ಕೊಕ್ಕೋ ಕೂಗಿಗೆ ಗರಂ ಆದ ಡಾಕ್ಟರ್ – ಕೋಳಿ ವಿರುದ್ದ ಪೊಲೀಸ್ ಕಂಪ್ಲೇಂಟ್!

ಕೊಕ್ಕೋ ಕೂಗಿಗೆ ಗರಂ ಆದ ಡಾಕ್ಟರ್ – ಕೋಳಿ ವಿರುದ್ದ ಪೊಲೀಸ್ ಕಂಪ್ಲೇಂಟ್!

ಭೋಪಾಲ್: ಗ್ರಾಮೀಣ ಪ್ರದೇಶದಲ್ಲಿಮುಂಜಾನೆ ಕೋಳಿಯ ಕೂಗು ಕೇಳಿ ಗ್ರಾಮಸ್ಥರು ಜನರು ಎಚ್ಚರಗೊಳ್ಳುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಮುಂಜಾನೆ ಕೋಳಿ ಕೂಗಿತೆಂದು ಮನೆಯವರ ವಿರುದ್ಧವೇ ದೂರು ನೀಡಿದ್ದಾನೆ.

ಮಧ್ಯಪ್ರದೇಶದ ಇಂದೋರ್‌ನ ಪಲಾಸೊಯಾ ಪ್ರದೇಶದಲ್ಲಿ ಅಲೋಕ್ ಮೋದಿ ವೈದ್ಯರಾಗಿದ್ದು, ಪ್ರತಿದಿನ ಕೆಲಸ ಮುಗಿಸಿ ಬರುವುದು ತಡರಾತ್ರಿ ಆಗುತ್ತಿತ್ತು. ಆದರೆ ಇವರ ನೆರೆ ಮನೆಯಲ್ಲಿದ್ದ ಕೋಳಿಯೊಂದು ಮುಂಜಾನೆ 5 ಗಂಟೆ ಆದ ತಕ್ಷಣ ಕೂಗುತ್ತಿತ್ತು. ಇದರಿಂದ ಕೋಪಗೊಂಡ ಅಲೋಕ್ ಮೋದಿ ಪೊಲೀಸ್ ಠಾಣೆಗೆ ಹೋಗಿ ಕೋಳಿ ಸಾಕಿದ್ದ ತನ್ನ ನೆರೆಮನೆಯ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಫಜೀತಿ- ಲ್ಯಾಪ್ ಟಾಪ್ ಹಿಡಿದು ಮಂಟಪದಲ್ಲಿ ಕುಳಿತ ವರ

ತನ್ನ ಮನೆಯ ಸಮೀಪ ಮಹಿಳೆಯೊಬ್ಬರು ಕೋಳಿ ಸಾಕಿದ್ದಾರೆ. ಆದರೆ ಆ ಕೋಳಿಯು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಕೂಗುತ್ತಿದೆ. ಇದರಿಂದಾಗಿ ತೊಂದರೆ ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಪಾಲಾಸಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ಸಿಂಗ್ ಬೈನ್ಸ್ ಮಾತನಾಡಿ, ಮೊದಲು ಎರಡು ಕಡೆಯವರೊಂದಿಗೆ ಮಾತುಕತೆ ನಡೆಸಿ. ಆ ವೇಳೆಯೂ ಸಮಸ್ಯೆ ಬಗೆಹರಿಯದಿದ್ದರೇ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.

suddiyaana