200 ಕೋಟಿ ರೂಪಾಯಿ ಕ್ಲಬ್ ಸೇರಿದ ಕಾಟೇರ -ಇಂಡಸ್ಟ್ರಿ ಹಿಟ್ ಎಂದು ಕರೆದ ಫ್ಯಾನ್ಸ್

200 ಕೋಟಿ ರೂಪಾಯಿ ಕ್ಲಬ್ ಸೇರಿದ ಕಾಟೇರ -ಇಂಡಸ್ಟ್ರಿ ಹಿಟ್ ಎಂದು ಕರೆದ ಫ್ಯಾನ್ಸ್

ಕನ್ನಡದ ಸಿನಿಮಾ ಕಾಟೇರ ಮತ್ತೊಂದು ದಾಖಲೆ ಬರೆದಿದೆ. ಕಾಟೇರ ಕರ್ನಾಟಕದಾದ್ಯಂತ ಈವರೆಗೆ 206 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬರೋಬ್ಬರಿ 1 ಕೋಟಿ ಟಿಕೆಟ್ ಮಾರಾಟ ಆಗಿದೆ. ಈ ಚಿತ್ರವನ್ನು ‘ಇಂಡಸ್ಟ್ರಿ ಹಿಟ್’ ಎಂದು ಫ್ಯಾನ್ಸ್ ಕರೆದಿದ್ದಾರೆ. 200 ಕೋಟಿ ರೂಪಾಯಿ ಕ್ಲಬ್ ಸೇರಿದ ಪೋಸ್ಟರ್ ಅನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಟೇರ ಅಬ್ಬರ – ಧೂಳೆಬ್ಬಿಸಿದ ಡಿ ಬಾಸ್ , ಮಾಲಾಶ್ರೀ ಮಗಳ ಅಭಿನಯಕ್ಕೆ ಫುಲ್ ಮಾರ್ಕ್ಸ್

ಕಾಟೇರ ಸಿನಿಮಾದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೊಡ್ಡ ಮಟ್ಟದಲ್ಲೇ ಸಕ್ಸಸ್ ಸಿಕ್ಕಿದೆ. ಕಾಟೇರ ಸಿನಿಮಾದಲ್ಲಿ ಮಾಸ್ ವಿಚಾರಗಳ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ಕೂಡ ಇದೆ. ದರ್ಶನ್ ವೃತ್ತಿ ಜೀವನದಲ್ಲೇ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಕಾಟೇರ ಸಿನಿಮಾ ಈ ವರೆಗೆ ಕರ್ನಾಟಕದಾದ್ಯಂತ 206 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹೊಸ ವರ್ಷ, ಸಂಕ್ರಾಂತಿ ಸಂದರ್ಭದಲ್ಲಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಇದ್ದಿದ್ದು ಕೂಡಾ ಸಿನಿಮಾ ಸಕ್ಸಸ್‌ಗೆ ಕಾರಣವಾಗಿದೆ.

ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈ ಕುರಿತಂತೆ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡಿದ್ದರು. ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು  ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದರು. ಇದೀಗ 200 ಕೋಟಿ ರೂಪಾಯಿ ಕ್ಲಬ್‌ಗೆ ಕಾಟೇರ ಸೇರುತ್ತಿದ್ದಂತೆ ಫ್ಯಾನ್ಸ್ ಇಂಡಸ್ಟ್ರಿ ಹಿಟ್ ಎಂದು ಕರೆದು ಸಂಭ್ರಮಿಸುತ್ತಿದ್ದಾರೆ.

ಈ ಚಿತ್ರದ ಟಿವಿ ಪ್ರಸಾರ ಹಕ್ಕನ್ನು ಜೀ ಕನ್ನಡ ಹಾಗೂ ಒಟಿಟಿ ಹಕ್ಕನ್ನು ಜೀ5 ಪಡೆದುಕೊಂಡಿದೆ. ಥಿಯೇಟರ್ನಲ್ಲಿ ಪ್ರಸಾರ ಪೂರ್ಣಗೊಂಡ ಬಳಿಕ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ದರ್ಶನ್ ಅಭಿಮಾನಿಗಳು ಈಗಾಗಲೇ ಅನೇಕ ಬಾರಿ ಸಿನಿಮಾ ವೀಕ್ಷಿಸಿದ್ದಾರೆ. ಈ ಚಿತ್ರ ಒಟಿಟಿಯಲ್ಲೂ ದಾಖಲೆ ಸೃಷ್ಟಿಸೋದು ಪಕ್ಕಾ ಎನ್ನುವ ಅಭಿಪ್ರಾಯ ಮೂಡಿದೆ

Sulekha