ಕೊಹ್ಲಿ ಓದಿದ್ದೆಷ್ಟು ಗೊತ್ತಾ? – ಅನುಷ್ಕಾಗೆ ಬೆಂಗಳೂರಿನ ನಂಟೇನು?
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಈ ಬಾರಿಯ ಐಪಿಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರು.. ದಾಖಲೆ ಮೇಲೆ ದಾಖಲೆ ಬರ್ದಿದ್ರು.. ಕೊಹ್ಲಿ ಕ್ರೀಸ್ ನಲ್ಲಿ ಒಳ್ಳೆ ಪರ್ಫಾಮೆನ್ಸ್ ನೀಡ್ತಾ ಇದ್ರೆ.. ಇತ್ತ ಮುದ್ದಿನ ಮಡದಿ ಅನುಷ್ಕಾ ಶರ್ಮಾ ಸ್ಟೇಡಿಯಂಗೆ ಬಂದು ಸಪೋರ್ಟ್ ಮಾಡ್ತಾ ಇರ್ತಾರೆ. ಸೋಲಲ್ಲೂ, ಗೆಲುವಲ್ಲೂ ಈ ಕ್ಯೂಟ್ ಕಪಲ್ ಜೊತೆಯಾಗಿಯೇ ಇರ್ತಾರೆ. ಅಷ್ಟಕ್ಕೂ ವಿರುಷ್ಕಾ ದಂಪತಿ ಓದಿದ್ದು ಎಷ್ಟು? ಯಾವ ಕಾಲೇಜ್ ನಲ್ಲಿ ವಿದ್ಯಾಭಾಸ ಮಾಡಿದ್ರುಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಎಪಿಎಲ್ ಸೀಸನ್ 17 ರ ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿ ಪಾಲಾಗುತ್ತಾ?
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ.. ಈ ಕ್ಯೂಟ್ ಕಪಲ್ ಯಾವಾಗ್ಲೂ ಸುದ್ದಿಯಾಲ್ಲಿರ್ತಾರೆ.. ಪಂದ್ಯ ಯಾವುದೇ ಇರಲಿ.. ವಿರಾಟ್ ಉತ್ತಮವಾಗಿ ಆಡ್ಲಿ.. ಬಿಡ್ಲಿ.. ಅನುಷ್ಕಾ ಶರ್ಮಾ ತಮ್ಮ ಪತಿಯನ್ನು ಹುರಿದುಂಬಿಸಲು ಬಹುತೇಕ ಪಂದ್ಯಗಳಿಗೆ ಹಾಜರಾಗುತ್ತಾರೆ. ವಿರಾಟ್ ಗೆಲುವನ್ನು ಸಂಭ್ರಮಿಸುತ್ತಾರೆ. ಸೋತಾಗ ಅವರ ಜೊತೆ ನಿಲ್ಲುತ್ತಾರೆ. ಹೀಗಾಗಿ ಅನುಷ್ಕಾ ಶರ್ಮಾ ಎಂದರೆ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ಹೆಚ್ಚು ಪ್ರೀತಿ. ಬಹಳಷ್ಟು ಕಾಲ ಕೆಲ ಪಾರ್ಟಿ ಹಾಗೂ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಇಬ್ಬರೂ ಸಹ ಪ್ರೀತಿಯಲ್ಲಿರುವುದನ್ನು ಪರೋಕ್ಷವಾಗಿ ತಿಳಿಸಿದ್ದ, ಈ ಜೋಡಿ 2017ರ ಡಿಸೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರವೂ ಈ ದಂಪತಿಯ ನಡುವಿನ ಪ್ರೀತಿ ಎಲ್ಲರಿಗೂ ಆದರ್ಶವಾಗುವಂತಿದೆ. ಶತಕಗಳ ಮೇಲೆ ಶತಕ ಸಿಡಿಸುತ್ತಾ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿ ಕಿಂಗ್ ಆಫ್ ಕ್ರಿಕೆಟ್ ಎನಿಸಿಕೊಂಡಿದ್ದಾರೆ ವಿರಾಟ್ ಕೊಹ್ಲಿ.. ಹಾಗಿದ್ರೆ ಈ ಕೊಹ್ಲಿಯ ವಿದ್ಯಾರ್ಹತೆ ಎಷ್ಟು ಹಾಗೂ ಸದಾ ಪ್ರೀತಿಯ ಗಂಡನಿಗೆ ಸಪೋರ್ಟ್ ಮಾಡ್ತಾ ಇರುವ ಅನುಷ್ಕಾ ಶರ್ಮಾ ವಿದ್ಯಾರ್ಹತೆ ಏನು ಅಂತಾ ಅಭಿಮಾನಿಗಳು ಹುಡುಕುತ್ತಿದ್ದಾರೆ..
ವಿರಾಟ್ ಕೊಹ್ಲಿ 1988ರ ನವೆಂಬರ್ 5ರಂದು ದೆಹಲಿಯ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ವಿರಾಟ್ ಕೊಹ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಲಾಯರ್ ಆಗಿದ್ದರು ಹಾಗೂ ತಾಯಿ ಸರೋಜ್ ಕೊಹ್ಲಿ ಗೃಹಿಣಿ ಆಗಿದ್ದರು. ವಿರಾಟ್ ಕೊಹ್ಲಿ ದೆಹಲಿಯ ವಿಶಾಲ್ ಭಾರತಿ ಪಬ್ಲಿಕ್ ಸ್ಕೂಲ್ ಹಾಗೂ ದೆಹಲಿಯ ಪಶ್ಚಿಮ್ ವಿಹಾರದ ಸೇವಿಯರ್ ಕಾನ್ವೆಂಟ್ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ವ್ಯಾಸಾಂಗ ಮಾಡಿದ್ದು, ದ್ವಿತೀಯ ಪಿಯುಸಿವರೆಗಿನ ಓದಿದ್ದಾರೆ. ಅಂಡರ್ 19 ವಿಶ್ವಕಪ್ ತಂಡವನ್ನು ನಾಯಕನಾಗಿ ಮುನ್ನಡೆಸಿ ವಿಶ್ವಕಪ್ ಗೆಲ್ಲಿಸಿದ್ದ ವಿರಾಟ್ ಕೊಹ್ಲಿ ನಂತರ ಪದವಿ ಕಾಲೇಜು ಮೆಟ್ಟಿಲೇರಲಿಲ್ಲ. ಆ ಸಮಯಕ್ಕಾಗಲೇ ವಿರಾಟ್ ಕೊಹ್ಲಿ ಆಯ್ಕೆಗಾರರ ಮನಗೆದ್ದು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಸೇರಿಬಿಟ್ಟಿದ್ದರು.
ಇನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೂಲತಃ ಅಯೋಧ್ಯೆಯಲ್ಲಿ ಜನಿಸಿದ್ದರೂ ಸಹ ಓದಿದ್ದು, ಬೆಳದದ್ದೆಲ್ಲಾ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿಯೇ.. 1988ರ ಮೇ 1ರಂದು ಜನಿಸಿದ್ದ ಅನುಷ್ಕಾ ಶರ್ಮಾರ ತಂದೆ ಕರ್ನಲ್ ಅಜಯ್ ಕುಮಾರ್ ಶರ್ಮಾ ಸೇನಾಧಿಕಾರಿಯಾಗಿದ್ದರು.. ತಾಯಿ ಆಶಿಮಾ ಶರ್ಮಾ ಗೃಹಿಣಿಯಾಗಿದ್ದರು. ಇನ್ನು ಅನುಷ್ಕಾ ಶರ್ಮಾ ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಮತ್ತು ಮಾಡೆಲಿಂಗ್ ಕಡೆ ಒಲವನ್ನು ಹೊಂದಿದ್ದರು. ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಹಾಗೂ ಕ್ಲಾಸ್ ಟಾಪರ್ ಆಗಿದ್ದರು. ಅಸ್ಸಾಂನ ಸೇಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದ ಅನುಷ್ಕಾ ಶರ್ಮಾ ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ತನ್ನ ಪ್ರೌಢ ಶಿಕ್ಷಣವನ್ನು ಪಡೆದಿದ್ದರು. ಇನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು ಮುಗಿಸಿದ ಅನುಷ್ಕಾ ಶರ್ಮಾ ಕರೆಸ್ಪಾಂಡೆನ್ಸ್ ನಲ್ಲಿ ಎಕಾನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಬೆಂಗಳೂರಿನಲ್ಲೇ ಬೆಳೆದ ಅನುಷ್ಕಾ ಶರ್ಮಾಗೆ ಬೆಂಗಳೂರು ಎಂದರೆ ಅತಿಪ್ರಿಯವಾದ ನಗರ.. ವಿರಾಟ್ ಕೊಹ್ಲಿ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಆರಂಭದ ವರ್ಷದಿಂದಲೂ ಆಡುತ್ತಿದ್ದು, ಈಗಾಗಲೇ ಹಲವು ಬಾರಿ ಬೆಂಗಳೂರು ನನ್ನ ಎರಡನೇ ಮನೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ಜೋಡಿ ಅಂದ್ರೆ ಕನ್ನಡಿಗ ಕ್ರಿಕೆಟ್ ಪ್ರೇಮಿಗಳಿಗೆ ತುಂಬಾನೆ ಅಚ್ಚುಮೆಚ್ಚು..