ವೈಭವ್ ಸೂರ್ಯವಂಶಿಗೆ ಕೊನೆಗೂ ಚಾನ್ಸ್?- ಇಶಾನ್ ಕಿಶನ್ ಔಟ್!

ದೃಷ್ಟ ಒಲಿಯುತ್ತಾ? ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಈ ಯುವ ಆಟಗಾರನಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದ ಪಂದ್ಯದಿಂದ ಹೊರಗುಳಿದಿರುವುದು!
ಹೌದು, ತೊಡೆಯ ಸ್ನಾಯುವಿನ ಸೆಳೆತಕ್ಕೆ ಒಳಗಾಗಿರುವ ಇಶಾನ್ ಕಿಶನ್ ಎರಡನೇ ಟಿ20 ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾಗಿ ಅವರ ಸ್ಥಾನದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕೆಂಬ ಚರ್ಚೆ ಜೋರಾಗಿದೆ. ಈಗಾಗಲೇ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರೂ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗದೆ ಬೆಂಚ್ ಕಾಯುತ್ತಿದ್ದ ವೈಭವ್ ಪಾಲಿಗೆ ಇದು ದೊಡ್ಡ ಅವಕಾಶವಾಗಬಹುದು.
ಇದನ್ನೂ ಓದಿ: ಕಾಂಗರೂಗಳ ತವರಿನಲ್ಲಿ ಹರಿಣಗಳ ಅಬ್ಬರ – ಆಸೀಸ್ ವಿರುದ್ಧ 2ನೇ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ
ಇನ್ನೊಂದೆಡೆ, ಕೇವಲ ಎರಡು ದಿನಗಳ ಹಿಂದಷ್ಟೇ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ ಇನ್ನೂ ಸ್ವಲ್ಪ ಕಾಲ ಕಾಯಬೇಕಾಗಬಹುದು ಎಂಬ ಸುಳಿವು ನೀಡಿದ್ದರು. ಆದರೆ ಇದೀಗ ಇಶಾನ್ ಕಿಶನ್ ಅವರ ಗಾಯದ ಸಮಸ್ಯೆ ತಂಡದ ಆಯ್ಕೆ ಲೆಕ್ಕಾಚಾರವನ್ನೇ ಬದಲಿಸುವ ಸಾಧ್ಯತೆಯಿದೆ.
ಚಿಕ್ಕ ವಯಸ್ಸಿನಲ್ಲೇ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ವೈಭವ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಇದು ಸುವರ್ಣಾವಕಾಶವಾಗಬಹುದು.
ಆದರೆ ಪ್ರಶ್ನೆ ಒಂದೇ, ಇಶಾನ್ ಕಿಶನ್ ಅಲಭ್ಯರಾದರೆ ಟೀಮ್ ಮ್ಯಾನೇಜ್‌ಮೆಂಟ್ ವೈಭವ್‌ಗೆ ಮಣೆ ಹಾಕುತ್ತಾ? ಅಥವಾ ಮತ್ತೊಬ್ಬ ಆಟಗಾರನಿಗೆ ಅವಕಾಶ ನೀಡುತ್ತಾ? ಅಭಿಮಾನಿಗಳ ಕಣ್ಣು ಈಗ ಎರಡನೇ ಟಿ20 ಪಂದ್ಯದ ಪ್ಲೇಯಿಂಗ್ ಇಲೆವೆನ್ ಮೇಲಿದೆ!

ನೋಡಿರಿ

