ಇಸ್ರೇಲ್ – ಇರಾನ್ ಎಫೆಕ್ಟ್! – ಇನ್ಮುಂದೆ ವಿಮಾನಯಾನದಲ್ಲೂ ಇಂಧನ ಶುಲ್ಕ ಪಾವತಿಸಬೇಕು!

ಇಸ್ರೇಲ್-ಇರಾನ್ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದ್ರಿಂದಾಗಿ ಜನರ ಮೇಲೆ ಮತ್ತಷ್ಟು ಹೊರೆ ಬೀಳುತ್ತಿದೆ. ಇದೀಗ ಯುದ್ದದ ಎಫೆಕ್ಟ್ ವಿಮಾನಯಾನಕ್ಕೂ ತಟ್ಟಿದೆ. ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನದಲ್ಲಿ ಇಂಧನ ಬೆಲೆ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ – ಟ್ರಂಪ್ ಎಚ್ಚರಿಕೆೆ ಹೆದರುತ್ತಾ ಇರಾನ್ ?
ಮಧ್ಯಪ್ರಾಚ್ಯದಲ್ಲಿನ ಇರಾನ್-ಇಸ್ರೇಲ್ ಯುದ್ಧದ ಕಾರ್ಮೋಡದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದೀಗ ಈ ಯುದ್ಧದಿಂದ ಉಂಟಾದ ವಿಮಾನಯಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳ ಏರಿಕೆಯಾಗಿದೆ. ಇದ್ರಿಂದಾಗಿ ವಿಮಾನಯಾನ ಸಂಸ್ಥೆಗಳಿಗೂ ಎಫೆಕ್ಟ್ ತಟ್ಟಿದೆ. ಇಂಡಿಗೋ ಮಾ.14 ರಿಂದ ಟಿಕೆಟ್ಗಳ ಮೇಲೆ ಇಂಧನ ಶುಲ್ಕವನ್ನು ಪರಿಚಯಿಸಲಿದೆ ಎಂದು ವಿಮಾನಯಾನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ ವಿಮಾನ ಪ್ರಯಾಣಕ್ಕೆ 425 ರೂ. ಇಂಧನ ಚಾರ್ಜ್ ಹಾಗೂ ಮಧ್ಯಪ್ರಾಚ್ಯ ಪ್ರಯಾಣಕ್ಕೆ 900 ರೂ. ಇಂಧನ ದರ ನಿಗದಿಪಡಿಸಲಾಗಿದೆ. ಸೌತ್ ಈಸ್ಟ್ ಏಷ್ಯಾ ಮತ್ತು ಚೀನಾ ಪ್ರಯಾಣಕ್ಕೆ 1,800 ರೂ. ಇಂಧನ ದರವಿದೆ. ಯೂರೋಪ್ ದೇಶಗಳಿಗೆ 2,300 ರೂ. ದರ ನಿಗದಿ ಮಾಡಲಾಗಿದೆ. ನಾಳೆಯಿಂದಲೇ ನೂತನ ದರ ಜಾರಿಯಾಗಲಿದೆ.
ಬೆಲೆ ಏರಿಕೆಯು ಇಂಧನ ಸರಬರಾಜು ಮತ್ತು ವಾಯುಯಾನ ಮಾರ್ಗಗಳನ್ನು ಅಡ್ಡಿಪಡಿಸಿದೆ. ಎಟಿಎಫ್ ವಿಮಾನಯಾನ ಸಂಸ್ಥೆಗಳಿಗೆ ಅತಿದೊಡ್ಡ ನಿರ್ವಹಣಾ ವೆಚ್ಚದ ಅಂಶಗಳಲ್ಲಿ ಒಂದಾಗಿದೆ. ಇದು ಒಟ್ಟು ವೆಚ್ಚಗಳಲ್ಲಿ ಸರಿಸುಮಾರು 35-40% ರಷ್ಟಿದೆ.
ದೇಶೀಯ ಮತ್ತು ಅಂತರರಾಷ್ಟ್ರೀಯ ಟಿಕೆಟ್ಗಳಿಗೆ ಸರ್ಚಾರ್ಜ್ ಅನ್ವಯಿಸುತ್ತದೆ ಎಂದು ಉದ್ಯಮದ ಕಾರ್ಯನಿರ್ವಾಹಕರು ತಿಳಿಸಿದ್ದಾರೆ. ದರ ಹೆಚ್ಚಳವು ಮಾರ್ಗದ ದೂರ ಮತ್ತು ದರ ವರ್ಗಗಳನ್ನು ಅವಲಂಬಿಸಿ ಬದಲಾಗುತ್ತದೆ. ಇಂಧನ ಬೆಲೆಗಳು ಏರಿಕೆಯಾಗುವುದರಿಂದ ಮತ್ತು ವಾಯುಪ್ರದೇಶದ ಅಡಚಣೆಗಳಿಂದಾಗಿ ವಿಮಾನ ಕಾರ್ಯಾಚರಣೆಗಳು ಹೆಚ್ಚು ಜಟಿಲವಾಗಿವೆ.

ನೋಡಿರಿ

