ಹೊಸ ಫೀಚರ್ ಪರಿಚಯಿಸಿದ ಇನ್​ಸ್ಟಾಗ್ರಾಂ‌ – ಹೊಸ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ?

ಹೊಸ ಫೀಚರ್ ಪರಿಚಯಿಸಿದ ಇನ್​ಸ್ಟಾಗ್ರಾಂ‌ – ಹೊಸ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ?

ಜನಪ್ರಿಯ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್ ಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್‌ ಸದ್ಯ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಇದೀಗ ಮೆಟಾ ಹೊಸ ಫೀಚರ್‌ವೊಂದನ್ನ ಬಿಡುಗಡೆ ಮಾಡಿದೆ.

ಇದನ್ನೂ ಓದಿ:  ಎದೆಯ ಮೇಲೆ ಡಿಜಿಟಲ್​ ಬೋರ್ಡ್! – ಉರ್ಫಿ ಮಾನ ಮುಚ್ಚಲು ಎಲ್ಇಡಿ ಡಿಸ್‌ಪ್ಲೇ ಬೇಕಾಯ್ತಾ?

ಮೆಟಾ ಇದೀಗ ತನ್ನ ಬಳಕೆದಾರರಿಗಾಗಿ ನೂತನ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈಗಾಗಲೇ ಇನ್​​ಸ್ಟಾಗ್ರಾಂನಲ್ಲಿ ಫೋಟೋ, ವಿಡಿಯೋ ಹಂಚುವ ಆಯ್ಕೆ ಇದೆ. ಆದ್ರೆ ಇದೀಗ ಒಂದೇ ಪೋಸ್ಟ್​ನಲ್ಲಿ 20 ವಿಡಿಯೋ ಮತ್ತು ಫೋಟೋಗಳನ್ನು ಅಪ್​ಲೋಡ್​ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ನೂತನ ಫೀಚರ್​ ಬಳಕೆದಾರರ ಮನಗೆದ್ದಿದೆ.

ಇನ್​ಸ್ಟಾಗ್ರಾಂನಲ್ಲಿ ಒಂದೇ ಪೋಸ್ಟ್​ ಮೂಲಕ 10 ಫೋಟೋ ಮತ್ತು ವಿಡಿಯೋ ಹಂಚಬಹುದಾಗಿತ್ತು. ಆದರೀಗ ಅದರ ಮಿತಿಯನ್ನು ಏರಿಸಿದೆ. 20 ಮಿತಿಯವರೆಗೆ ಕೊಂಡೊಯ್ದಿದೆ. ಸದ್ಯ ಸದಾ ಇನ್​​ಸ್ಟಾಗ್ರಾಂನಲ್ಲಿ ಕಾಲ ಕಳೆಯುವವರಿಗೆ ನೂತನ ಫೀಚರ್​ ಮನಗೆದ್ದಿದೆ.

ಇನ್​​ಸ್ಟಾಗ್ರಾಂ 2017ರಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮಿತಿಯನ್ನು ಹೆಚ್ಚಿಸಿಕೊಂಡಿತು. ಅಂದಿನಿಂದ ಆ್ಯಪ್​​ನಲ್ಲಿ ನವೀನ ಬಗೆಯ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬಂದಿದೆ. ಮಾತ್ರವಲ್ಲದೆ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ಒಂದೇ ಪೋಸ್ಟ್​​ನಲ್ಲಿ 20 ಫೋಟೋ ಮತ್ತು ವಿಡಿಯೋ ಹಂಚಬಹುದಾಗಿದೆ.

Shwetha M