ಕೈಗೆ ಗಾಯ ಆಯ್ತು ಎಂದು ಚಿಕಿತ್ಸೆಗೆ ಮೆಡಿಕಲ್ ಶಾಪ್ ಗೆ ಬಂದ ಕೋತಿ!

ಮಂಗನಿಂದ ಮಾನವ ಎಂಬ ಪ್ರಸಿದ್ಧ ನಾಣುಡಿಯನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಅದಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ಕೂಡ ನಾವು ನೋಡಿದ್ದೇವೆ. ಮನುಷ್ಯರಿಗೆ ಆರೋಗ್ಯ ಸರಿಯಿಲ್ಲದಿದ್ರೆ, ಏನಾದ್ರೂ ಗಾಯ ಆದ್ರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯೋದು ಕಾಮನ್.. ಇದೀಗ ಇಲ್ಲೊಂದು ಕೋತಿಗೆ ಗಾಯ ಆಗಿದ್ದು, ಚಿಕಿತ್ಸೆಗಾಗಿ ಮೆಡಿಕಲ್ ಶಾಪ್ ಗೆ ಹೋಗಿದೆ.
ಇದನ್ನೂ ಓದಿ: ಲಕ್ಷ್ಮೀ ಬಾಳಲ್ಲಿ ಮತ್ತೊಬ್ಬ ಎಂಟ್ರಿ! -ವೈಷ್ಣವ್ 2ನೇ ಮದುವೆಗೂ ಮುಹೂರ್ತ ಫಿಕ್ಸ್!
ಈ ಘಟನೆ, ಬಾಂಗ್ಲಾದೇಶದ ಮೆಹೆರ್‌ಪುರದಲ್ಲಿ ನಡೆದಿದ್ದು,ಇದ್ರ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಹೆರಾ ಫಾರ್ಮಸಿಯಲ್ಲಿ ಈ ಕೋತಿಗೆ ಚಿಕಿತ್ಸೆ ನೀಡಲಾಗಿದ್ದು, ಸಿಬ್ಬಂದಿಯ ನಡೆ ಮೆಚ್ಚುಗೆಗೆ ಕಾರಣವಾಗಿದೆ.
ಕೋತಿಯೊಂದು ಮೆಡಿಕಲ್ ಶಾಪ್ ಒಳಗೆ ನುಗ್ಗಿದೆ. ಮಂಗ ಶಾಪ್ ಒಳಗೆ ಬಂದಿರೋದನ್ನ ನೋಡಿ ಆರಂಭದಲ್ಲಿ ಎಲ್ಲರು ಶಾಕ್ ಆಗಿದ್ರು,.. ಬಳಿಕ ಅದರ ಗಾಯವನ್ನ ನೋಡಿ ಕೋತಿಗೆ ಚಿಕಿತ್ಸೆ ನೀಡಿದ್ದಾರೆ. ವ್ಯಕ್ತಿಯೊಬ್ಬ ಮಂಗನ ಗಾಯಕ್ಕೆ ಮುಲಾಮು ಹಚ್ಚುತ್ತಿರುವುದು ಕಂಡುಬಂದರೆ, ಮತ್ತೊಬ್ಬ ವ್ಯಕ್ತಿ ತನ್ನ ಕೈಗಳಿಂದ ಮಂಗವನ್ನು ಹಿಡಿದುಕೊಂಡು ಉಪಚಾರ ಮಾಡುವುದನ್ನು ನೋಡಬಹುದು.