ಪಡಿಕ್ಕಲ್ ಗೆ GOLDEN CHANCE – ನಂ.3 ಸ್ಲಾಟ್ ಪರ್ಮನೆಂಟ್ ಆಗುತ್ತಾ?
ಲಂಕಾ ನಾಡಲ್ಲಿ ಕನ್ನಡಿಗನ ಭವಿಷ್ಯ!

ಪಡಿಕ್ಕಲ್ ಗೆ GOLDEN CHANCE – ನಂ.3 ಸ್ಲಾಟ್ ಪರ್ಮನೆಂಟ್ ಆಗುತ್ತಾ?ಲಂಕಾ ನಾಡಲ್ಲಿ ಕನ್ನಡಿಗನ ಭವಿಷ್ಯ!

ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮೊದ್ಲೇ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿಯಾಗಿದೆ. ತಂಡಕ್ಕೆ ಸೆಲೆಕ್ಟ್ ಆಗಿದ್ದ ಸಾಯಿ ಸುದರ್ಶನ್ ಇಂಜುರಿಯಿಂದ ರಿಕವರ್ ಆಗದ ಕಾರಣ ಸರಣಿಯಿಂದಲೇ ರೂಲ್ಡ್ ಔಟ್ ಆಗಿದ್ದಾರೆ. ಹಾಗೇ ಸರ್ಫರಾಜ್ ಖಾನ್ ರಿಪ್ಲೇಸ್ ಪ್ಲೇಯರ್ ಆಗಿ ಜಾಯ್ನ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಸುದರ್ಶನ್ ಗಾಯ ಪಡಿಕ್ಕಲ್​ಗೆ ಒಂಥರಾ ಲಾಭವೇ ಆಗಲಿದೆ.

ಇದನ್ನೂ ಓದಿ : IPLನಲ್ಲಿ 70 ರನ್.. T-20Iನಲ್ಲಿ ಯಾಕಿಲ್ಲ? – ಸೂರ್ಯವಂಶಿಗೆ ಪ್ರಚಾರ ಜಾಸ್ತಿ ಆಯ್ತಾ?

ಆಗಸ್ಟ್ 15ರಿಂದ ಭಾರತ-ಲಂಕಾ ನಡುವೆ ಟೆಸ್ಟ್ ಸಿರೀಸ್ ಸ್ಟಾರ್ಟ್ ಆಗುತ್ತೆ. ಬ್ಯಾಡ್ ಲಕ್ ಅಂದ್ರೆ ಭಾರತ ತಂಡಕ್ಕೆ ಗಾಯಾಳುಗಳದ್ದೇ ದೊಡ್ಡ ತಲೆಬಿಸಿಯಾಗಿದೆ. ಅದ್ರಲ್ಲೂ ಪ್ಲೇಯಿಂಗ್ 11ನಲ್ಲಿ ಆಡ್ಬೇಕಿದ್ದವ್ರೇ ಹೊರ ಬೀಳ್ತಿದ್ದಾರೆ. ಇದೀಗ ಪಂದ್ಯದ ಆರಂಭಕ್ಕೆ ಐದು ದಿನ ಅಷ್ಟೇ ಇದೆ ಎನ್ನುವಾಗ ಸಾಯಿ ಸುದರ್ಶನ್ ಕೂಡ ಹೊರ ಬಿದ್ದಿದ್ದಾರೆ. ನಂಬರ್ 3ನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ಸುದರ್ಶನ್ ಹೊರ ಬಂದಿರೋದ್ರಿಂದ ಈಗ ಆ ಸ್ಲಾಟ್ ಕನ್ನಡಿಗ ಪಡಿಕ್ಕಲ್​ಗೆ ಪಕ್ಕಾ ಆದಂತಾಗಿದೆ.

ಸುದರ್ಶನ್ ಜಾಗದಲ್ಲಿ ಸೆಲೆಕ್ಟ್ ಆದ್ರೂ ಸರ್ಫರಾಜ್ ಗೆ ಚಾನ್ಸ್ ಕಷ್ಟ!

ಭಾರತ ಟೆಸ್ಟ್ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಾಯಿ ಸುದರ್ಶನ್ ಅವರ ಬದಲಿಗೆ ಸರ್ಫರಾಜ್ ಜಾಯ್ನ್ ಆಗಿದ್ರೂ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗೋದು ಕಷ್ಟ. ಈ ಸ್ಥಾನದಲ್ಲಿ ಬಹುಶಃ ಒಂದೋ ಶುಭ್​ಮನ್ ಗಿಲ್​ ಪ್ರಮೋಟ್ ಮಾಡ್ಬೋದು. ಅಥವಾ ನಮ್ಮ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಅವಕಾಶ ನೀಡ್ಬೋದು. ಮೊದಲ ಇನಿಂಗ್ಸ್‌ನಲ್ಲಿ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಆಡಿದರೆ ಎರಡನೇ ಇನಿಂಗ್ಸ್‌ನಲ್ಲಿ ಆ ಸ್ಥಾನದಲ್ಲಿ ರಿಷಬ್ ಪಂತ್‌ ಆಡಿದ್ರು. ಅಲ್ಲಿಗೆ ಪಡಿಕ್ಕಲ್ ನಂಬರ್ 3ಗೆ ಬೆಟರ್ ಆಪ್ಶನ್. ಅದೂ ಅಲ್ದೇ ಸರ್ಫರಾಜ್ ಖಾನ್ ಭಾರತದ ಪರ ಆರು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು  5 ಅಥವಾ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಚೊಚ್ಚಲ ಶತಕವು ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರು. ಸದ್ಯದ ಪರಿಸ್ಥಿತಿಗಳೆಲ್ಲಾ ದೇವದತ್ ಪಡಿಕ್ಕಲ್ ಪರವಾಗೇ ಇವೆ.

ಪಡಿಕ್ಕಲ್ ಬೆಸ್ಟ್ ಚಾಯ್ಸ್!

ಫಸ್ಟ್ ಪ್ರಿಯಾರಿಟಿ ಆಗಿದ್ದ ಸಾಯಿ ಸುದರ್ಶನ್ ತಂಡದಿಂದಲೇ ಹೊರಗೆ

ಲಂಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿರುವ ದೇವದತ್ ಪಡಿಕ್ಕಲ್

ಪಡಿಕ್ಕಲ್ ಕೂಡ ಲೆಫ್ಟ್ ಹ್ಯಾಂಡ್ ಬ್ಯಾಟರ್ ಆಗಿದ್ದು ಸಾಯಿಗೆ ಪರ್ಯಾಯ

ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 3ನೇ ಸ್ಥಾನದಲ್ಲೇ ಪಡಿಕ್ಕಲ್ ಹೆಚ್ಚು ಬ್ಯಾಟಿಂಗ್

30 ಪಂದ್ಯ, 51ರ ಸರಾಸರಿ, 2,112 ರನ್ಸ್, 6 ಶತಕ, 10 ಅರ್ಧಶತಕ

ಶ್ರೀಲಂಕಾ ಸ್ಪಿನ್ ಟ್ರ್ಯಾಪ್ ಫೇಸ್ ಮಾಡಲು ಸಮರ್ಥನಾಗಿರುವ ಕನ್ನಡಿಗ

ಆಫ್‌ ಸೈಡ್ ಬ್ಯಾಟಿಂಗ್ ಶೈಲಿ ಮತ್ತು ಬಲಿಷ್ಠ ಕವರ್ ಡ್ರೈವ್‌ ಗಳ ಹೀರೋ

ತಾಳ್ಮೆ ಮತ್ತು ಸ್ಟ್ರಾಂಗ್ ಡಿಫೆನ್ಸ್, ಭರ್ಜರಿ ಫಾರ್ಮ್ ಇರೋದ್ರಿಂದ ಪ್ಲಸ್

2025-26ರ ರಣಜಿ ಟ್ರೋಫಿ ಸರಣಿಯಲ್ಲಿ ಕರ್ನಾಟಕ ತಂಡದ ನಾಯಕತ್ವ

ಹೀಗೆ ನಂಬರ್ 3ನಲ್ಲಿ ಆಡೋಕೆ ಪಡಿಕ್ಕಲ್ ಬೆಸ್ಟ್ ಚಾಯ್ಸ್ ಆಗ್ತಾರೆ. ಅದಕ್ಕಿಂತ ಮುಖ್ಯವಾಗಿ ಪಡಿಕ್ಕಲ್​ಗೂ ಕೂಡ ಈ ಸರಣಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡೋದು ಅವ್ರ ಭವಿಷ್ಯವನ್ನೂ ನಿರ್ಧಾರ ಮಾಡುತ್ತೆ. ಲಂಕಾ ಸರಣಿಗೆ ಪಡಿಕ್ಕಲ್ ಆಯ್ಕೆಯಾಗಿದ್ರೂ ಅವ್ರ ಪ್ಲೇಯಿಂಗ್ 11 ಅವಕಾಶದ ಬಗ್ಗೆ ಕ್ಲಾರಿಟಿ ಇರ್ಲಿಲ್ಲ. ಆದ್ರೆ ಯಾವಾಗ ಸಾಯಿ ಸುದರ್ಶನ್ ತಂಡದಿಂದ ಹೊರಬಿದ್ರೋ ಅಲ್ಲಿಗೆ ಅವ್ರ ಸ್ಲಾಟ್ ಕನ್ಫರ್ಮ್ ಆಗಿದೆ. ಇಲ್ದಿದ್ರೆ ಸುದರ್ಶನ್ ಫಸ್ಟ್ ಪ್ರಿಯಾರಿಟಿ ಬ್ಯಾಟರ್ ಆಗ್ತಿದ್ರು. ಹೀಗಾಗಿ ಲಂಕಾ ನಾಡಲ್ಲಿ ಸಿಗುವಂಥ ಅವಕಾಶವನ್ನ  ಸಮರ್ಥವಾಗಿ ಬಳಸಿಕೊಂಡ್ರೆ ಮುಂದಿನ ದಿನಗಳಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಖಾಯಂ ಪ್ಲೇಯರ್ ಆಗ್ಬೋದು. ಌಂಡ್ ನಂಬರ್ 3ನಲ್ಲಿ ಸಾಯಿ ಸುದರ್ಶನ್​ರನ್ನ ಓವರ್​ಟೇಕ್ ಮಾಡಿ ಸ್ಲಾಟ್ ಪರ್ಮನೆಂಟ್ ಮಾಡಿಕೊಳ್ಬೋದು. ಯಾಕಂದ್ರೆ ಓಪನರ್ಸ್ ಕೋಟಾದಲ್ಲಿ ಜೈಸ್ವಾಲ್ ಮತ್ತು ರಾಹುಲ್ ಫಿಕ್ಸ್ ಇದ್ದಾರೆ. ನಂಬರ್ 4ನಲ್ಲಿ ನಾಯಕ ಗಿಲ್ ಇದ್ರೆ ಐದರಲ್ಲಿ ರಿಷಭ್ ಪಂತ್ ಬರ್ತಾರೆ. ಉಳಿದಂತೆ ಆಲ್​ರೌಂಡರ್ಸ್, ಬೌಲರ್ಸ್ ಌಡ್ ಆಗ್ತಾರೆ. ಹೀಗಾಗಿ ನಂಬರ್ 3ನಲ್ಲಷ್ಟೇ ಪಡಿಕ್ಕಲ್​ಗೆ ದೊಡ್ಡ ಆಪರ್ಚುನಿಟಿ ಸಿಗೋದು.

Shantha Kumari

Leave a Reply

Your email address will not be published. Required fields are marked *