ಇಂಡೋನೇಷ್ಯಾದಲ್ಲಿ ಮತ್ತೆ ಭೀಕರ  ಭೂಕಂಪ
50ಕ್ಕೂ ಹೆಚ್ಚು ಮಂದಿ ಸಾವು, 700ಕ್ಕೂ ಅಧಿಕ ಮಂದಿಗೆ ಗಾಯ

ಇಂಡೋನೇಷ್ಯಾದಲ್ಲಿ ಮತ್ತೆ ಭೀಕರ  ಭೂಕಂಪ50ಕ್ಕೂ ಹೆಚ್ಚು ಮಂದಿ ಸಾವು, 700ಕ್ಕೂ ಅಧಿಕ ಮಂದಿಗೆ ಗಾಯ

ಜಾವಾ: ಇಂಡೋನೇಷ್ಯಾದಲ್ಲಿ ಮತ್ತೆ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದ್ದು, ಹಲವು ಮಂದಿ ಮೃತಪಟ್ಟಿದ್ದಾರೆ. ಜಾವಾ ದ್ವೀಪದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.6ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದಿಂದಾಗಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಜಾವಾದ ಸಿಯಾಂಜೂರ್​ ಭೂಕಂಪನದ ಕೇಂದ್ರ ಬಿಂದುವಾಗಿದೆ. ಭೂಕಂಪದ ತೀವ್ರತೆಗೆ ಸಾವಿರಾರು ಮನೆಗಳು ಹಾನಿಗೊಳಗಾಗಿವೆ. ಇನ್ನು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ಭರದ ರಕ್ಷಣಾ ಕಾರ್ಯ ನಡೆಯುತ್ತಿದೆ.

ಭೂಕಂಪದ ನರಕ ಇಂಡೋನೇಷ್ಯಾ:

20 ವರ್ಷಗಳಲ್ಲಿ 55,000ಕ್ಕೂ ಹೆಚ್ಚು ಬಾರಿ ಭೂಕಂಪ

38,092 ಬಾರಿ ಲಘು  ಭೂಕಂಪ

4,245 ಬಾರಿ ಸಣ್ಣ ಪ್ರಮಾಣದ ಭೂಕಂಪ

4,163 ಬಾರಿ ಮಧ್ಯಮ ಪ್ರಮಾಣದ ಭೂಕಂಪ

319 ಬಾರಿ ಶಕ್ತಿ ಶಾಲಿ ಭೂಕಂಪ

42  ಭಯಾನಕ ಪ್ರಮಾಣದಲ್ಲಿ ಭೂಕಂಪ

ಭೂಕಂಪದ ತೀವ್ರತೆ ಭಯಾನಕವಾಗಿದ್ದಲ್ಲಿ ಅದು ಭೀಕರ ಸುನಾಮಿಗೂ ಕಾರಣವಾಗುತ್ತೆ. ಸಮುದ್ರದಾಳದಲ್ಲಿ ಭೂಮಿ ಕಂಪಿಸಿದಾಗ ಸುನಾಮಿ ಎದ್ದು ನಿಲ್ಲುತ್ತೆ. 2004ರಲ್ಲಿ ಸುಮಾತ್ರಾದಲ್ಲಿ ಸಮುದ್ರದಾಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಈ ಹಿಂದೆಂದೂ ಕಂಡು ಕೇಳರಿಯದ ಸುನಾಮಿ ಇಂಡೋನೇಷ್ಯಾ ಮತ್ತು ಚೆನ್ನೈಗೆ ಕೂಡ ಅಪ್ಪಳಿಸಿತ್ತು. ಸುನಾಮಿಯ ಹೊಡೆತಕ್ಕೆ ಇಂಡೋನೇಷ್ಯಾದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ರು.

suddiyaana