2025ರ ವೇಳೆಗೆ ತಲೆ ಎತ್ತಲಿದೆ ಭಾರತದ ಎತ್ತರದ ಮಾಲ್ – ಎಷ್ಟೆಲ್ಲಾ ವಿಶೇಷತೆಗಳಿವೆ ಗೊತ್ತಾ?

2025ರ ವೇಳೆಗೆ ತಲೆ ಎತ್ತಲಿದೆ ಭಾರತದ ಎತ್ತರದ ಮಾಲ್ – ಎಷ್ಟೆಲ್ಲಾ ವಿಶೇಷತೆಗಳಿವೆ ಗೊತ್ತಾ?

ಮಾಲ್ ಅಂದರೆ ಕೇಳಬೇಕಾ. ಮನುಷ್ಯರನ್ನ ಬಿಟ್ಟು ಮಿಕ್ಕೆದ್ದೆಲ್ಲಾ ಸಿಗುವ ಒಂದು ಶಾಪಿಂಗ್ ಮಾಲ್. ನಮ್ಮ ಭಾರತದಲ್ಲೂ ಕೂಡ ಅನೇಕ ನಗರಗಳಲ್ಲಿ ಭಿನ್ನ ವಿಭಿನ್ನವಾದ ಆಧುನಿಕ ಹಾಗೂ ಸುಂದರವಾದ ಶಾಪಿಂಗ್‌ ಮಾಲ್‌ಗಳಿವೆ. ಇಲ್ಲಿ ಪ್ರಪಂಚದ ಜನಪ್ರಿಯ ಬ್ರ್ಯಾಂಡ್‌ ಬಟ್ಟೆಗಳು, ಚಪ್ಪಲಿ, ಫ್ಯಾಷನ್‌ ವಸ್ತುಗಳಿಂದ ಹಿಡಿದು ಎಲ್ಲಾ ರೀತಿಯ ಸೌಂದರ್ಯ ಉತ್ಪನ್ನಗಳನ್ನು ಹೊಂದಿರುತ್ತದೆ. ನಾಲಗೆ ಹಾಗೂ ಹೊಟ್ಟೆಯನ್ನು ತುಂಬಿಸುವ ಫುಡ್ ಕೋರ್ಟ್‌ಗಳು ಕೂಡ ಇಲ್ಲಿ ಸಾಕಷ್ಟಿರುತ್ತವೆ.

ಇದನ್ನೂ ಓದಿ : ಮೊಟ್ಟೆಗಳಿಗೆ ಕೈ ಹಾಕಿದ್ರೆ ಹುಷಾರ್‌..! – ಮೊಟ್ಟೆ ಮುಟ್ಟಲು ಬಂದವನಿಗೆ ಹೆಬ್ಬಾವು ಮಾಡಿದ್ದೇನು?

ಆದರೆ ಇದೀಗ 2025 ರ ವೇಳೆಗೆ ಭಾರತದ ಅನೇಕ ಅದ್ಭುತ ಮಾಲ್‌ಗಳಿಗೆ ಸೆಡ್ಡು ಹೊಡೆಯುವಂತಹ ಮತ್ತೊಂದು ಮಾಲ್‌ ತಲೆ ಎತ್ತಲಿದೆ. ವಾಸ್ತವವಾಗಿ, ಇದು ಭಾರತದ ಅತಿ ಎತ್ತರದ ಮಾಲ್‌ ಆಗಲಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಎತ್ತರ ಮಾಲ್ ನಿರ್ಮಾಣವಾಗುತ್ತಿದೆ. ಇದು ಭಾರತದ ಅತಿ ಎತ್ತರವಾದ ಮಾಲ್‌ಗೆ ನೆಲೆಯಾಗಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಹಾಗೂ ಸಂದರ್ಶಕರನ್ನು ಬರ ಮಾಡಿಕೊಳ್ಳಲು 2025 ರವರೆಗೆ ಕಾಯಬೇಕಾಗುತ್ತದೆ. ಈ ಸುಂದರವಾದ ಮಾಲ್‌ಗೆ ‘ಸಯಾ ಸ್ಟೇಟಸ್‌’ ಎಂಬ ಹೆಸರನ್ನು ನೀಡಲಾಗುತ್ತದೆ. ಮೂಲಗಳ ಪ್ರಕಾರ, ಮಾಲ್‌ನ ನಿರ್ಮಾಣ ಕಾರ್ಯವು 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಟ್ಟಡದ ನಿರ್ಮಾಣ ಶೇಕಡಾ 25 ರಷ್ಟು ಪೂರ್ಣಗೊಂಡಿದೆ. ಇನ್ನು, ಕಟ್ಟಡದ ಎತ್ತರವು ಸುಮಾರು 150 ಅಡಿ, 9 ಮಹಡಿಗಳನ್ನು ಹೊಂದಿದೆ. ಮಾಲ್‌ನ ಪ್ರತಿಯೊಂದು ಮಹಡಿಗಳು ಐಷಾರಾಮಿ ಬ್ರ್ಯಾಂಡ್‌ಗಳ ಅಂಗಡಿಗಳನ್ನು ಹೊಂದಿರಲಿದೆ. ಮಾಲ್‌ ನಿರ್ಮಾಣದ ವೆಚ್ಚ ಬರೋಬ್ಬರಿ 2000 ಕೋಟಿಯಾಗಿದ್ದು, ಮಾಲ್‌ ಪ್ರೇಮಿಗಳನ್ನು ಬೆರಗುಗೊಳಿಸುವಂತಹ ಆಕರ್ಷಣೆಗಳನ್ನು ಹೊಂದಿರಲಿದೆ.

ಸಿಂಗಾಪುರದ ಪ್ರಸಿದ್ಧ ವಾಸ್ತುಶಿಲ್ಪ ಸಂಸ್ಥೆಯಾದ ಡಿಪಿ ಆರ್ಕಿಟೆಕ್ಟ್ಸ್ ಈ ಕಟ್ಟಡವನ್ನು ವಿನ್ಯಾಸಗೊಳಿಸುತ್ತಿದೆ. ಪ್ರತಿ ಚದರ ಅಡಿಗೆ INR 18000 ರಿಂದ INR 40,000 ವರೆಗೆ ಚಿಲ್ಲರೆ ಸ್ಥಳವನ್ನು ಮಾರಾಟ ಮಾಡಲಾಗುವುದು ಎಂದು ಸುದ್ದಿ ಮಾಡಿದೆ. ಮಾಲ್ 9 ಮಹಡಿಗಳನ್ನು ಹೊಂದಿದ್ದು, ನೆಲ ಮಹಡಿಯಲ್ಲಿ ಹೈಪರ್‌ಮಾರ್ಕೆಟ್ ಇರಲಿದೆ. ನಾಲ್ಕನೇ ಮಹಡಿಯಿಂದ ಒಂಬತ್ತನೇ ಅಂತಸ್ತಿನವರೆಗೆ ಬಹು ಮಟ್ಟದ ಪಾರ್ಕಿಂಗ್‌ ಜೊತೆಗೆ ಬೇಸ್‌ಮೆಂಟ್‌ ಪಾರ್ಕಿಂಗ್‌ ಇರುತ್ತದೆ. 1,600 ಕಾರುಗಳಿಗೆ ಸ್ಥಳಾವಕಾಶ ಕಲ್ಪಿಸಬಲ್ಲ ಬೃಹತ್ ಪಾರ್ಕಿಂಗ್ ಸ್ಥಳವನ್ನು ಒಳಗೊಂಡಿರಲಿದೆ. ಹಾಗೇ ಬಾರ್, ರೆಸ್ಟೋರೆಂಟ್‌ಗಳು ಇರಲಿವೆ.

suddiyaana