ದುಬಾರಿ ಬಂಗಲೆ.. ಐಷಾರಾಮಿ ಕಾರುಗಳು – ಗೂಗಲ್ ಸಿಇಒ ಸುಂದರ್ ಪಿಚೈ ವಿಲಾಸಿ ಜೀವನ

ದುಬಾರಿ ಬಂಗಲೆ.. ಐಷಾರಾಮಿ ಕಾರುಗಳು – ಗೂಗಲ್ ಸಿಇಒ ಸುಂದರ್ ಪಿಚೈ ವಿಲಾಸಿ ಜೀವನ

ಟೆಕ್ ಉದ್ಯಮದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಬೆಳೆದಿರುವ ಸುಂದರ್ ಪಿಚೈ ಅವರ ಜೀವನ ಶೈಲಿಯೂ ಅಷ್ಟೇ ಅದ್ಧೂರಿಯಾಗಿದೆ. ವಿಲಾಸಿ ಬಂಗಲೆ, ಐಷಾರಾಮಿ ಕಾರುಗಳು ಸೇರಿದಂತೆ ದುಬಾರಿ ಜೀವನ ನಡೆಸುತ್ತಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ ಭಾರತ ಮೂಲದವರಾಗಿದ್ದು ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವೊಂದು ಮಾಹಿತಿಗಳು ಇಲ್ಲಿವೆ.

ಇದನ್ನೂ ಓದಿ : ಆರ್ಡರ್‌ ಮಾಡಿ 4 ವರ್ಷದ ಬಳಿಕ ಬಂತು ಪ್ರಾಡಕ್ಟ್‌ – ಆನ್‌ ಲೈನ್‌ ಬುಕ್ಕಿಂಗ್‌ನಲ್ಲಿ ಮಹಾ ಎಡವಟ್ಟು!

ಸುಂದರ್ ಪಿಚೈ ಸಾಮಾನ್ಯ ವರ್ಗದ ಕುಟುಂಬದಲ್ಲಿ ಹುಟ್ಟಿ ವಿಶ್ವದ ಪ್ರಮುಖ ಕಂಪನಿಗಳ (Company) ಚುಕ್ಕಾಣಿ ಹಿಡಿದ ಅವರ ಸಾಧನೆಯ ಹಾದಿ ಎಲ್ಲರಿಗೂ ಸ್ಪೂರ್ತಿ. ವೃತ್ತಿಪರ ಯಶಸ್ಸನ್ನು ಸಾಧಿಸಿರುವ ಸುಂದರ್‌ ಪಿಚೈ ಸಹಜವಾಗಿಯೇ ಐಷಾರಾಮಿ ಜೀವನಶೈಲಿಯನ್ನು ಹೊಂದಿದ್ದಾರೆ. ಭಾರತದ ಚೆನ್ನೈನಲ್ಲಿ ಜನಿಸಿದ ಪಿಚೈ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಖರಗ್‌ಪುರದಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದರು. ನಂತರ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಸುಂದರ್‌ ಪಿಚೈ ಮಾರ್ಗದರ್ಶನದಲ್ಲಿ ಗೂಗಲ್ ಸಂಸ್ಥೆ ಗಮನಾರ್ಹ ಬೆಳವಣಿಗೆ ಹೊಂದಿತು. ಗೂಗಲ್ ಕ್ರೋಮ್, ಆಂಡ್ರಾಯ್ಡ್ ಮತ್ತು ಗೂಗಲ್ ಡ್ರೈವ್‌ನಂತಹ ವಿವಿಧ ಅದ್ಭುತ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಅವರ ಕಾರ್ಯತಂತ್ರದ ದೃಷ್ಟಿಕೋನ ಪ್ರಮುಖವಾಗಿದೆ. ಅಂದಹಾಗೆ ಪಿಚೈ ಅವರು Google ನ CEO ಆಗಿ ನೇಮಕಗೊಂಡಿದ್ದು 2015 ರಲ್ಲಿ.

ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಕೌಂಟಿಯ ಲಾಸ್ ಆಲ್ಟೋಸ್‌ನಲ್ಲಿರುವ ಅದ್ಭುತವಾದ ಬೆಟ್ಟದ ಮೇಲೆ 31.17 ಎಕರೆಗಳಷ್ಟು ವಿಶಾಲವಾದ ವಿಸ್ತಾರದಲ್ಲಿ ಪಿಚೈ ಭವ್ಯವಾದ ಬಂಗಲೆ ಹೊಂದಿದ್ದಾರೆ. ಈ ಬಂಗಲೆಯ ವಾಸ್ತುಶಿಲ್ಪ ಅದ್ಭುತವಾಗಿದೆ. ಇದು ಅವರ ಪತ್ನಿ ಅಂಜಲಿಯ ಕಲಾತ್ಮಕ ಸ್ಪರ್ಶದಿಂದ ರೂಪುಗೊಂಡಿದೆ. ಕೇವಲ ಅದರ ಅಲಂಕಾರಿಕ ವೆಚ್ಚವೇ 45 ಕೋಟಿ ರೂಪಾಯಿಗಳು ಎನ್ನಲಾಗಿದೆ.

ಒಟ್ಟಾರೆ, ಸುಂದರ್‌ ಪಿಚೈ ಅವರು ಹೊಂದಿರುವ ಅದ್ಭುತ ಐಷಾರಾಮಿ ಸಂಗ್ರಹಗಳಲ್ಲಿ ಇವು ಕೆಲವೇ ಕೆಲವು. ಆದರೆ ಚೆನ್ನೈನ ಮದ್ಯಮದ ವರ್ಗದ ಜೀವನದಲ್ಲಿ ಜನಿಸಿ ಇಂದು ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾಗಿರುವ ಸುಂದರ್‌ ಪಿಚೈ ಅವರ ಸಾಧನೆ ಮಾತ್ರ ಎಲ್ಲರಿಗೂ ಸ್ಪೂರ್ತಿಯಾಗುವಂಥದ್ದು.

suddiyaana