OVEL ಪಿಚ್.. INDಗೆ ಚಾಲೆಂಜ್ – ಮಸ್ಟ್ ವಿನ್ ಮ್ಯಾಚ್ ಗೆಲುವು ಕಷ್ಟ?
TEST, ODIನಲ್ಲಿ ಹೇಗಿದೆ ರೆಕಾರ್ಡ್ಸ್?

OVEL ಪಿಚ್.. INDಗೆ ಚಾಲೆಂಜ್ – ಮಸ್ಟ್ ವಿನ್ ಮ್ಯಾಚ್ ಗೆಲುವು ಕಷ್ಟ?TEST, ODIನಲ್ಲಿ ಹೇಗಿದೆ ರೆಕಾರ್ಡ್ಸ್?

ಇಂಗ್ಲೆಂಡ್ ವಿರುದ್ಧದ ಸರಣಿಯುದ್ಧಕ್ಕೂ ಟೀಂ ಇಂಡಿಯಾ ಹಲವು ದಾಖಲೆಗಳನ್ನ ಬರೆದಿದೆ. ಬ್ಯಾಟಿಂಗ್, ಬೌಲಿಂಗ್​ನಲ್ಲೂ ಸಾಲಿಡ್ ಫಾರ್ಮ್​ನಲ್ಲಿದೆ. ದುರಂತ ಅಂದ್ರೆ ಅತ್ಯುತ್ತಮ ಪ್ರದರ್ಶನ ನೀಡಿಯೂ ಎರಡು ಪಂದ್ಯಗಳನ್ನ ಸೋಲಬೇಕಾಯ್ತು. ಎಡ್ಜ್​ಬಾಸ್ಟನ್​ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಗೆದ್ದು ಭಾರತ ತಂಡ ಇತಿಹಾಸ ಸೃಷ್ಟಿಸಿತ್ತು. ಇದೀಗ ಐದನೇ ಪಂದ್ಯ ನಡೆಯಲಿರೋ ಓವಲ್​ ಮೈದಾನದಲ್ಲೂ ಭಾರತ ತಂಡದ ರೆಕಾರ್ಡ್ಸ್ ಕಳಪೆಯಾಗಿಯೇ ಇದೆ.

ಇದನ್ನೂ ಓದಿ : ಬೆನ್ ಸ್ಟೋಕ್ಸ್ ಜೊತೆ ಮೂವರು ಡ್ರಾಪ್ -5ನೇ ಪಂದ್ಯದಲ್ಲಿ ಭಾರತಕ್ಕಿದೆ ದೊಡ್ಡ ಅಡ್ವಾಂಟೇಜ್

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಸಾಕಷ್ಟು ಏಳು ಬೀಳುಗಳನ್ನ ಕಂಡಿದೆ. 1936 ರಿಂದ ಈವರೆಗೆ ಲಂಡನ್‌ನ ಓವಲ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 14 ಟೆಸ್ಟ್ ಪಂದ್ಯಗಳು ನಡೆದಿವೆ. ಇವುಗಳಲ್ಲಿ, ಆತಿಥೇಯ ಇಂಗ್ಲೆಂಡ್ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಉಭಯ ತಂಡಗಳ ನಡುವಿನ 7 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ.

ಟೀಂ ಇಂಡಿಯಾ ರೆಕಾರ್ಡ್ಸ್!

1936ರಲ್ಲಿ ಮೊದಲ ಟೆಸ್ಟ್,  1971 ರಲ್ಲಿ ಮೊದಲ ಬಾರಿಗೆ ಗೆಲುವು

2021ರಲ್ಲಿ ಈ ಮೈದಾನದಲ್ಲಿ ನಡೆದಿದ್ದ ಟೆಸ್ಟ್​ ಪಂದ್ಯದಲ್ಲಿ ಭಾರತ ಗೆಲುವು

1971ರಲ್ಲಿ ಅಜಿತ್ ವಾಡೇಕರ್ ಮತ್ತು 2021ರಲ್ಲಿ ಕೊಹ್ಲಿ ನೇತೃತ್ವದಲ್ಲಿ ಗೆಲುವು

1979 ಮತ್ತು 2007ರ ನಡುವೆ ಇಂಗ್ಲೆಂಡ್ ಮತ್ತು ಭಾರತ ಇಲ್ಲಿ ಸತತ ಡ್ರಾ

ಟೀಮ್​ ಇಂಡಿಯಾ ಏಕದಿನ, ಟೆಸ್ಟ್​ ಸೇರಿ 32 ಪಂದ್ಯ, 9ರಲ್ಲಿ ಗೆಲುವು

ಓವಲ್ ಮೈದಾನದಲ್ಲಿ ಭಾರತದ ಪರ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ರಾಹುಲ್ ದ್ರಾವಿಡ್ ಅವರ ಹೆಸರಲ್ಲಿದೆ. ಟೆಸ್ಟ್​ನಲ್ಲಿ ಭಾರತದ ಪರ ಅವರು 110.75 ಸರಾಸರಿಯಲ್ಲಿ 443ರನ್​ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ. ಸಕ್ರಿಯ ಆಟಗಾರರಲ್ಲಿ, ಕೆಎಲ್ ರಾಹುಲ್ ಇಲ್ಲಿ 62.25 ಸರಾಸರಿಯಲ್ಲಿ 249 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜಾ ಭಾರತದ ಪರ ಇಲ್ಲಿ ಹೆಚ್ಚು ವಿಕೆಟ್‌ 15 ಪಡೆದಿರುವ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ಓವಲ್‌ ಮೈದಾನದ ಪಿಚ್ ಬಗ್ಗೆ ನೋಡೋದಾದರೆ ಮೈದಾನದ ಮೇಲ್ಮೈ ಸಮತಟ್ಟಾಗಿ‌ದ್ದು ಮೊದಲ ಮೂರು ದಿನ ವೇಗಿಗಳು ಮೇಲುಗೈ ಸಾಧಿಸ್ತಾರೆ. ಕೊನೆಯ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತದೆ.  ಹೊಸ ಚೆಂಡಿನಲ್ಲಿ ಸೀಮ್ ಬೌಲರ್‌ಗಳಿಗೆ ವಿಕೆಟ್‌ ಬೇಟೆಯಾಡಲು ಹೆಚ್ಚು ಚಾನ್ಸಸ್ ಇರುತ್ತೆ. ಬ್ಯಾಟರ್​ಗಳು ಒಂದು ಬಾರಿ  ಪಿಚ್‌ಗೆ ಸೆಟ್‌ ಆದ್ರೂ ಅಂದ್ರೆ ಬೌಲರ್​ಗಳನ್ನ ಬೆಂಡೆತ್ತೋದು ಪಕ್ಕಾ. 1934 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ ಇದೇ ಮೈದಾನದಲ್ಲಿ 7 ವಿಕೆಟ್‌ಗೆ 903 ಗಳಿಸಿತ್ತು. ಇದು ಇಲ್ಲಿನ ಅತ್ಯಧಿಕ ಸ್ಕೋರ್. ಇಲ್ಲಿ ಭಾರತದ ಅತ್ಯುತ್ತಮ ಸ್ಕೋರ್ 664 ಆಗಿದೆ. 2007 ರ ಸರಣಿಯಲ್ಲಿಈ ಇನ್ನಿಂಗ್ಸ್ ಬಂದಿತ್ತು. ಸೋ ಈ ಪಂದ್ಯದಲ್ಲೂ ರನ್ಸ್ ಸುನಾಮಿ ಏಳೋದ್ರಲ್ಲಿ ಡೌಟೇ ಇಲ್ಲ.

Shantha Kumari