₹20 ಕೋಟಿಗೆ CSKಗೆ ಹಾರ್ದಿಕ್ ಪಾಂಡ್ಯ – ಮುಂಬೈಗೆ ದುಬೆ, ಬ್ರೆವಿಸ್ ಟ್ರೇಡ್?
ಫ್ರಾಂಚೈಸಿಗಳ ಲೆಕ್ಕಾಚಾರ ಹೇಗಿದೆ?

ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೇ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡಗಳು. ಹಾಗೇ ಅತೀ ಹೆಚ್ಚು ಬಾರಿ ಅಂದ್ರೆ ಐದೈದು ಸಲ ಟ್ರೋಫಿ ಗೆದ್ದಿರೋ ಸಕ್ಸಸ್ಫುಲ್ ಫ್ರಾಂಚೈಸಿಗಳು. ಆದ್ರೆ ಕಳೆದ ಮೂರು ಸೀಸನ್ಗಳಿಂದ ಎರಡೂ ತಂಡಗಳ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ ಇದೆ. ಅದ್ರಲ್ಲೂ ಸಿಎಸ್ಕೆ ಅಂತೂ ಪ್ಲೇಆಫ್ಸ್ಗೆ ಬರೋಕೂ ಸಾಧ್ಯವಾಗಿಲ್ಲ. ಇದೀಗ ಮುಂದಿನ ಆವೃತ್ತಿಗೆ ಸೂಪರ್ ಸ್ಟ್ರಾಂಗ್ ಆಗಿ ಕಂ ಬ್ಯಾಕ್ ಮಾಡೋಕೆ ಭರ್ಜರಿ ಪ್ಲ್ಯಾನ್ ಸಿದ್ಧವಾಗಿದೆ. ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ಗೆ ಗಾಳ ಹಾಕಿದ್ದಾರೆ.
ಇದನ್ನೂ ಓದಿ : ಟಿ20Iನಿಂದ ಅಭಿಷೇಕ್‌ಗೆ ಕೋಕ್? ರೋಹಿತ್ ಜೊತೆ ವೈಭವ್ ಓಪನರ್?
ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿ ಬಂದ್ಮೇಲೆ ತಂಡದಲ್ಲಿ ಎಲ್ಲವೂ ಸರಿ ಇಲ್ಲ. ತಂಡದ ರಿಸಲ್ಟ್ ಕೂಡ ಅಷ್ಟಕ್ಕಷ್ಟೇ ಇದೆ. ಹೀಗಾಗಿ ಎಂಐಗೆ ಹೊಸ ಕ್ಯಾಪ್ಟನ್ ನೇಮಕದ ಬಗ್ಗೆ ಅಂಬಾನಿ ಬ್ರಿಗೇಡ್ನಲ್ಲಿ ಚರ್ಚೆಗಳಿದೆ. ಇದರ ಭಾಗವಾಗಿಯೇ ಈಗ ಹಾರ್ದಿಕ್ ಪಾಂಡ್ಯರನ್ನ ಕೈಬಿಡೋ ಪ್ಲ್ಯಾನ್ ನಡೀತಿದ್ದು ಚೆನ್ನೈ ಸೂಪರ್ ಕಿಂಗ್ಸ್ ಫುಲ್ ಅಲರ್ಟ್ ಆಗಿದೆ.
20ಕೋಟಿ ರೂ.ಗೆ ಚೆನ್ನೈ ತೆಕ್ಕೆಗೆ ಹಾರ್ದಿಕ್ ಪಾಂಡ್ಯ?
ಸದ್ಯ ಐಪಿಎಲ್ನಲ್ಲಿ ಕೇಳಿ ಬರ್ತಿರೋ ಅತೀದೊಡ್ಡ ಡೀಲ್ ಅಂದ್ರೆ ಇದೇ ನೋಡಿ. ಚೆನ್ನೈ ಮತ್ತು ಮುಂಬೈ ನಡುವೆ ಹಾರ್ದಿಕ್ ಪಾಂಡ್ಯ ವಿಚಾರವಾಗಿ ಸಾಕಷ್ಟು ಸುತ್ತಿನ ಮಾತುಕತೆಗಳಾಗಿವೆ. ಚೆನ್ನೈ ಆಫರ್ ಮುಂಬೈಗೆ ಇಷ್ಟ ಆಗ್ತಿಲ್ಲ.. ಮುಂಬೈ ಆಫರ್ ಚೆನ್ನೈ ಒಪ್ತಾ ಇಲ್ಲ. ಹೀಗಿದ್ರೂ ಬರೋಬ್ಬರಿ 20 ಕೋಟಿ ರೂಪಾಯಿಗೆ ಯೆಲ್ಲೋ ಆರ್ಮಿಗೆ ಹಾರ್ದಿಕ್ ಪಾಂಡ್ಯ ಜಾಯ್ನ್ ಆಗ್ತಾರೆ ಅನ್ನೋ ಸುದ್ದಿ ಮಾತ್ರ ಹಲ್ಚಲ್ ಎಬ್ಬಿಸಿದೆ. ಸದ್ಯದ ಡವಲಪ್ಮೆಂಟ್ಗಳ ಪ್ರಕಾರ ಹಾರ್ದಿಕ್ ಪಾಂಡ್ಯರನ್ನ ಚೆನ್ನೈಗೆ ಬಿಟ್ಟುಕೊಡೋಕೆ ಮುಂಬೈ ಇಂಡಿಯನ್ಸ್ ತಂಡ ಸಿಎಸ್ಕೆ ತಂಡದ ಯುವ ಆಟಗಾರ ಆಯುಷ್ ಮ್ಹಾತ್ರೆ ಜೊತೆಗೆ ಹಣಕ್ಕೆ ಡಿಮ್ಯಾಂಡ್ ಮಾಡಿತ್ತು. 19 ವರ್ಷದ ಮ್ಹಾತ್ರೆ ಈಗಾಗ್ಲೇ ಐಪಿಎಲ್ ಅಖಾಡದಲ್ಲಿ ತಮ್ಮ ಆರ್ಭಟ ಸ್ಟಾರ್ಟ್ ಮಾಡಿದ್ದಾರೆ. ಹೀಗಾಗಿ ಭವಿಷ್ಯದ ಪ್ಲೇಯರ್ ಆಗಿ ರೂಪಿಸೋಕೆ ಮುಂಬೈ ಪಡೆಯಲ್ಲಿ ಪ್ಲ್ಯಾನ್ ಸಿದ್ಧವಾಗಿದೆ. ಆದ್ರೆ ಮ್ಹಾತ್ರೆಯನ್ನ ಬಿಟ್ಟುಕೊಡೋಕೆ ಚೆನ್ನೈ ಸೂಪರ್ ಕಿಂಗ್ಸ್ ಸುತಾರಾಂ ರೆಡಿ ಇಲ್ಲ. ಇದೇ ಕಾರಣಕ್ಕೆ ಎರಡೂ ಫ್ರಾಂಚೈಸಿಗಳ ನಡುವಿನ ಡೀಲ್ ಸ್ವಲ್ಪ ಟೈಂ ತಗೊಳ್ತಿದೆ. ಹಾಗೇ ಇದಕ್ಕೆ ಆಲ್ಟರ್ ನೇಟಿವ್ ಆಗಿ ಮುಂಬೈ ಹೊಸ ಆಫರ್ ನೀಡಿದೆ.
ದುಬೆ ಮತ್ತು ಬ್ರೆವಿಸ್ ಜೊತೆ 10 ಕೋಟಿ ನೀಡುತ್ತಾ ಚೆನ್ನೈ?
ಮ್ಯಾಚ್ ವಿನ್ನಿಂಗ್ ಪ್ಲೇಯರ್ಗಳಿಲ್ಲದೆ ಖದರ್ ಕಳ್ಕೊಂಡಿರೋ ಚೆನ್ನೈ ತಂಡದಲ್ಲಿ ಮತ್ತೆ ಹಳೇ ಆರ್ಭಟ ತೋರಿಸೋಕೆ ಹೊಸ ಹೊಸ ಐಡಿಯಾ ಮಾಡ್ತಿದೆ. ಶತಾಯ ಗತಾಯ ಹಾರ್ದಿಕ್ ಪಾಂಡ್ಯರನ್ನ ಚೆನ್ನೈ ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮುಂಬೈ ಮುಂದೆ ಹೊಸ ಪ್ರಸ್ತಾವನೆ ಇಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಹಾಗೇ ಆಲ್ರೌಂಡರ್ ಶಿವಂ ದುಬೆಯನ್ನ ಮುಂಬೈ ಇಂಡಿಯನ್ಸ್ಗೆ ಕಳಿಸೋದ್ರ ಜತೆ ಹೆಚ್ಚುವರಿ 10 ಕೋಟಿ ಹೆಚ್ಚುವರಿ ಕ್ಯಾಶ್ ಡೀಲ್ ಮಾಡಿಕೊಳ್ಳೋಕೆ ಚೆನ್ನೈ ಆಫರ್ ಕೊಟ್ಟಿದೆ. ಅಲ್ಲಿಗೆ ಹಾರ್ದಿಕ್ ಪಾಂಡ್ಯ ಮೇಲೆ 20 ಕೋಟಿಗೂ ಹೆಚ್ಚಿನ ಇನ್ವೆಸ್ಟ್ಮೆಂಟ್ಗೆ ಮುಂದಾಗಿದೆ. ಆದ್ರೆ ಮುಂಬೈ ಮಾತ್ರ ಶಿವಂ ದುಬೆ ಜೊತೆ ಆಯುಷ್ ಮ್ಹಾತ್ರೆಯನ್ನ ನೀಡಿದ್ರೆ ಪಾಂಡ್ಯರನ್ನ ಬಿಟ್ಟುಕೊಡೋದಾಗಿ ಹೇಳಿದೆ. ಇದಕ್ಕೆ ಚೆನ್ನೈ ಒಪ್ಪಿಗೆ ಇಲ್ಲ. ದುಬೆಯನ್ನ ಬಿಟ್ಟುಕೊಟ್ರೂ ಆಯುಷ್ ಮ್ಹಾತ್ರೆಯನ್ನ ಕಳಿಸಲ್ಲ ಅಂದಿದ್ದಾರೆ. ಹೀಗಾಗೇ ಈ ಬಿಗ್ ಡೀಲ್ ಸ್ವಲ್ಪ ಡಿಲೇ ಆಗ್ತಿದೆ. ಹಾಗ್ ನೋಡಿದ್ರೆ ಹಾರ್ದಿಕ್ ಪಾಂಡ್ಯ ಕಳೆದ ಸೀಸನ್ನಲ್ಲಿ ಅಷ್ಟೇನು ಸದ್ದು ಮಾಡಿಲ್ಲ.
ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಂಕಾಗಿದ್ದ ಹಾರ್ದಿಕ್!
2026ರ ಐಪಿಎಲ್ನಲ್ಲಿ ಮುಂಬೈ ಪರ ಹಾರ್ದಿಕ್ ಪಾಂಡ್ಯ ಪರ್ಫಾಮೆನ್ಸ್ ಕೂಡ ಅಷ್ಟಕ್ಕಷ್ಟೇ ಇದೆ. 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಪಾಂಡ್ಯ 22ರ ಆವರೇಜ್ನಲ್ಲಿ 206 ರನ್ಸ್ ಅಷ್ಟೇ ಕಲೆ ಹಾಕಿದ್ದು. ಯಾವುದೇ ಅರ್ಧಶತಕವೂ ಬಂದಿಲ್ಲ. ಇನ್ನು ಬೌಲಿಂಗ್ ಅಂತಾ ನೋಡೋದಾದ್ರೆ 9 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು 4 ವಿಕೆಟ್ ಅಷ್ಟೇ ತೆಗೆದಿದ್ದಾರೆ. 11.43ರ ಎಕಾನಮಿ ರನ್ಸ್ ಬಿಟ್ಟುಕೊಟ್ಟು ದುಬಾರಿಯಾಗಿದ್ರು. ಅದ್ರಲ್ಲೂ ಡೆತ್ ಓವರ್ ಗಳಲ್ಲಿ 15.75ರ ಎಕಾನಮಿಯಲ್ಲಿ ರನ್ಸ್ ಕೊಟ್ಟಿದ್ರು. ಇನ್ನು ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಮುಂಬೈ ತಂಡ ಕೇವಲ 4 ಪಂದ್ಯಗಳನ್ನ ಗೆದ್ದು ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಹೀಗಿದ್ರೂ ಹಾರ್ದಿಕ್ ಪಾಂಡ್ಯ ಸೀಮ್ ಆಲ್ರೌಂಡರ್ ಆಗಿರೋದ್ರಿಂದ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಸದ್ದು ಮಾಡೋ ಸಾಮರ್ಥ್ಯ ಇದೆ. ಇದೇ ಕಾರಣಕ್ಕೆ ಪಾಂಡ್ಯ ಮೇಲೆ ಕೋಟಿ ಕೋಟಿ ಸುರಿಯೋಕೂ ತಂಡಗಳು ರೆಡಿ ಇವೆ. ಒಂದು ವೇಳೆ ಚೆನ್ನೈ ಜೊತೆಗಿನ ಡೀಲ್ ಕುದುರದೇ ಇದೆ ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಹಾರ್ದಿಕ್ ಪಾಂಡ್ಯ ಅವರನ್ನು ಹೈಜಾಕ್ ಮಾಡೋಕೆ ರೆಡಿಯಾಗಿವೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಯಾವ ಫ್ರಾಂಚೈಸಿ ಸೇರ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

