ಭೂಮಿ ಮತ್ತು ಚಂದ್ರನ ಜೊತೆ ಸೆಲ್ಫಿ ಕ್ಲಿಕ್‌ ಮಾಡಿದ ಆದಿತ್ಯ! – ಸೆಲ್ಫಿ ಫೋಟೋ ಹಂಚಿಕೊಂಡ ಇಸ್ರೋ

ಭೂಮಿ ಮತ್ತು ಚಂದ್ರನ ಜೊತೆ ಸೆಲ್ಫಿ ಕ್ಲಿಕ್‌ ಮಾಡಿದ ಆದಿತ್ಯ! – ಸೆಲ್ಫಿ ಫೋಟೋ ಹಂಚಿಕೊಂಡ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ L1 ಮತ್ತೊಂದು ಮಹತ್ವದ ಕಾರಣಕ್ಕೆ ಸುದ್ದಿಯಾಗಿದೆ. ಆದಿತ್ಯಾ ಎಲ್ 1 ಬಾಹ್ಯಾಕಾಶ ನೌಕೆ ಸೂರ್ಯನ ಕಕ್ಷೆಯತ್ತ ದಾಪುಗಾಲಿರಿಸಿದ್ದು, ಇದೀಗ ಮಾರ್ಗ ಮಧ್ಯೆಯೇ ಸೆಲ್ಫಿ ಕ್ಲಿಕ್ಕಿಸಿ ಭೂಮಿ, ಚಂದ್ರನ ಫೋಟೋ ರವಾನಿಸಿದೆ.

ಇದನ್ನೂ ಓದಿ: ಚಂದ್ರಯಾನಗಿಂತ, ಸೂರ್ಯಯಾನ ಕಂಪ್ಲೀಟ್ ಭಿನ್ನ! -ಲಾಗ್ರೇಂಜ್ ಪಾಯಿಂಟ್ ತಲುಪಲು ನೌಕೆ ಎಷ್ಟು ದಿನ ತೆಗೆದುಕೊಳ್ಳುತ್ತೆ?

ಆದಿತ್ಯ – L1 ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್‌ ಗೆ ತೆರಳುತ್ತಿದೆ. ಈ ವೇಳೆ ಚಂದ್ರ ಹಾಗೂ ಭೂಮಿಯ ಚಿತ್ರಗಳನ್ನು ಸೆರೆಹಿಡಿದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದೆ.

ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಆದಿತ್ಯಾ ಎಲ್ 1 ಬಾಹ್ಯಾಕಾಶ ನೌಕೆಯನ್ನು ಹೊತ್ತಿದ್ದ ಪಿಎಸ್ ಎಲ್ ವಿ ಸಿ 57 ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿ ನೌಕೆಯನ್ನು ಕಕ್ಷೆಯಲ್ಲಿ ಬಿಟ್ಟಿತ್ತು. ಬಳಿಕ ಆದಿತ್ಯಾ ಎಲ್ 1 ನೌಕೆಯು ತನ್ನ ಗಮ್ಯ ಸ್ಥಾನದತ್ತ ಪ್ರಯಾಣ ಮುಂದುವರೆಸಿದೆ. ಬಾಹ್ಯಾಕಾಶ ನೌಕೆಯು ಈಗಾಗಲೇ ಎರಡು ಭೂಮಿಗೆ ಸುತ್ತುವರಿದ ಕಕ್ಷೆಯ ಕುಶಲತೆಯನ್ನು ಪೂರ್ಣಗೊಳಿಸಿದೆ ಮತ್ತು ಲ್ಯಾಗ್ರೇಂಜ್ ಪಾಯಿಂಟ್ L1 ಕಡೆಗೆ ವರ್ಗಾವಣೆ ಕಕ್ಷೆಯಲ್ಲಿ ಇರಿಸುವ ಮೊದಲು ಇನ್ನೆರಡು ಸುತ್ತನ್ನು ನಿರ್ವಹಿಸುತ್ತದೆ. ಆದಿತ್ಯ-L1 125 ದಿನಗಳ ನಂತರ L1 ಪಾಯಿಂಟ್‌ನಲ್ಲಿ ಉದ್ದೇಶಿತ ಕಕ್ಷೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

suddiyaana