ಜ್ವರ ಎಂದು ಆಸ್ಪತ್ರೆಗೆ ಹೋದ ಬಾಲಕಿ ಮಸಣ ಸೇರಿದ್ಲು! – ವೈದ್ಯನ ಎಡವಟ್ಟಿಗೆ 9ನೇ ಕ್ಲಾಸ್‌ ವಿದ್ಯಾರ್ಥಿನಿ ಬಲಿ!

ಜ್ವರ ಎಂದು ಆಸ್ಪತ್ರೆಗೆ ಹೋದ ಬಾಲಕಿ ಮಸಣ ಸೇರಿದ್ಲು! – ವೈದ್ಯನ ಎಡವಟ್ಟಿಗೆ 9ನೇ ಕ್ಲಾಸ್‌ ವಿದ್ಯಾರ್ಥಿನಿ ಬಲಿ!

ಈಗಿನ ಕಾಲದಲ್ಲಿ ಯಾರನ್ನೂ ನಂಬೋ ಹಾಗಿಲ್ಲ ಹಾಗಿಲ್ಲ. ನಕಲಿ ವೈದ್ಯರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ನಕಲಿ ವೈದ್ಯನ ಎಡವಟ್ಟಿಗೆ ಬಾಲಕಿಯೊಬ್ಬಳು ದುರಂತ ಅಂತ್ಯ ಕಂಡಿದ್ದಾಳೆ. ಜ್ವರ ಎಂದು ಆಸ್ಪತ್ರೆಗೆ ಹೋದಾಕೆ ಈಗ ಮಸಣ ಸೇರಿದ್ದಾಳೆ.

ಇದನ್ನೂ ಓದಿ: ಆಗಸದಲ್ಲೇ ಇಂಡಿಗೋ ವಿಮಾನದ ಇಂಜಿನ್‌ ವೈಫಲ್ಯ! – 161 ಪ್ರಯಾಣಿಕರು ಸೇಫ್‌ ಆಗಿದ್ದು ಹೇಗೆ?

ಈ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಗಢ ಗ್ರಾಮದಲ್ಲಿ ನಡೆದಿದೆ. ಸಿಂಧೂ ಮೃತ ಬಾಲಕಿ.

ಮಾರ್ಚ್ 26ರಂದು ಸಿಂಧೂ ಜ್ವರದಿಂದ ಬಳಲುತ್ತಿದ್ದಳು. ಹೀಗಾಗಿ ಆಕೆ ವೈದ್ಯರ ಬಳಿ ತೆರಳಿದ್ದಳು. ವೈದ್ಯ ಉತ್ತಮ ಕುಮಾರ್ ಸರ್ಕಾರ್ ಬಳಿ ಸಿಂಧೂ, ಚಿಕಿತ್ಸೆ ಪಡೆದುಕೊಂಡಿದ್ದಳು. ಉತ್ತಮ್‌ ಕುಮಾರ್‌ ಸಿಂಧೂಗೆ ಇಂಜೆಕ್ಷನ್‌ ನೀಡಿದ್ದಾನೆ. ಇಂಜೆಕ್ಷನ್‌ ಪಡೆದ ರಾತ್ರಿ ಸಿಂಧೂ ದೇಹದ ಮೇಲೆ ಗುಳ್ಳೆಗಳು ಕಾಣಿಸಿಕೊಂಡಿದ್ದು, ನೋವಿನಿಂದ ನರಳಾಡಿದ್ದಾಳೆ. ಪೋಷಕರು ಕೂಡಲೇ ಮಗಳನ್ನು ಮಾನ್ವಿ ಆಸ್ಪತ್ರೆಗೆ ದಾಖಲಿಸಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಿಂಧೂ ಸಾವನ್ನಪ್ಪಿದ್ದಾಳೆ.

ನಂತರ ಸಿಂಧೂ ಮೃತದೇಹವನ್ನು ಕವಿತಾಳ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಸಿಂಧೂ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಸದ್ಯ ಪೊಲೀಸರು ಉತ್ತಮ ಕುಮಾರ್ ಸರ್ಕಾರ್‌ನನ್ನು ವಶಕ್ಕೆ ಪಡೆದುಕೊಂಡಿದೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Shwetha M