7ನೇ ದಿನವೂ ರೆಕ್ಕೆ ಬಿಚ್ಚದೆ ಕುಳಿತ ಇಂಡಿಗೋ! – ವಿಮಾನ ಹಾರಾಟಕ್ಕೆ ಇನ್ನೆಷ್ಟು ಸಮಯ ಬೇಕು?

ಕಳೆದ ಒಂದು ವಾರದಿಂದ ಇಂಡಿಗೋ ವಿಮಾನ ರೆಕ್ಕೆ ಬಿಚ್ಚಿ ಹಾರಾಡೋದನ್ನೇ ನಿಲ್ಲಿಸಿ ಬಿಟ್ಟಿದೆ. ಇಂಡಿಗೋ ವಿಮಾನ ಬಿಕ್ಕಟ್ಟು 7ನೇ ದಿನಕ್ಕೆ ಕಾಲಿಟ್ಟಿದೆ. ದೇಶಾದ್ಯಂತ ಸಾವಿವಾರು ಇಂಡಿಗೋ ವಿಮಾನ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಧಮ್ ಹೊಡೆಯೋದು ಕಡಿಮೆ ಮಾಡಬೇಕಲೇ! – ಮಾರ್ಕ್ನಲ್ಲಿ ಕಿಚ್ಚ ಸಿಕ್ಕಾಪಟ್ಟೆ ಮಾಸ್
ಕಳೆದ ಕೆಲವು ದಿನಗಳಿಂದ ವಿಮಾನಯಾನ ಸಂಸ್ಥೆಯ ವೇಳಾಪಟ್ಟಿಯ ಅವ್ಯವಸ್ಥೆಯಿಂದಾಗಿ ಸಾವಿರಾರು ಇಂಡಿಗೋ ವಿಮಾನ ಹಾರಾಟ ರದ್ಧಾಗಿದೆ. ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ವಿಮಾನಯಾನ ಸಂಸ್ಥೆಯು ಇಲ್ಲಿಯವರೆಗೆ ಒಟ್ಟು 610 ಕೋಟಿ ರೂ. ಮರುಪಾವತಿಯನ್ನು ಪ್ರಕ್ರಿಯೆಗೊಳಿಸಿದೆ. ಶನಿವಾರ ವೇಳೆಗೆ ದೇಶಾದ್ಯಂತ ಪ್ರಯಾಣಿಕರಿಗೆ 3,000 ಬ್ಯಾಗೇಜ್ ಗಳನ್ನು ತಲುಪಿಸಿದೆ ಎಂದು ಸರ್ಕಾರ ಭಾನುವಾರ ತಿಳಿಸಿದೆ. ಆದ್ರೂ ಕೂಡ ಇಂಡಿಗೋ ವಿಮಾನ ಹಾರಾಟದ ಬಿಕ್ಕಟ್ಟು ಇನ್ನು ಸರಿಹೋಗಿಲ್ಲ.
ಇಂಡಿಗೋ ವಿಮಾನ ಬಿಕ್ಕಟ್ಟು ಸೋಮವಾರವೂ ಮುಂದುವರಿದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 127 ವಿಮಾನಗಳ ಹಾರಾಟ ರದ್ದುಗೊಳಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ 65 ವಿಮಾನಗಳು ಮತ್ತು ನಿರ್ಗಮಿಸಬೇಕಿದ್ದ 62 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದುವರೆಗೆ 77 ಇಂಡಿಗೋ ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ. 38 ಆಗಮನ ಮತ್ತು 39 ನಿರ್ಗಮನ ವಿಮಾನಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇಂಡಿಗೋ ಕಾರ್ಯಾಚರಣೆಯ ಸಮಸ್ಯೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಕಂಡುಬಂದಿದ್ದು, ಅಲ್ಲಿಯೂ ಪ್ರಯಾಣಿಕರು ವ್ಯಾಪಕ ವಿಳಂಬ ಮತ್ತು ರದ್ದತಿಯನ್ನು ಎದುರಿಸಿದ್ದಾರೆ.
ತನ್ನ ಸೂಚನೆಯಲ್ಲಿ, DGCA ಇಂಡಿಗೋದ ಯೋಜನೆ, ಮೇಲ್ವಿಚಾರಣೆ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಗಮನಾರ್ಹ ಲೋಪಗಳನ್ನು ಗುರುತಿಸಿದೆ ಡಿಸೆಂಬರ್ 2 ರಿಂದ ಲಕ್ಷಾಂತರ ಪ್ರಯಾಣಿಕರು ಸಿಲುಕಿರುವ ದೊಡ್ಡ ಪ್ರಮಾಣದ ಕಾರ್ಯಾಚರಣೆಯ ವೈಫಲ್ಯಗಳನ್ನು ಇದು ಸೂಚಿಸುತ್ತದೆ. ಪೈಲಟ್ಗಳಿಗೆ ವಿಮಾನ ಕರ್ತವ್ಯ ಸಮಯ ಮಿತಿಗಳಲ್ಲಿ (FDTL) ನಿಯಂತ್ರಕ ಬದಲಾವಣೆಗಳು ಈ ಅಡೆತಡೆಗಳಿಗೆ ಕಾರಣ. ಆದರೂ ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕು ಎಂದು ಇಂಡಿಗೋ ಸಂಸ್ಥೆ ಹೇಳಿದೆ.

ನೋಡಿರಿ

