ಟಿ – 20 ವಿಶ್ವಕಪ್‌ಗೆ ಭಾರತದ ತಂಡ ಪ್ರಕಟ – ಯಾರಿಗೆಲ್ಲ ಸಿಕ್ತು ಚಾನ್ಸ್‌?

ಟಿ – 20 ವಿಶ್ವಕಪ್‌ಗೆ ಭಾರತದ ತಂಡ ಪ್ರಕಟ – ಯಾರಿಗೆಲ್ಲ ಸಿಕ್ತು ಚಾನ್ಸ್‌?

ಮುಂಬರುವ ಟಿ -20 ವಿಶ್ವಕಪ್‌ಗೆ ಬಲಿಷ್ಠ ಭಾರತದ ತಂಡ ಪ್ರಕಟವಾಗಿದೆ. ಯುಎಸ್‌ಎ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಈ ತಂಡದ ಪಟ್ಟಿಯಲ್ಲಿ ನಾಲ್ವರು ಆಟಗಾರರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಆದ್ರೆ ಕನ್ನಡಿಗ ಕೆ. ಎಲ್‌ ರಾಹುಲ್‌ ಅವರು ವಿಶ್ವಕಪ್‌ನಲ್ಲಿ ಚಾನ್ಸ್‌ ಮಿಸ್‌ ಆಗಿದೆ.

ಇದನ್ನೂ ಓದಿ: ಬಡತನದಿಂದ ಮೇಲೆದ್ದ ಕ್ರಿಕೆಟರ್‌! – ಓದಿದ್ದು 8 ಕ್ಲಾಸ್‌.. ಈಗ ಫೇಮಸ್ ಆಟಗಾರ!

ಬಿಸಿಸಿಐ ತಂಡಕ್ಕೆ ಆಟಗಾರರನ್ನು ಆಳೆದು ತೂಗಿ ಆಯ್ಕೆ ಮಾಡಿದೆ. ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನ ಖಾಲಿ ಇತ್ತು. ಆ ಸ್ಥಾನದ ಮೇಲೆ ಹಲವಾರು ಪ್ಲೇಯರ್ಸ್ ಕಣ್ಣಿಟ್ಟಿದ್ದರು. ಅದರಲ್ಲಿ ಟೀಮ್ಇಂಡಿಯಾದ ಸ್ಟಾರ್​ ಆಟಗಾರ ಕೆಎಲ್ ರಾಹುಲ್ ಸಹ ಒಬ್ಬರು ಇದ್ದರು. ಆದ್ರೆ ಕನ್ನಡಿಗ ಕೆಎಲ್‌ ರಾಹುಲ್‌ ಆವರನ್ನು ಟಿ 20 ಯಿಂದ ಕೈ ಬಿಡಲಾಗಿದೆ.

ಟೀಮ್‌ ನಲ್ಲಿ ಯಾರಿಗೆಲ್ಲ ಸ್ಥಾನ?

  • ರೋಹಿತ್ ಶರ್ಮಾ (ನಾಯಕ)
  • ಹಾರ್ದಿಕ್ ಪಾಂಡ್ಯ (ಉಪ ನಾಯಕ)
  • ಯಶಸ್ವಿ ಜೈಸ್ವಾಲ್
  • ವಿರಾಟ್ ಕೊಹ್ಲಿ
  • ಎಸ್.ದುಬೆ
  • ರವಿಂದ್ರ ಜಡೇಜಾ
  • ಅಕ್ಸರ್ ಪಟೇಲ್
  • ಕುಲದೀಪ್ ಯಾದವ್
  • ಅರ್ಷ್‍ದೀಪ್ ಸಿಂಗ್
  • ಯುಜ್ವೇಂದ್ರ ಚಾಹಲ್
  • ಜಸ್ಪ್ರೀತ್ ಬುಮ್ರಾ
  • ಮಹಮ್ಮದ್ ಸಿರಜ್
  • ರಿಷಬ್ ಪಂತ್ (ವಿಕೆಟ್ ಕಿಪರ್)
  • ಎಸ್.ಸ್ಯಾಮ್ಸನ್ (ವಿಕೆಟ್ ಕಿಪರ್)

ಮೀಸಲು ಆಟಗಾರು ಯಾರ್ಯಾರು?

ಶುಭಮನ್ ಗಿಲ್, ಖಲೀಲ್ ಅಹ್ಮದ್, ರಿಂಕು ಸಿಂಗ್, ಅವೇಶ್ ಖಾನ್

Shwetha M

Leave a Reply

Your email address will not be published. Required fields are marked *