ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಕಾಡ್ತಿದೆ ಪ್ರಮುಖ ಆಟಗಾರರ ಇಂಜುರಿ ಸಮಸ್ಯೆ

ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಕಾಡ್ತಿದೆ ಪ್ರಮುಖ ಆಟಗಾರರ ಇಂಜುರಿ ಸಮಸ್ಯೆ

ಬಾಂಗ್ಲಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ಈಗ ಪ್ರಮುಖ ಆಟಗಾರರು ಗಾಯಾಗೊಂಡಿರುವುದೇ ದೊಡ್ಡ ತಲೆನೋವಾಗಿದೆ. ಮೊದಲೇ ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ ಒದ್ದಾಡುತ್ತಿದೆ. ಸರಣಿ ಕೈತಪ್ಪಿ ಹೋದ ಆತಂಕದಲ್ಲಿರುವಾಗಲೇ ಪ್ರಮುಖ ಆಟಗಾರರು ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿರುವ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.

ಇದನ್ನೂ ಓದಿ :  ಪಂದ್ಯದ ಆರಂಭಕ್ಕೂ ಮೊದಲೇ ಶಮಿ ಔಟ್

ಢಾಕಾದ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆರಂಭಿಸಿತ್ತು. ಇನ್ನಿಂಗ್ಸ್ ನ 2ನೇ ಓವರ್ ವೇಳೆ ಮಹಮದ್ ಸಿರಾಜ್ ಎಸೆದ 2ನೇ ಎಸೆತದಲ್ಲಿ ಲಿಟ್ಟನ್ ದಾಸ್ ಬ್ಯಾಟ್ ಸವರಿದ್ದ ಚೆಂಡು ನೇರವಾಗಿ ಸ್ಲಿಪ್ ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಕೈಗೆ ಹೋಯಿತು. ಆದರೆ ಚೆಂಡಿನ ವೇಗ ಅರಿಯುವಲ್ಲಿ ವಿಫಲರಾದ ರೋಹಿತ್ ಅದನ್ನು ಕ್ಯಾಚ್ ತೆಗೆದುಕೊಳ್ಳುವ ಭರದಲ್ಲಿ ಗಾಯಗೊಂಡಿದ್ದಾರೆ. ಕೈಗೆ ಜೋರಾಗಿ ಏಟು ಬಿದ್ದ ಕಾರಣ ಒದ್ದಾಡಿದ ರೋಹಿತ್ ಶರ್ಮಾ, ಪೆವಿಲಿಯನ್‌ಗೆ ಮರಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಆಸ್ಪತ್ರೆಗೆ ತೆರಳಿದ್ದಾರೆ. ನಂತರ ಬ್ಯಾಟಿಂಗ್‌ಗೆ ಬಂದರೂ ಕೂಡಾ, ಬಿಸಿಸಿಐ ಮೂಲಗಳ ಪ್ರಕಾರ ರೋಹಿತ್ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಏಟು ಬಿದ್ದಿದೆ ಎನ್ನಲಾಗಿದೆ.

ಸರಣಿ ಆರಂಭಕ್ಕೂ ಮೊದಲು ಮಹಮದ್ ಶಮಿ ಗಾಯಗೊಂಡಿದ್ದರು. ನಂತರ ಪಂದ್ಯದ ವೇಳೆ ದೀಪಕ್ ಚಹರ್, ಕುಲ್ದೀಪ್ ಸೇನ್ ಕೂಡಾ ಇಂಜುರಿಯಿಂದ ಪಂದ್ಯದಿಂದ ಹೊರಬಿದ್ದಿದ್ದಾರೆ.

suddiyaana