ಹನಿಮೂನ್‌ ಮೂಡ್‌ನಲ್ಲಿ ರಾಧಿಕಾ, ಅನಂತ್‌ – ಒಂದೇ ಒಂದು ರಾತ್ರಿ ಕಳೆಯಲು 31 ಲಕ್ಷ ಖರ್ಚು!?

ಹನಿಮೂನ್‌ ಮೂಡ್‌ನಲ್ಲಿ ರಾಧಿಕಾ, ಅನಂತ್‌ – ಒಂದೇ ಒಂದು ರಾತ್ರಿ ಕಳೆಯಲು 31 ಲಕ್ಷ ಖರ್ಚು!?

ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ವಿವಾಹ ಅದ್ದೂರಿಯಾಗಿ ನೆರವೇರಿದೆ. ದೇಶ, ವಿದೇಶಗಳಿಂದ ಗಣ್ಯರು ಆಗಮಿಸಿ ನವ ಜೋಡಿಗೆ ವಿಶ್‌ ಮಾಡಿದ್ದರು.. ಮದುವೆಯ ನಂತರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ತಮ್ಮ ಹನಿಮೂನ್‌ಗಾಗಿ ಕೋಸ್ಟ ರಿಕಾಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇದೀಗ ಅನಂತ್ ಹಾಗೂ ರಾಧಿಕಾ ಉಳಿದುಕೊಂಡಿರುವ ರೆಸಾರ್ಟ್‌ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಇದರ ಬೆಲೆ ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌, ಮಾಲಿವುಡ್‌ ಆಯ್ತು.. ಈಗ ಬಾಲಿವುಡ್‌ನತ್ತ ಕರಾವಳಿ ಹೈದ – ಬಾಬಿ ಡಿಯೋಲ್ ಜತೆ ಅಬ್ಬರಿಸಲಿದ್ದಾರೆ ನಟ!

ಅನಂತ್‌ ಹಾಗೂ ರಾಧಿಕಾ ಮಧ್ಯ ಅಮೆರಿಕದ ಸುಂದರ ದೇಶದಲ್ಲಿರುವ  ಐಷಾರಾಮಿ ಫೋರ್ ಸೀಸನ್ಸ್ ರೆಸಾರ್ಟ್ ಕಾಸಾ ಲಾಸ್ ಓಲಾಸ್‌ನಲ್ಲಿ ನವ ದಂಪತಿ ತಂಗಿದ್ದಾರೆ. ಆ ರೆಸಾರ್ಟ್​ ಪ್ರೀಮಿಯಂ ಸೌಕರ್ಯಗಳಿಗೆ ಹೆಸರು ವಾಸಿ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ಹನಿಮೂನ್‌ಗಾಗಿ ಆಯ್ಕೆ ಮಾಡಿಕೊಂಡಿರುವ ಐಷಾರಾಮಿ ರೂಮ್​ಗೆ ಒಂದು ರಾತ್ರಿಗೆ ಬರೋಬ್ಬರಿ 31 ಲಕ್ಷ ರೂಪಾಯಿ ಎಂದು ವರದಿಯಾಗಿದೆ.

ಇದು ಸಾಟಿಯಿಲ್ಲದ ಐಷಾರಾಮಿ ಮತ್ತು ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ವಿಸ್ತಾರವಾದ ತೆರೆದ ಇದಾಗಿದ್ದು, ಸೊಂಪಾದ ತಾಳೆ ಮರಗಳ ನಡುವೆ ನೆಲೆಸಿರುವ ಈ ಅಲ್ಟ್ರಾ-ಐಷಾರಾಮಿ ರೆಸಾರ್ಟ್ ಕಾಸಾ ಲಾಸ್ ಓಲಾಸ್ ಪ್ರಶಾಂತ ಸ್ಥಳದಲ್ಲಿ ನೆಲೆಗೊಂಡಿದೆ. ವಿರಾಡೋರ್ ಬೀಚ್‌ನಲ್ಲಿ ನೆಲೆಗೊಂಡಿದ್ದು, ತಿಳಿ ನೀರು ಮತ್ತು ಪ್ರೀಟಾ ಕೊಲ್ಲಿಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಓಲಾಸ್ ಎಂದು ಕರೆಯಲ್ಪಡುವ ಐಷಾರಾಮಿ ಫೋರ್ ಸೀಸನ್ಸ್ ರೆಸಾರ್ಟ್‌ನಲ್ಲಿ   ಆರು ಬೆಡ್‌ ರೂಂ ಹೊಂದಿದ್ದು, 18,475 ಚದರ ಅಡಿಯ ಐಷಾರಾಮಿ ನಿವಾಸವಾಗಿದೆ. ಹೆಚ್ಚುವರಿ ರೆಸಾರ್ಟ್ ಶುಲ್ಕಗಳು ಮತ್ತು ತೆರಿಗೆಗಳನ್ನು ಹೊರತುಪಡಿಸಿ ಇಡೀ ವಿಲ್ಲಾ ಪ್ರತಿ ರಾತ್ರಿಗೆ 16 ಲಕ್ಷ ರೂ. ಪಾವತಿ ಮಾಡಬೇಕಿದೆ.

ಈ ಲಕ್ಷುರಿ ಜಾಗವು ಆರಾಮದಾಯಕವಾದ ಹಾಸಿಗೆ, ಲೈಬ್ರೆರಿ, ಜಿಮ್, 100 ಅಡಿ ಈಜುಕೊಳ, ಟೆನ್ನಿಸ್ ಕೋರ್ಟ್‌, ವಿಶಾಲವಾದ ಹೊರಾಂಗಣ ಸೇರಿ ಇನ್ನೂ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ.

ಹೆಚ್ಚುವರಿ ಐಷಾರಾಮಿ ಬಯಸಿದರೆ ಅತಿಥಿಗಳು ಖಾಸಗಿಯಾಗಿ ಅಡುಗೆ ಮಾಡುವವರು, ವೈಯಕ್ತಿಕ ಬಾರ್, ಯೋಗ, ಧ್ಯಾನಕ್ಕಾಗಿ ವೈಯಕ್ತಿಕ ತರಬೇತುದಾರರನ್ನು ಕೂಡ ಪಡೆದುಕೊಳ್ಳಬಹುದು.

ರೆಸಾರ್ಟ್ ಶುಲ್ಕಗಳು ಮತ್ತು ತೆರಿಗೆಗಳನ್ನು ಹೊರತುಪಡಿಸಿ ಇಲ್ಲಿರುವ ಜಾಗದ ಸಾಮಾನ್ಯ ರೂಂ ಬಾಡಿಗೆ ಪ್ರತೀ ರಾತ್ರಿಗೆ ರೂ 1.3 ಲಕ್ಷದಿಂದ ಪ್ರಾರಂಭವಾಗುತ್ತವೆ. ಅಲ್ಲಿಂದ ಐಶಾರಾಮಿಯಾಗಿರುವ  ಐದು ಬೆಡ್‌ರೂಮ್ ನಿವಾಸಕ್ಕೆ ಪ್ರತಿ ರಾತ್ರಿ ರೂ 31 ಲಕ್ಷದವರೆಗೆ  ಶುಲ್ಕವಿದೆ. ಈ ರೆಸಾರ್ಟ್ ಒಟ್ಟು 15 ಖಾಸಗಿ ನಿವಾಸಗಳನ್ನು ಹೊಂದಿದೆ. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ರೊನಾಲ್ಡ್ ಜುರ್ಚರ್ ವಿನ್ಯಾಸಗೊಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *