ಟಿ – 20 ವಿಶ್ವಕಪ್‌ಗೆ ಭಾರತದ ತಂಡ ಪ್ರಕಟ – ಯಾರಿಗೆಲ್ಲ ಸಿಕ್ತು ಚಾನ್ಸ್?

ಮುಂಬರುವ ಟಿ -20 ವಿಶ್ವಕಪ್‌ಗೆ ಬಲಿಷ್ಠ ಭಾರತದ ತಂಡ ಪ್ರಕಟವಾಗಿದೆ. ಯುಎಸ್‌ಎ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಈ ತಂಡದ ಪಟ್ಟಿಯಲ್ಲಿ ನಾಲ್ವರು ಆಟಗಾರರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಆದ್ರೆ ಕನ್ನಡಿಗ ಕೆ. ಎಲ್ ರಾಹುಲ್ ಅವರು ವಿಶ್ವಕಪ್‌ನಲ್ಲಿ ಚಾನ್ಸ್ ಮಿಸ್ ಆಗಿದೆ.
ಇದನ್ನೂ ಓದಿ: ಬಡತನದಿಂದ ಮೇಲೆದ್ದ ಕ್ರಿಕೆಟರ್! – ಓದಿದ್ದು 8 ಕ್ಲಾಸ್.. ಈಗ ಫೇಮಸ್ ಆಟಗಾರ!
ಬಿಸಿಸಿಐ ತಂಡಕ್ಕೆ ಆಟಗಾರರನ್ನು ಆಳೆದು ತೂಗಿ ಆಯ್ಕೆ ಮಾಡಿದೆ. ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನ ಖಾಲಿ ಇತ್ತು. ಆ ಸ್ಥಾನದ ಮೇಲೆ ಹಲವಾರು ಪ್ಲೇಯರ್ಸ್ ಕಣ್ಣಿಟ್ಟಿದ್ದರು. ಅದರಲ್ಲಿ ಟೀಮ್ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಸಹ ಒಬ್ಬರು ಇದ್ದರು. ಆದ್ರೆ ಕನ್ನಡಿಗ ಕೆಎಲ್ ರಾಹುಲ್ ಆವರನ್ನು ಟಿ 20 ಯಿಂದ ಕೈ ಬಿಡಲಾಗಿದೆ.
ಟೀಮ್ ನಲ್ಲಿ ಯಾರಿಗೆಲ್ಲ ಸ್ಥಾನ?
- ರೋಹಿತ್ ಶರ್ಮಾ (ನಾಯಕ)
- ಹಾರ್ದಿಕ್ ಪಾಂಡ್ಯ (ಉಪ ನಾಯಕ)
- ಯಶಸ್ವಿ ಜೈಸ್ವಾಲ್
- ವಿರಾಟ್ ಕೊಹ್ಲಿ
- ಎಸ್.ದುಬೆ
- ರವಿಂದ್ರ ಜಡೇಜಾ
- ಅಕ್ಸರ್ ಪಟೇಲ್
- ಕುಲದೀಪ್ ಯಾದವ್
- ಅರ್ಷ್‍ದೀಪ್ ಸಿಂಗ್
- ಯುಜ್ವೇಂದ್ರ ಚಾಹಲ್
- ಜಸ್ಪ್ರೀತ್ ಬುಮ್ರಾ
- ಮಹಮ್ಮದ್ ಸಿರಜ್
- ರಿಷಬ್ ಪಂತ್ (ವಿಕೆಟ್ ಕಿಪರ್)
- ಎಸ್.ಸ್ಯಾಮ್ಸನ್ (ವಿಕೆಟ್ ಕಿಪರ್)
ಮೀಸಲು ಆಟಗಾರು ಯಾರ್ಯಾರು?
ಶುಭಮನ್ ಗಿಲ್, ಖಲೀಲ್ ಅಹ್ಮದ್, ರಿಂಕು ಸಿಂಗ್, ಅವೇಶ್ ಖಾನ್