2 ದಿನದ ಮಗುವನ್ನು ಕೆರೆಗೆ ಎಸೆದ ತಾಯಿ – ಕಂದನನ್ನು ಉಳಿಸಿದ್ದು ಯಾರು ಗೊತ್ತಾ?

2 ದಿನದ ಮಗುವನ್ನು ಕೆರೆಗೆ ಎಸೆದ ತಾಯಿ – ಕಂದನನ್ನು ಉಳಿಸಿದ್ದು ಯಾರು ಗೊತ್ತಾ?

ತಾಯಿಯೊಬ್ಬಳಿಗೆ ತಾನೂ ಹೆತ್ತ ಕೂಸೇ ಬೇಡವಾಗಿ ಬಿಟ್ಟಿದೆ. ಹೀಗಾಗಿ ಆಕೆ ತನ್ನ ಎರಡು ದಿನದ ನವಜಾತ ಶಿಶುವನ್ನು ಕೆರೆಗೆ ಎಸೆದಿದ್ದಾಳೆ. ಇದೀಗ ಈ ಮಗು ಪವಾಡದಂತೆ ಉಳಿದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಖತುವಾ ಗ್ರಾಮದಲ್ಲಿ ತಾಯಿಯೊಬ್ಬಳು 2 ದಿನದ ಮಗುವನ್ನು ಕೆರೆಗೆ ಎಸೆದಿದ್ದಾಳೆ. ಇದೀಗ ಆ ಮಗುವನ್ನು ಕೆರೆಯಲ್ಲಿದ್ದ ಲಿಲ್ಲಿ ಹೂವಿನ ಗಿಡಗಳು ಕಾಪಾಡಿವೆ!

ಇದನ್ನೂ ಓದಿ: ಮದುವೆಗೆ ಕರೆದಿಲ್ಲ ಅಂತಾ ವರನ ಮನೆಗೆ ಕಲ್ಲೆಸೆದ ಸ್ನೇಹಿತ! – ಆಮೇಲೆ ನಡೆದಿದ್ದು ಘೋರ ದುರಂತ..

ಗ್ರಾಮಸ್ಥರು ಕೆರೆ ಬಳಿ ಓಡಾಡುತ್ತಿರುವ ವೇಳೆ ಮಗುವಿರುವುದು ಗೊತ್ತಾಗಿದೆ. ಕೆರೆ ಬಳಿ ಹೋಗಿ ನೋಡಿದಾಗ ಮಗುವಿನ ದೇಹ ಮುಳುಗಿದ್ದು, ಮಗುವಿನ ತಲೆ ಮಾತ್ರ ನೀರಿನಲ್ಲಿ ಕಾಣಿಸುತ್ತಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ರಕ್ಷಣೆ ಮಾಡಿದ್ದಾರೆ.

ಸುಮಾರು 15 ಅಡಿ ಆಳವಿರುವ ಈ ಕೆರೆಯಲ್ಲಿ ಲಿಲ್ಲಿ ಗಿಡಗಳು ಇದ್ದವು. ಮಗುವನ್ನು ಮುಳುಗದಂತೆ ರಕ್ಷಿಸಿದೆ. ಮಗುವಿನ ರಕ್ಷಣೆ ಬಳಿಕ ಪೊಲೀಸರು ನವಾಬ್‌ಗಂಜ್‌ನಲ್ಲಿರುವ ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ತಾಯಿ ಮಗುವನ್ನು ನೀರಿಗೆ ಎಸೆದರೂ ಅದೃಷ್ಟವಂತ ಮಗು ಲಿಲ್ಲಿಗಿಡಗಳಿಂದಾಗಿ ಬದುಕುಳಿದಿದೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದೆ. ಮಗುವಿನ ಪೋಷಕರಿಗಾಗಿ 72 ಗಂಟೆಗಳ ಕಾಲ ಕಾಯುತ್ತೇವೆ. ಒಂದು ವೇಳೆ ಬಾರದೇ ಇದ್ದಲ್ಲಿ ನಿಯಮದಂತೆ ಪ್ರಕರಣ ದಾಖಲಿಸುತ್ತೇವೆ ಎಂದು ಹೆಚ್ಚುವರಿ ಎಸ್‌ಪಿ ರಾಜ್‌ಕುಮಾರ್ ಅಗರ್ವಾಲ್  ಹೇಳಿದ್ದಾರೆ.

ನೀರಿನಲ್ಲಿ ಎಸೆದಿದ್ದ ಮಗುವನ್ನು ರಕ್ಷಿಸಲಾಗಿದೆ. ಆಕೆಯ ಪೋಷಕರಿಗಾಗಿ 72 ಗಂಟೆಗಳ ವರೆಗೆ ಕಾಯುತ್ತೇವೆ. ಒಂದು ವೇಳೆ ಪೋಷಕರು ಬರದೇ ಇದ್ದಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಮಗುವಿಗೆ ಗಂಗಾ ಎಂದು ಹೆಸರಿಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ದಿನೇಶ್ ಚಂದ್ರ ಹೇಳಿದ್ದಾರೆ.

suddiyaana