ಟೀಂ ಇಂಡಿಯಾ ಲೆಫ್ಟ್-ರೈಟ್ ತಂತ್ರ – ಏಷ್ಯಾಕಪ್ ಗೆ ಪ್ಲೇಯಿಂಗ್ 11 ಹೇಗಿದೆ?
15 ಪ್ಲೇಯರ್ಸ್.. ಯಾರಿಗೆಲ್ಲಾ ಬೆಂಚ್?

2025 ರ ಏಷ್ಯಾಕಪ್ಗಾಗಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 15ಜನರ ಟೀಂ ಅನೌನ್ಸ್ ಆಗಿದೆ. ಹಾಗೇ ಬ್ಯಾಕಪ್ ಪ್ಲೇಯರ್ಸ್ ಆಗಿ 5 ಆಟಗಾರರನ್ನ ಆಯ್ಕೆ ಮಾಡಲಾಗಿದೆ. ಈ ಬಾರಿಯ ಏಷ್ಯಾಕಪ್ ಸ್ಪೆಷಾಲಿಟಿ ಅಂದ್ರೆ ಭಾರತೀಯ ತಂಡದಲ್ಲಿ ಮೊದಲ ಬಾರಿಗೆ ಏಷ್ಯಾ ಕಪ್ ಆಡಲು 7 ಆಟಗಾರರಿಗೆ ಅವಕಾಶ ಸಿಕ್ಕಿದೆ. ಅಭಿಷೇಕ್ ಶರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ ಮತ್ತು ರಿಂಕು ಸಿಂಗ್ ಇವ್ರಿಗೆಲ್ಲಾ ಫಸ್ಟ್ ಏಷ್ಯಾಕಪ್ ಪ್ರವಾಸವಾಗಲಿದೆ. ಹಾಗಂತ ಇವ್ರಲ್ಲಿ ಎಲ್ಲರಿಗೂ ಮೈದಾನಕ್ಕಿಳಿಯೋ ಅವಕಾಶ ಸಿಗುತ್ತೆ ಅನ್ನೋದು ಡೌಟ್ ಇದೆ. ಬಟ್ ಕೆಲವ್ರಂತೂ ಏಷ್ಯಾಕಪ್ ನಲ್ಲಿ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ. ಸದ್ಯ 15 ಸದಸ್ಯರ ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಪ್ಲೇಯಿಂಗ್ ಇಲೆವೆನ್ ಫೈನಲ್ ಮಾಡೋದೇ ಟೀಮ್ ಇಂಡಿಯಾ ಕೋಚ್ ಮುಂದಿರೋ ಅತಿದೊಡ್ಡ ಸವಾಲು. ಮೂವರು ಆರಂಭಿಕ ಬ್ಯಾಟರ್ಸ್ ಇದ್ರೆ ನಾಲ್ವರು ಆಲ್ರೌಂಡರ್ಗಳಿದ್ದಾರೆ. ಇವರಲ್ಲಿ ಯಾರನ್ನು ಕಣಕ್ಕಿಳಿಸಬೇಕು? ಯಾರನ್ನು ಕೈ ಬಿಡಬೇಕು ಎಂಬದೇ ಪ್ರಶ್ನೆ.
ಇದನ್ನೂ ಓದಿ : ಬಿಸಿಸಿಐ EGOಗೆ ಶ್ರೇಯಸ್ ಬಲಿಪಶು – ODI, IPL ರನ್ ಮಳೆಗರೆದ್ರೂ ಮೋಸ
ಸಂಭಾವ್ಯ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ಶುಭ್ಮನ್ ಗಿಲ್
ತಿಲಕ್ ವರ್ಮಾ
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
ಸಂಜು ಸ್ಯಾಮ್ಸನ್
ಶಿವಂ ದುಬೆ
ಅಕ್ಷರ್ ಪಟೇಲ್
ಜಸ್ಪ್ರೀತ್ ಬುಮ್ರಾ
ಅರ್ಷದೀಪ್ ಸಿಂಗ್
ವರುಣ್ ಚಕ್ರವರ್ತಿ
ಇನ್ನು ಏಷ್ಯಾಕಪ್ಗೆ ಸೆಲೆಕ್ಟ್ ಆಗಿರೋ ಟೀಮ್ನಲ್ಲಿ ಎಡಗೈ ದಾಂಡಿಗರಾಗಿ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಕಾಣಿಸಿಕೊಳ್ತಾರೆ. ಇವ್ರಲ್ಲಿ ಮೂರು ಜನ ಅಂತೂ ಪಕ್ಕಾ ಪ್ಲೇಯಿಂಗ್ 11ನಲ್ಲಿ ಇರ್ತಾರೆ. ಇದರ ಜೊತೆಗೆ ಆಲ್ರೌಂಡರ್ಗಳಾಗಿ ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು. ಅದೇ ರೀತಿ ಎಡಗೈ ಬೌಲರ್ಗಳಾಗಿ ಅರ್ಷದೀಪ್ ಸಿಂಗ್ ಹಾಗೂ ಕುಲ್ದೀಪ್ ಯಾದವ್ ತಂಡದಲ್ಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಕನಿಷ್ಠ ಐವರು ಎಡಗೈ ಆಟಗಾರರು ಕಾಣಿಸಿಕೊಳ್ಳುವ ಚಾನ್ಸಸ್ ಇದೆ. ಇನ್ನುಳಿದಂತೆ ಟೀಮ್ ಇಂಡಿಯಾದಲ್ಲಿರುವ ರೈಟ್ ಹ್ಯಾಂಡ್ ಬ್ಯಾಟರ್ಸ್ ಅಂದ್ರೆ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ಹರ್ಷಿತ್ ರಾಣಾ ಇದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಎಡ-ಬಲ ಕ್ಯಾಲ್ಕುಲೇಶನ್ನೊಂದಿಗೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸಲಿದೆ.

ನೋಡಿರಿ

