ಕಾಂಗರೂಗಳ ವಿರುದ್ಧ ರನ್ ಗಳಿಸಲು ಟೀಮ್ ಇಂಡಿಯಾ ಹೈರಾಣ – ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿರುವ ಭಾರತ

ಕಾಂಗರೂಗಳ ವಿರುದ್ಧ ರನ್ ಗಳಿಸಲು ಟೀಮ್ ಇಂಡಿಯಾ ಹೈರಾಣ – ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿರುವ ಭಾರತ

ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಫೈನಲ್ ಪಂದ್ಯ ನಡೆಯುತ್ತಿದೆ. ಆದರೆ, ಟಾಪ್ ಬ್ಯಾಟ್ಸ್‌ಮನ್‌ಗಳು ವಿಫಲಾಗಿರುವುದು ಟೀಮ್ ಇಂಡಿಯಾಕ್ಕೆ ಭಾರೀ ಹಿನ್ನಡೆ ಸಿಕ್ಕಿದೆ. ಮೊದಲ ದಿನ ಬ್ಯಾಟಿಂಗ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದ ಆಸ್ಟ್ರೇಲಿಯಾ, ದ್ವಿತೀಯ ದಿನ ಬೌಲಿಂಗ್‌ನಲ್ಲೂ ಪಾರುಪತ್ಯ ಮೆರೆದಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಕಾಂಗರೂ ಪಡೆ 469 ರನ್ ಕಲೆಹಾಕಿತ್ತು. ಆದರೆ, ಭಾರತ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ.

ಇದನ್ನೂ ಓದಿ:  ವಾಂಖೆಡೆ ಸ್ಟೇಡಿಯಂನಲ್ಲಿ ‘ಧೋನಿ’ ಆಸನ – ವಿಜಯ ಸ್ಮಾರಕ ಉದ್ಘಾಟಿಸಿದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್

318 ರನ್‌ಗಳ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ. ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 469 ರನ್‌ಗೆ ಆಲೌಟ್ ಆಯಿತು. ಭಾರತದ ಪರ ಸಿರಾಜ್ 4 ವಿಕೆಟ್ ಕಿತ್ತರೆ ಶಾರ್ದೂಲ್ ಠಾಕೂರ್ ಹಾಗೂ ಶಮಿ ತಲಾ 2ವಿಕೆಟ್‌ಗಳನ್ನು ಪಡೆದರು. ಭಾರತ ಪರ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮೊದಲ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಇಬ್ಬರೂ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ನಾಯಕ ರೋಹಿತ್ ಕೇವಲ 15 ರನ್‌ಗಳಿಗೆ ಪ್ಯಾಟ್ ಕಮ್ಮಿನ್ಸ್ ಎಸತೆದಲ್ಲಿ ಎಲ್‌ಬಿ ಬಲೆಗೆ ಬಿದ್ದರೆ ಗಿಲ್ ಆಟ 13 ರನ್‌ಗಳಿಗೆ ಅಂತ್ಯವಾಯಿತು. ಬಳಿಕ ಕ್ರೀಸ್‌ಗೆ ಬಂದ ಚೇತೇಶ್ವರ ಪೂಜಾರ 14 ರನ್, ವಿರಾಟ್ ಕೊಹ್ಲಿ 14 ರನ್ ಗಳಿಸಿ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಉತ್ತಮ ಇನ್ನಿಂಗ್ ಕಟ್ಟಿ ತಂಡಕ್ಕೆ ನೆರವಾದರು. ರಹಾನೆ ಮತ್ತು ಜಡೇಜಾ ಜೋಡಿ 71 ರನ್‌ಗಳ ಜೊತೆಯಾಟ ಆಡಿದರು. ಆದರೆ, ಅರ್ಧ ಶತಕದ ಹೊಸ್ತಿಲಿನಲ್ಲಿ ಎಡವಿದ ಜಡೇಜಾ 51 ಬಾಲ್‌ಗಳಲ್ಲಿ 7 ಬೌಂಡರಿ ಮತ್ತು ಸಿಕ್ಸರ್ ಸಮೇತ 48 ರನ್‌ಗೆ ನಿರ್ಗಮಿಸಿದರು. ಮತ್ತೊಂದೆಡೆ, 29 ರನ್ ಗಳಿಸಿರುವ ರಹಾನೆ ಹಾಗೂ 5 ರನ್ ಗಳಿಸಿರುವ ಶ್ರೀಕರ್ ಭರತ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದ್ದು 318 ರನ್‌ಗಳ ಹಿನ್ನಡೆಯಲ್ಲಿದೆ.

suddiyaana