ಸ್ಟಾಗ್ರಾಂನಲ್ಲಿ ತಾಂತ್ರಿಕ ದೋಷ – ಬಳಕೆದಾರರಿಂದ ದೂರುಗಳ ಸುರಿಮಳೆ

ಮೆಟಾ ಪ್ಲಾಟ್‌ಫಾರ್ಮ್‌ ಒಡೆತನದ, ಜನಪ್ರಿಯ ಸೋಶಿಯಲ್‌ ಮೀಡಿಯಾ App ಇನ್ಸ್‌ಸ್ಟಾಗ್ರಾಂ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ರೀಲ್ಸ್‌, ಫೋಟೊಸ್‌ ಅಪ್‌ಲೋಡ್‌ ಮಾಡಲು ಸಾಧ್ಯವಾಗದೇ ಬಳಕೆದಾರರು ಪೇಚಾಡಿದ್ದಾರೆ. ಇಲ್ಲದೆ ಹಲವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಮತ್ತೆ ಕಾಲಿಡುತ್ತಿದೆ ಡೆಡ್ಲಿ ಗೇಮ್‌! – ಮಕ್ಕಳ‌ ಬಗ್ಗೆ ಇರಲಿ‌ ಎಚ್ಚರ

ಇನ್ಸ್‌ಸ್ಟಾಗ್ರಾಂ ಬಳಕೆದಾರರಿಂದ ದೂರು ಕೇಳಿ ಬಂದ ಬೆನ್ನಲ್ಲೇ ಮೆಟಾ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ʼತಾಂತ್ರಿಕ ದೋಷದಿಂದಾಗಿ ಇನ್ಸ್‌ಸ್ಟಾಗ್ರಾಂ ನಲ್ಲಿ ಕೆಲವು ಬಳಕೆದಾರರಿಗೆ ಆಗಿನ್‌ ಆಗಲು, ರೀಲ್ಸ್‌, ಫೋಟೊಸ್‌ ಅಪ್‌ಲೋಡ್‌ ಮಾಡಲು ತೊಂದರೆ ಉಂಟಾಗಿತ್ತು. ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬರೆಹರಿಸಿದ್ದೇವೆʼ ಎಂದು ಟ್ವೀಟ್‌ ಮಾಡಿದ್ದಾರೆ.

ಕಂಪನಿ ಈವರೆಗೂ ತಾಂತ್ರಿಕ ದೋಷದಿಂದ ತೊಂದರೆಗೆ ಒಳಗಾದ ಬಳಕೆದಾರರ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಅಮೆರಿಕದಲ್ಲಿ ಒಂದು ಲಕ್ಷ ಬಳಕೆದಾರರು, ಕೆನಡಾದಲ್ಲಿ 24 ಸಾವಿರ ಮತ್ತು ಬ್ರಿಟನ್‌ ನಲ್ಲಿ 56 ಸಾವಿರಕ್ಕೂ ಹೆಚ್ಚು ಜನರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. 1.80 ಲಕ್ಷಕ್ಕೂ ಅಧಿಕ ಬಳಕೆದಾರರು ಲಾಗಿನ್‌ ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳ ತಾಂತ್ರಿಕ ದೋಷ ಟ್ರ್ಯಾಕ್‌ ಮಾಡುವ ವೆಬ್‌ ಸೈಟ್‌ Downdetecter.com ವರದಿ ಮಾಡಿದೆ.

suddiyaana