ಭಾರತಕ್ಕೆ ಇಬ್ಬರು ಬಾಹುಬಲಿಗಳ ಎಂಟ್ರಿ! – ಉದಯಗಿರಿ – ಹಿಮಗಿರಿ ವ್ಯೂಹ!
ಶತ್ರುಗಳಿಗೆ ನಡುಕ ಶುರುವಾಗಿದ್ದೇಕೆ?

ಭಾರತಕ್ಕೆ ಇಬ್ಬರು ಬಾಹುಬಲಿಗಳ ಎಂಟ್ರಿ! –  ಉದಯಗಿರಿ – ಹಿಮಗಿರಿ ವ್ಯೂಹ!ಶತ್ರುಗಳಿಗೆ ನಡುಕ ಶುರುವಾಗಿದ್ದೇಕೆ?

ಶತ್ರುಗಳ ಎದೆ ಸೀಳುವುದ್ದಕ್ಕೆ ಭಾರತಕ್ಕೆ ಮತ್ತೆ ಆನೆ ಬಲ ಬಂದಿದೆ. ಅದರಲ್ಲೂ ಹಿಂದೂ ಮಹಾಸಾಗರದದಲ್ಲಿ ಕಡಲ ಶಕ್ತಿಯನ್ನು ಎದುರಿಸಲು ಭಾರತ ಸೇನೆಗೆ ಶಕ್ತಿ ಹೆಚ್ಚಾಗಿದೆ.  ಭಾರತೀಯ ನೌಕಾಪಡೆ ಅಭಿವೃದ್ಧಿಪಡಿಸಿರುವ ಎರಡು ಅತ್ಯಾಧುನಿಕ ಯುದ್ಧನೌಕೆಗಳಾದ ಉದಯಗಿರಿ – F35  ಹಾಗೂ ಹಿಮಗಿರಿ – F34 ನೌಕೆಗಳು ಸೇನೆಗ ಸೇರಿವೆ.  ಎರಡೂ ಸ್ವದೇಶಿ ನಿರ್ಮಿತ ನೌಕೆಗಳನ್ನು ಏಕಕಾಲಕ್ಕೆ ಸೇನೆಗೆ ಎಂಟ್ರಿಕೊಟ್ಟಿದ್ದು, ಇವುಗಳ ತಾಕತ್ತು ನೋಡಿ ಶತ್ರು ರಾಷ್ಟ್ರಗಳಿಗೆ ಭಯ ಹುಟ್ಟಿದೆ.  ಇದೇ ಮೊದಲ ಸಲ ಬೇರೆ ಬೇರೆ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಯುದ್ಧನೌಕೆಗಳನ್ನು ವಿಶಾಖಪಟ್ಟಣದಲ್ಲಿ ಏಕಕಾಲಕ್ಕೆ ನೌಕಾಪಡೆಗೆ ಸೇರಿಸಲಾಗಿದೆ.  ವಿಶಾಖಪಟ್ಟಣಂನ ಪೂರ್ವ ನೌಕಾ ಕಮಾಂಡ್‌ನಲ್ಲಿ ಎರಡು ಅತ್ಯಾಧುನಿಕ ರಹಸ್ಯ ಯುದ್ಧ ನೌಕೆಗಳಾದ INS ಉದಯಗಿರಿ ಮತ್ತು ಐಎನ್ಎಸ್ ಹಿಮಗಿರಿ ಗಳನ್ನು ಏಕಕಾಲದಲ್ಲಿ ನಿಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ವಹಿಸಿದ್ದರು. ಎರಡೂ ಹಡಗುಗಳಿಗೆ ದಶಕಗಳ ಕಾಲ ಭಾರತಕ್ಕೆ ಸೇವೆ ಸಲ್ಲಿಸಿದ ಹಿಂದಿನ ಯುದ್ಧನೌಕೆಗಳ ಹೆಸರುಗಳನ್ನು ಇಡಲಾಗಿದೆ.

ಐಎನ್ಎಸ್ ಉದಯಗಿರಿ 1976 ರಲ್ಲಿ ಕಾರ್ಯಾರಂಭ ಮಾಡಿ 2007 ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿತ್ತು. ಐಎನ್ಎಸ್ ಹಿಮಗಿರಿ 1974 ಮತ್ತು 2005 ರ ನಡುವೆ ಸೇವೆಯಲ್ಲಿದ್ದ ಲಿಯಾಂಡರ್-ಕ್ಲಾಸ್ ಯುದ್ಧನೌಕೆಯಿಂದ ಪಡೆದಿದೆ. ಎರಡೂ ಫ್ರಿಗೇಟ್‌ಗಳು ಪ್ರಾಜೆಕ್ಟ್ 17A ಗೆ ಸೇರಿವೆ .ಇದನ್ನು ನೀಲಗಿರಿ-ವರ್ಗದ ಸ್ಟೆಲ್ತ್ ಫ್ರಿಗೇಟ್‌ಗಳು ಎಂದೂ ಕರೆಯುತ್ತಾರೆ. ಉದಯಗಿರಿ ಹಾಗೂ ಹಿಮಗಿರಿ ನೌಕೆಗಳಲ್ಲಿ ಶೇ.75ರಷ್ಟು ಸ್ವದೇಶಿ ಬಿಡಿಭಾಗಗಳನ್ನು ಬಳಸಲಾಗಿದೆ. ಹಾಗಿದ್ರೆ ಇವುಗಳ ವಿಶೇಷತೆಯೇನು? ಅನ್ನೋದ್ದನ್ನ ನೋಡೋದಾದ್ರೆ..

ಶತ್ರು ರೇಡಾರ್‌ಗಳ ಕಣ್ಣಪ್ಪಿಸಿ ಸಾಗುವಂಥ ಛಾತಿಯೂ ಇವುಗಳಿಗಿವೆ. ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳನ್ನು ಒಳಗೊಂಡಿರುವ ಐಎನ್‌ಎಸ್ ಉದಯಗಿರಿ ಹಾಗೂ ಐಎನ್ಎಸ್ ಹಿಮಗಿರಿಗಳು ಆತ್ಮನಿರ್ಭರ ಭಾರತದ ಪ್ರತೀಕವಾಗಿವೆ. ಬ್ರಹ್ಮಸ್ ನೂಪರ್‌ನಾನಿಕ್ ಕ್ಷಿಪಣಿಗಳು, ಮಧ್ಯಮ ಶ್ರೇಣಿ ಬರಾಕ್ 8 ಕ್ಷಿಪಣಿ ವ್ಯವಸ್ಥೆ, ಶತ್ರು ಹಡ ಗುಗಳು, ವೈಮಾನಿಕ ಗುರಿ ಧ್ವಂಸ ಮಾಡಬಲ್ಲ 76 ಎಂಎಂ ಬಂದೂಕುಗಳು, ಜಲಾಂತರ್ಗಾಮಿ ಪತ್ತೆ ಹಚ್ಚಿ ನಾಶಪಡಿಸಬಲ್ಲಂಥ ಸೋನಾರ್. ಟಾರ್ಪೆ ಡೋಗಳನ್ನು ಹೊಂದಿದೆ. ಏಕಕಾಲದಲ್ಲಿ ಹಲವು ಗುರಿ ಪತ್ತೆಹಚ್ಚಿ ದಾಳಿ ನಡೆಸಬಲ್ಲ ಎಲ್‌ಎಂ- 2248 ಎಂಎಫ್ ಸ್ಟಾರ್ ರೇಡಾರ್ ವ್ಯವಸ್ಥೆ ಇದೆ.

ಶತ್ರು ಎದೆ ನಡುಗಿಸೋ ಉದಯಗಿರಿ, ಹಿಮಗಿರಿ

INS ಹಿಮಗಿರಿ ನಿರ್ಮಾಣಕ್ಕೆ 19,294 ಕೋಟಿ ರೂ. ವ್ಯಯ

INS ಉದಯಗಿರಿ ನಿರ್ಮಾಣಕ್ಕೆ 21.000 ಕೋಟಿ ರೂ. ವ್ಯಯ

ಹಿಮಗಿರಿ ಮತ್ತು ಉದಯಗಿರಿ 6700 ಟನ್ ತೂಕದ ಯುದ್ಧನೌಕೆಗಳು

ಶಿವಾಲಿಕ್ ವರ್ಗದ ಯುದ್ಧನೌಕೆಗಳಿಗಿಂತ ಶೇ.5 ಪಟ್ಟು ದೊಡ್ಡ ನೌಕೆಗಳು

ಉದಯಗಿರಿ ನೌಕೆ ಮುಂಬೈನ ಮಡಗಾಂವ್‌ ಡಾಕ್ ಹಡಗು ನಿರ್ಮಾಣ ಸಂಸ್ಥೆ   ಅಭಿವದ್ಧಿಪಡಿಸಿದೆ. ಇನ್ನೂ ಹಿಮಗಿರಿ ಯುದ್ಧನೌಕೆಯನ್ನು ಕೋಲ್ಕತ್ತದಲ್ಲಿರುವ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಎಂಜಿನಿಯರ್ಸ್‌ ಸಂಸ್ಥೆ   ನಿರ್ಮಿಸಿದೆ.   ಈ ನೌಕೆಯೊಳಗೆ  ಬ್ರಹ್ಮೋಸ್ ನೂಪರ್‌ ಸಾನಿಕ್ ಕ್ಷಿಪಣಿಗಳು.. ಮಧ್ಯಮ ಶ್ರೇಣಿಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಬರಾಕ್ 8  ಕ್ಷಿಪಣಿ, 76 MM. ಎಂಆರ್ ಬಂದೂಕು ಹಾಗೂ 30 MM. ಹಾಗೂ 12.7 MM. ಬಂದೂಕುಗಳನ್ನೂ ಅಳವಡಿಸಲಾಗಿದೆ. ಜೊತೆಗೆ ಜಲಾಂತರ್ಗಾಮಿ ನಿರೋಧಕ ಹಾಗೂ ನೀರಿನೊಳಗೆ ಬಳಸುವ ಯಾವುದೇ ಶಸ್ತ್ರಾಸ್ತ್ರಗಳಿಂದ ರಕ್ಷಿಸಿಕೊಳ್ಳಬಲ್ಲ ಶಕ್ತಿಶಾಲಿ ನೌಕೆ ಇದಾಗಿದೆ. ಹಲವು ಗುರಿ ಪತ್ತೆಹಚ್ಚಿ ದಾಳಿ ನಡೆಸಬಲ್ಲ MM- 2248 ಎಂಎಫ್ ಸ್ಟಾರ್ ರೇಡಾರ್ ವ್ಯವಸ್ಥೆಯಲ್ಲಿ ಈ ನೌಕೆಗಳಲ್ಲಿ ಅವಳವಡಿಕೆ ಮಾಡಲಾಗಿದೆ.

ಕಡಲಿನಲ್ಲಿ ಈಗಾಗಲೇ ಕಠಿಣ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಯಂತ್ರೋಪಕರಣಗಳು, ಅಗ್ನಿಶಾಮಕ ವ್ಯವಸ್ಥೆ, ಹಾನಿ ನಿಯಂತ್ರಣ, ನೌಕಾ ನಿರ್ವಹಣೆ ಮತ್ತು ಸಂಪರ್ಕ ವ್ಯವಸ್ಥೆಗಳ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಿಯೇ ಅಖಾಡಕ್ಕೆ ಇಳಿಸಲಾಗಿದೆ.  ಇದಲ್ಲದೇ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಸಂಸ್ಥೆಯಿಂದ ಅಭಿವೃದ್ಧಿಯಾದ 100ನೇ ಹಡಗು ಉದಯಗಿರಿ ಎಂಬುದು ಮತ್ತೊಂದು ವಿಶೇಷ. ಈ ನೌಕೆಗಳಿಂದ ಸುಮಾರು 4,000 ನೇರ ಉದ್ಯೋಗಗಳು ಮತ್ತು 10,000 ಕ್ಕೂ ಹೆಚ್ಚು ಪರೋಕ್ಷ ಉದ್ಯೋಗ ಸಿಗಲಿದೆ.

Kishor KV