RCB ಬೆನ್ನೇರಿದ ಇಂಜುರಿ ಭೂತ – ಸಾಲ್ಟ್, ಜೋಶ್ & ಟಿಮ್ ಟೆನ್ಷನ್
ಪಾಟಿದಾರ್ ಗೆ ಇನ್ನೆಷ್ಟು ದಿನ ರೆಸ್ಟ್?

RCB ಬೆನ್ನೇರಿದ ಇಂಜುರಿ ಭೂತ – ಸಾಲ್ಟ್, ಜೋಶ್ & ಟಿಮ್ ಟೆನ್ಷನ್ಪಾಟಿದಾರ್ ಗೆ ಇನ್ನೆಷ್ಟು ದಿನ ರೆಸ್ಟ್?

2026ರ ಐಪಿಎಲ್​ಗೆ ಇನ್ನೇನ್ ಜಸ್ಟ್ ಎರಡು ತಿಂಗಳಷ್ಟೇ ಬಾಕಿ. ಇದೇ ವಾರ ಡಬ್ಲ್ಯೂಪಿಎಲ್ ಕೂಡ ಸ್ಟಾರ್ಟ್ ಆಗ್ತಿದೆ. ಆದ್ರೆ ಹಾಲಿ ಚಾಂಪಿಯನ್ ಆಗಿರೋ ಮೆನ್ಸ್ ಟೀಮ್​ಗೆ ಈ ಸಲ ಇಂಜುರಿಯೇ ದೊಡ್ಡ ಭೂತವಾಗಿ ಕಾಡಲಿದೆ. ಯಾಕಂದ್ರೆ ಆರ್​ಸಿಬಿಯ ಪ್ರಮುಖ ನಾಲ್ವರು ಆಟಗಾರರು ಇಂಜುರಿಗೊಳಗಾಗಿದ್ದಾರೆ. ಌಂಡ್ ಈ ಎಲ್ರೂ ಕೂಡ ಪ್ಲೇಯಿಂಗ್ 11ನಲ್ಲಿ ಇರಲೇಬೇಕಾದ ಪ್ಲೇಯರ್ಸ್.

ಇದನ್ನೂ ಓದಿ : ಗಿಲ್ ಕ್ಯಾಪ್ಟನ್ಸಿಯಲ್ಲೇ NZ ಸರಣಿ – ಶ್ರೇಯಸ್ ವಾಪಸ್.. ಇಲ್ಲೂ ರಾಣಾ!

19ನೇ ಆವೃತ್ತಿಯ ಐಪಿಎಲ್​ನಲ್ಲಿ ದಿ ಮೋಸ್ಟ್ ಡೇಂಜರಸ್ ಟೀಂ ಎನ್ನುವಂತಿರೋ ಆರ್​ಸಿಬಿ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಬ್ಯಾಟಿಂಗ್, ಬೌಲಿಂಗ್, ಆಲ್​ರೌಂಡರ್ಸ್ ಅಂತಾ ಇಡೀ ಟೀಂ ಬ್ಯಾಲೆನ್ಸ್ ಆಗಿದೆ. ಮಿನಿ ಆಕ್ಷನ್ ಬಳಿಕ ತಂಡದ ಸ್ಟ್ರೆಂಥ್ ಇನ್ನುಷ್ಟು ಹೆಚ್ಚಾಗಿದೆ. ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಎಕ್ಸ್ ಪರ್ಟ್ಸ್ ಕೂಡ ಬೆಂಗಳೂರು ಟೀಂ ಬಗ್ಗೆ ಅಪ್ರಿಶಿಯೇಟ್ ಮಾಡಿದ್ದಾರೆ. ಆದ್ರೆ ಸೀಸನ್ ಆರಂಭಕ್ಕೂ ಮುನ್ನವೇ ಇಂಜುರಿಯೇ ದೊಡ್ಡ ವಿಲನ್ ಆಗುತ್ತಾ ಅನ್ನೋ ಅನುಮಾನ ಮೂಡಿದೆ.

ಆರ್ ಸಿಬಿಯ ನಾಲ್ವರು ಆಟಗಾರರು ಇಂಜುರಿ!

ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಐಪಿಎಲ್ ಅಬ್ಬರ ಸ್ಟಾರ್ಟ್ ಆಗುತ್ತೆ. ಹೀಗಿರುವಾಗ್ಲೇ ಆರ್​ಸಿಬಿಯ ಮೇನ್ ಪಿಲ್ಲರ್ಸ್ ನಂತಿರೋ ಫಿಲ್ ಸಾಲ್ಟ್, ರಜತ್ ಪಾಟಿದಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ಟಿಮ್ ಡೇವಿಡ್ ಇಂಜುರಿಗೆ ಒಳಗಾಗಿದ್ದಾರೆ. ಈ ನಾಲ್ವರು ಕೂಡ ಆರ್​ಸಿಬಿಯ ಪ್ರಮುಖ ಪ್ಲೇಯರ್​ಗಳೇ. ಅದ್ರಲ್ಲೂ ಸಿಂಗಲ್ಲಾಗಿ ನಿಂತು ಟೀಂ ಗೆಲ್ಲಿಸಿಕೊಡುವಂಥ ಸಾಮರ್ಥ್ಯ ಈ ಎಲ್ಲರಲ್ಲೂ ಇದೆ.

ಆರ್ ಸಿಬಿಗೆ ಗಾಯದ ಬರೆ!

ಬೆನ್ನಿನ ಗಾಯದಿಂದ ಬಳಲುತ್ತಿರುವ ಓಪನರ್ ಫಿಲ್ ಸಾಲ್ಟ್

ವಿಜಯ್ ಹಜಾರೆಯಿಂದ ಹೊರಗುಳಿದ ರಜತ್ ಪಾಟಿದಾರ್

ಬಿಬಿಎಲ್ ನಲ್ಲಿ ಗಾಯಗೊಂಡು ಹೊರಬಿದ್ದಿರುವ ಟಿಮ್ ಡೇವಿಡ್

ಗಾಯದಿಂದಾಗಿ ಆಷಸ್ ಸರಣಿಯಿಂದ ಹೊರಗಿರುವ ಹೇಜಲ್ ವುಡ್

ಈ ನಾಲ್ವರು ಆಟಗಾರರ ಗಾಯವೇ ಬೆಂಗಳೂರು ತಂಡಕ್ಕೆ ತಲೆಬಿಸಿ ತಂದಿಟ್ಟಿದೆ. ಟೂರ್ನಿ ಆರಂಭದ ವೇಳೆಗೆ ರಿಕವರ್ ಆಗ್ತಾರೆ. ಹಾಗೇ ಪಂದ್ಯಗಳನ್ನ ಆಡಲು ಪರ್ಮಿಷನ್ ಪಡೀತಾರ ಅನ್ನೋದೇ ಟೆನ್ಷನ್ ಆಗಿದೆ.

Shantha Kumari