ಭಾರತದಲ್ಲಿ ನಿರುದ್ಯೋಗ ಪ್ರಮಾಣ 7.80% ರಷ್ಟು ಏರಿಕೆ  – ಕಾರಣ ಏನು ಗೊತ್ತಾ?  

ಭಾರತದಲ್ಲಿ ನಿರುದ್ಯೋಗ ಪ್ರಮಾಣ 7.80% ರಷ್ಟು ಏರಿಕೆ  – ಕಾರಣ ಏನು ಗೊತ್ತಾ?  

ನವದೆಹಲಿ: ಭಾರತದ ನಿರುದ್ಯೋಗ ದರದಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ. ಮಾರ್ಚ್ ನಲ್ಲಿ ನಿರುದ್ಯೋಗ ಪ್ರಮಾಣ 7.80% ರಷ್ಟು ಏರಿಕೆ ಕಂಡಿದ್ದು, ಕಳೆದ ಮೂರು ತಿಂಗಳಿನಲ್ಲಿ ಅತ್ಯಧಿಕವಾಗಿದೆ ಅಂತಾ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿದೆ.

ಇದನ್ನೂ ಓದಿ: ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ಸೈಬರ್‌ಕಾಂಡ್ರಿಯಾಸಿಸ್ ಸಮಸ್ಯೆ!  

ಸಿಎಂಐಇ ಅಂಕಿಅಂಶಗಳ ಪ್ರಕಾರ, ನಗರ ನಿರುದ್ಯೋಗ ದರವು ಮಾರ್ಚ್‌ನಲ್ಲಿ 8.51% ಕ್ಕೆ ಏರಿದೆ. ಹಿಂದಿನ ತಿಂಗಳಿನಲ್ಲಿ 7.93% ಆಗಿದೆ. ಆದರೆ, ಗ್ರಾಮೀಣ ನಿರುದ್ಯೋಗ ಪ್ರಮಾಣ 7.23% ರಿಂದ 7.47% ಕ್ಕೆ ಏರಿಕೆಯಾಗಿದೆ. ದೇಶದ ಕಾರ್ಮಿಕ ಮಾರುಕಟ್ಟೆ ಕುಸಿದಿರುವ ಪರಿಣಾಮ ನಿರುದ್ಯೋಗ ಹೆಚ್ಚಳವಾಗಿದೆ ಎಂದು ಸಿಎಂಐಇ ಹೇಳಿದೆ.

2022 ರ ಡಿಸೆಂಬರ್ ನಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇ.8.30 ರನ್ನು ತಲುಪಿತ್ತು. ಇದು ಜನವರಿ ತಿಂಗಳಲ್ಲಿ ಶೇ.7.14 ರಷ್ಟಕ್ಕೆ ಇಳಿಕೆಯಾಗಿತ್ತು. ಬಳಿಕ ಮತ್ತೆ ಫೆಬ್ರವರಿ ತಿಂಗಳಲ್ಲಿ ಮತ್ತೆ ಶೇ.7.45 ಕ್ಕೆ ಏರಿಕೆಯಾಗಿತ್ತು ಎಂದು ಸಿಎಂಐಇ ಡೇಟಾ ತಿಳಿಸಿದೆ.

ಸಿಎಂಐಇ ಅಂಕಿಅಂಶಗಳ ಪ್ರಕಾರ, ಮಾರ್ಚ್ ತಿಂಗಳಲ್ಲಿ ಛತ್ತೀಸ್‌ಗಢದಲ್ಲಿ ನಿರುದ್ಯೋಗ ಪ್ರಮಾಣವು 0.8% ರಷ್ಟಿತ್ತು. ಇದು ರಾಷ್ಟ್ರದಾದ್ಯಂತ ಅತ್ಯಂತ ಕಡಿಮೆ ನಿರುದ್ಯೋಗ ದರವಾಗಿದೆ. ಇನ್ನು ಹರಿಯಾಣದಲ್ಲಿ 26.8% , ರಾಜಸ್ಥಾನದಲ್ಲಿ 26.6%, ಜಮ್ಮು ಮತ್ತು ಕಾಶ್ಮೀರದಲ್ಲಿ 23.1%, ಸಿಕ್ಕಿಂನಲ್ಲಿ 20.7%, ಬಿಹಾರದಲ್ಲಿ 17.6% ಮತ್ತು ಜಾರ್ಖಂಡ್‌ನಲ್ಲಿ 17.5% ತಲುಪಿದೆ.

suddiyaana