ಇಂಡೋ-ಪಾಕ್ ಮತ್ತೊಂದು WAR – ಮಹಿಳಾ WCನಲ್ಲೂ ನೋ ಶೇಕ್ ಹ್ಯಾಂಡ್
ಕ್ರಿಕೆಟ್ ನಲ್ಲೇ ರಾಜಕೀಯ ಸೇಡು ಬೇಕಿತ್ತಾ?

ಕಳೆದ ಮೂರು ಭಾನುವಾರಗಳಲ್ಲೂ ಟೀಂ ಇಂಡಿಯಾ ಫ್ಯಾನ್ಸ್ ಸೆಲೆಬ್ರೇಷನ್ ಮೂಡ್ನಲ್ಲಿದ್ರು. ಯಾಕಂದ್ರೆ ಈ ಮೂರೂ ಸಂಡೇಗಳಲ್ಲೂ ಏಷ್ಯಾಕಪ್ನಲ್ಲಿ ಪಾಕಿಸ್ತಾನವನ್ನ ಭಾರತ ಬಗ್ಗು ಬಡ್ದಿದ್ದು ಕೊನೆಗೆ ಟ್ರೋಫಿಯನ್ನ ಗೆದ್ದಿದ್ದು ಕೂಡ ನಿಮ್ಗೆಲ್ಲಾ ಗೊತ್ತೇ ಇದೆ. ಇದೀಗ ಈ ಸಂಡೇ ಕೂಡ ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ಗೆ ವೇದಿಕೆ ಸಿದ್ಧವಾಗಿದೆ. ಕಳೆದ ಸಲ ಮೆನ್ಸ್ ಟೀಂ ಯುದ್ಧ ಗೆದ್ದಿದ್ರೆ ಈ ಸಲ ಮಹಿಳಾ ಮಣಿಗಳು ಅವ್ರ ಸೊಕ್ಕಿಳಿಸೋಕೆ ರೆಡಿಯಾಗಿದ್ದಾರೆ. ಸೆಪ್ಟೆಂಬರ್ 30ರಿಂದ ಐಸಿಸಿ ಮಹಿಳಾ ವಿಶ್ವಕಪ್ ಆರಂಭವಾಗಿದ್ದು, ಅಕ್ಟೋಬರ್ 5 ಅಂದ್ರೆ ಇದೇ ಭಾನುವಾರ ಭಾರತ ವರ್ಸಸ್ ಪಾಕಿಸ್ತಾನ ಮಹಿಳಾ ತಂಡಗಳ ನಡುವೆ ಹೈವೋಲ್ಟೇಜ್ ಮ್ಯಾಚ್ ಫಿಕ್ಸ್ ಆಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನವೇ ನಮ್ಮ ಗರ್ಲ್ಸ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಇದನ್ನೂ ಓದಿ : ಹಬ್ಬದ ದಿನವೇ ಗ್ರಾಹಕರಿಗೆ ಶಾಕ್! – LPG ಸಿಲಿಂಡರ್ ಬೆಲೆ 16 ರೂ. ಏರಿಕೆ!
ಪಾಕಿಸ್ತಾನಿ ಆಟಗಾರ್ತಿಯರ ಜೊತೆ ಕೈಕುಲುಕಲ್ಲ ವೀರನಾರಿಯರು!
ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಿನಿಮೇಟಿಕ್ ಸೀನ್ಸ್ ಕಣ್ತುಂಬಿಕೊಂಡಿದ್ದ ಫ್ಯಾನ್ಸ್ಗೆ ಈಗ ಮತ್ತೊಂದು ರಣರೋಚಕ ಪಂದ್ಯವನ್ನ ನೋಡೋ ಅವಕಾಶ ಸಿಕ್ಕಿದೆ. ಮಹಿಳಾ ವಿಶ್ವಕಪ್ ಟೂರ್ನಿ ನಡೀತಿದ್ದು, ಅಕ್ಟೋಬರ್ 5ಕ್ಕೆ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಆದ್ರೆ ಪಂದ್ಯದ ಆರಂಭಕ್ಕೂ ಮುನ್ನವೇ ಬಿಸಿ ಹೆಚ್ಚಿಸಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೂ ಪಾಕಿಸ್ತಾನಿ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಬಿಸಿಸಿಐ ಆದೇಶಿಸಿದೆ ಎನ್ನಲಾಗಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪಂದ್ಯಕ್ಕೂ ಮೊದಲು ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಘೋಷಿಸಿದ್ದು ಪಂದ್ಯದ ರೋಚಕತೆ ಜಾಸ್ತಿಯಾಗ್ತಿದೆ. ಅದೂ ಅಲ್ದೇ ಕ್ರೀಡೆಯಲ್ಲಿ ಆಟಗಾರರು ಮತ್ತು ಅಧಿಕಾರಿಗಳಿಗೆ ಐಸಿಸಿ ನಿಯಮಗಳ ಪ್ರಕಾರ, ಕಡ್ಡಾಯ ಹ್ಯಾಂಡ್‌ಶೇಕ್ ಮಾನದಂಡವಿಲ್ಲ; ಫಲಿತಾಂಶ ಏನೇ ಇರಲಿ ಪರಸ್ಪರ ಗೌರವ ತೋರಿಸುವುದು ಕೇವಲ ಅನುಸರಿಸುವ ಸಂಪ್ರದಾಯ ಅಷ್ಟೇ.
ರಫೇಲ್ ಕ್ರಾಶ್ ಅಣಕದ ಬಗ್ಗೆ ಕೆರಳಿರುವ ಭಾರತೀಯರು!
ಇನ್ನು ಪಾಕ್ ವಿರುದ್ಧದ ಪಂದ್ಯವನ್ನ ಭಾರತೀರು ಆಟಗಾರ್ತಿಯರು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಬಿಸಿಸಿಐ ಹೇಳದೇ ಇದ್ರೂ ನಾವೂ ಕೂಡ ಶೇಕ್ ಹ್ಯಾಂಡ್ ಕೊಡಬಾರದು ಅನ್ನೋ ನಿರ್ಧಾರಕ್ಕೆ ಬಂದಿದ್ರು. ಅದಕ್ಕೆ ಕಾರಣವೂ ಇದೆ. ಏಶ್ಯಾಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮೂರು ಪಂದ್ಯಗಳಲ್ಲು ಸುಖಾಸುಮ್ಮನೆ ಕ್ಯಾತೆ ತೆಗೆದಿದ್ರು. ಸರಣಿಯುದ್ದಕ್ಕೂ ಅನೇಕ ಹೈಡ್ರಾಮಾಗಳು ನಡೆದಿದ್ದವು. ಪಾಕಿಸ್ತಾನದ ಆಟಗಾರರ ವರ್ತನೆ ಅತಿರೇಕ ಎನ್ನಿಸುತ್ತಿದೆ. ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರು ಮೈದಾನದಲ್ಲಿ 6-0 ಸಂಜ್ಞೆಯನ್ನು ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಂದ್ರೆ ಭಾರತದ 6 ರಫೇಲ್ ಯುದ್ಧ ವಿಮಾನಗಳ್ನ ಪಾಕಿಸ್ತಾನ ಹೊಡೆದುರುಳಿಸಿದೆ ಅನ್ನೋದು ಅವ್ರ ಉದ್ದೇಶವಾಗಿತ್ತು. ಈ ಸಂಜ್ಞೆಯನ್ನು ಪಾಕಿಸ್ತಾನ ಮಹಿಳಾ ತಂಡದ ಆಟಗಾರ್ತಿಯರು ಸಹ ಇಮಿಟೇಟ್ ಮಾಡಿದ್ರು. ಪಾಕಿಸ್ತಾನದ ವೇಗಿ ಫಾತಿಮಾ ದಕ್ಷಿಣ ಆಫ್ರಿಕಾ ವಿರುದ್ಧ ಇದೇ ರೀತಿಯ ಸನ್ನೆಯನ್ನು ಮಾಡಿದ್ದು ಚಿತ್ರಗಳು ವೈರಲ್ ಆಗಿದ್ವು. ಇದ್ರಿಂದ ಭಾರತೀಯ ಮಹಿಳೆಯರು ಕೂಡ ಕೆರಳಿದ್ದಾರೆ. ಹೀಗಾಗಿ ಕೊಲಂಬೋದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಏನೆಲ್ಲಾ ನಡೆಯಬಹುದು ಎಂಬ ಕುತೂಹಲ ಇದ್ದೇ ಇದೆ.
ಮ್ಯಾಚ್ ಜೊತೆ ಮರ್ಯಾದೆನೂ ಕಳೆದುಕೊಳ್ಳುತ್ತಾ ಪಾಕ್?
ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿರೋ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಭಾನುವಾರ ಪಾಕ್ ಜೊತೆ ಭಾರತ ಕಣಕ್ಕಿಳಿಯಲಿದೆ. ಌಕ್ಚುಲಿ ಈ ಮ್ಯಾಚ್ನ 100ಪರ್ಸೆಂಟ್ ಭಾರತೀಯ ವನಿತೆಯರೇ ಗೆಲ್ಲೋದು. ಯಾಕಂದ್ರೆ ಹಳೇ ರೆಕಾರ್ಡ್ಸ್ ನ ಕೆದಕಿದ್ರೆ ಅದೇ ಇದೆ. ಕಳೆದ 20 ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಗಳು 11 ಬಾರಿ ಏಕದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇಂಟ್ರೆಸ್ಟಿಂಗ್ ಏನಂದ್ರೆ ಪ್ರತಿ ಬಾರಿಯೂ ಭಾರತನೇ ಗೆದ್ದು ಬೀಗಿದೆ. ಸೋ ಅಲ್ಲಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಕದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು 12 ನೇ ಬಾರಿ. ಹಿಂದಿನ ಅಂಕಿಅಂಶಗಳನ್ನ ನೋಡಿದ್ರೆ ಈ ಸಲವೂ ಭಾರತವೇ ಗೆಲ್ಲೋದು ಪಕ್ಕಾ ಆಗಿದೆ.
ಎರಡೂ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಘ್ನತೆ!
ಌಕ್ಚುಲಿ ಐಸಿಸಿ ಮಹಿಳಾ ವಿಶ್ವಕಪ್ಗೆ ಭಾರತವೇ ಟೂರ್ನಿ ಆಯೋಜನೆ ಹೊಣೆ ಹೊತ್ತಿದೆ. ಆದ್ರೆ ಈ ವರ್ಷದ ಆರಂಭದಲ್ಲಿ ಬಿಸಿಸಿಐ-ಪಿಸಿಬಿ ಒಪ್ಪಂದದಿಂದಾಗಿ ಕೊಲಂಬೊದಲ್ಲಿ ಆಡಲಿದ್ದಾರೆ. ಅಂದ್ರೆ ಉಭಯ ರಾಷ್ಟ್ರಗಳ ನಡುವಿನ ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ನಡೆಸಲಾಗುತ್ತಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಭಾರತವು 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಈ ಒಪ್ಪಂದಕ್ಕೆ ಬರಲಾಗಿತ್ತು. ಇದೀಗ ಏಷ್ಯಾಕಪ್ ಬಳಿಕ ಪರಸ್ಪರ ಆಟಗಾರರು ಹ್ಯಾಂಡ್ ಶೇಕ್ ಕೂಡ ನಿಲ್ಲಿಸಿದ್ದಾರೆ. ಅದೂ ಅಲ್ದೇ ಏಷ್ಯಾಕಪ್ನಲ್ಲಿ ಭಾರತ ಗೆದ್ರೂ ಕೂಡ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ಹೊತ್ತೊಯ್ದಿದ್ದ. ಟ್ರೋಫಿ ಹಸ್ತಾಂತರಕ್ಕೂ ನಾನಾ ಕಂಡೀಷನ್ಸ್ ಹಾಕಿ ಬಿಸಿಸಿಐ ಹಾಗೇ ಆಟಗಾರರು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇದೇ ಸಿಟ್ಟು, ಸೇಡು ವುಮೆನ್ಸ್ ವರ್ಲ್ಡ್ ಕಪ್ ಮೇಲೂ ಪರಿಣಾಮ ಬೀರಲಿದೆ.
ಇಷ್ಟೆಲ್ಲಾ ಡವಲಪ್ಮೆಂಟ್ಸ್ ನೋಡ್ತಿದ್ರೆ ಮುಂದಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನ ಯುದ್ಧದ ರೀತಿಯಲ್ಲೇ ಬಿಂಬಿಸಲಾಗುತ್ತೆ. ಅಲ್ಲಿ ಯಾರೇ ಗೆದ್ರೂ ಯುದ್ಧ ಗೆದ್ದ ರೀತಿಯಲ್ಲೇ ಸಂಭ್ರಮಿಸ್ತಾರೆ. ಒಟ್ನಲ್ಲಿ ಕ್ರಿಕೆಟ್ ಈಗ ರಾಜಕೀಯ ಸೇಡಿನ ವೇದಿಕೆಯಾಗಿ ಬದಲಾಗಿದೆ. ಒಂದೊಂದು ಪಂದ್ಯದಲ್ಲೂ ಉದ್ವಿಗ್ಘತೆ ಜಾಸ್ತಿಯಾಗ್ತಿದೆ.

ನೋಡಿರಿ

