ಇದು ಚರಿತ್ರೆ ಸೃಷ್ಟಿಸೋ ಅವತಾರ – 3ನೇ ಟ್ರೋಫಿಯೋ.. ಚೊಚ್ಚಲ ಕಪ್?
ಮೋದಿ ಅಂಗಳದಲ್ಲಿ ಯಾರಾಗ್ತಾರೆ KING?

10ನೇ ಆವೃತ್ತಿಯ ಟಿ-20 ವಿಶ್ವಕಪ್ನ ಚಾಂಪಿಯನ್ಸ್ ಯಾರು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗುತ್ತೆ. ಹೊಸ ಚಾಂಪಿಯನ್ಗಳ ಉದಯಕ್ಕೆ ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿದೆ. ಒಂದ್ಕಡೆ ಸೌತ್ ಆಫ್ರಿಕಾ ವಿರುದ್ಧ ಒನ್ ಸೈಡೆಡ್ ಆಗಿ ಗೆದ್ದು ಬಂದಿರೋ ನ್ಯೂಜಿಲೆಂಡ್ ಮತ್ತೊಂದ್ಕಡೆ ಇಂಗ್ಲೆಂಡ್ ವಿರುದ್ಧ ರಣರೋಚಕವಾಗಿ ಗೆದ್ದು ಫೈನಲ್ಗೆ ನುಗ್ಗಿರೋ ಭಾರತ. ಎರಡೂ ತಂಡಗಳು ಟ್ರೋಫಿ ಎತ್ತಿ ಹಿಡಿಯಲು ಇನ್ನೊಂದು ಗೆಲುವಿಗಾಗಿ ಕಾಯ್ತಿದ್ದಾರೆ. ಇಲ್ಲಿ ಯಾರೇ ಗೆದ್ರೂ ಹೊಸ ಇತಿಹಾಸ ನಿರ್ಮಿಸಿದಂತೆಯೇ ಲೆಕ್ಕ. ಅದ್ರಲ್ಲೂ ಭಾರತ ಗೆದ್ರೆ 3 ವಿಶ್ವದಾಖಲೆಗಳನ್ನ ಮಾಡ್ಬೋದು.
ಇದನ್ನೂ ಓದಿ : ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಲಂಚ – ಲೋಕಾ ಬಲೆಗೆ ಬಿದ್ದ ಹುಬ್ಬಳ್ಳಿ–ಧಾರವಾಡ ಪಾಲಿಕೆ ಅಧಿಕಾರಿ
2026ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಕ್ಲೈಮ್ಯಾಕ್ಸ್ನಲ್ಲಿದ್ದು ಹೊಸ ವಿನ್ನರ್ ಘೋಷಣೆಗೆ ಇನ್ನೊಂದೇ ಪಂದ್ಯ ಬಾಕಿ ಇದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ ಹಾಲಿ ಚಾಂಪಿಯನ್ ಇರೋದ್ರಿಂದ ಟ್ರೋಫಿ ಡಿಫೆನ್ಸ್ ಮಾಡಿಕೊಳ್ಳೋಕೆ ನೋಡ್ತಿದ್ದಾರೆ. ಅತ್ತ ಮಿಚೆಲ್ ಸ್ಯಾಂಟ್ನರ್ ಕ್ಯಾಪ್ಟನ್ಸಿಯ ನ್ಯೂಜಿಲೆಂಡ್ ಚೊಚ್ಚಲ ಬಾರಿಗೆ ಕಪ್ ಗೆಲ್ಲೋ ಟಾರ್ಗೆಟ್ನಲ್ಲಿದ್ದಾರೆ. 2007ರಿಂದ ಆರಂಭವಾಗಿರೋ ಈ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್ ಹಾಗೇ ವೆಸ್ಟ್ ಇಂಡೀಸ್ ತಂಡಗಳು ತಲಾ ಎರಡೆರಡು ಸಲ ಟ್ರೋಫಿ ಗೆದ್ದಿದ್ದಾರೆ. ಌಂಡ್ ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೇ ಶ್ರೀಲಂಕಾ ತಂಡಗಳು ಒಂದೊಂದು ಟ್ರೋಫಿ ಗೆದ್ದಿದ್ದಾರೆ. ಈಗ 10ನೇ ಆವೃತ್ತಿಯಲ್ಲಿ ಯಾರೇ ಗೆದ್ರೂ ಚರಿತ್ರೆ ಕ್ರಿಯೇಟ್ ಆಗುತ್ತೆ.
3 ವಿಶ್ವದಾಖಲೆಯ ಹೊಸ್ತಿಲಲ್ಲಿ ಭಾರತ!
- ಟೂರ್ನಿ ಆಯೋಜನೆಯ ತಂಡ ಇದುವರೆಗೂ ಟ್ರೋಫಿ ಗೆದ್ದಿಲ್ಲ
- ಟಿ-20 ವಿಶ್ವಕಪ್ ನಲ್ಲಿ ಸತತ 2ನೇ ಬಾರಿಗೆ ಕಪ್ ಗೆದ್ದಿಲ್ಲ
- ವಿಶ್ವಕಪ್ ಟೂರ್ನಿಯಲ್ಲಿ 3 ಕಪ್ ಗಳನ್ನ ಯಾವ ತಂಡ ಗೆದ್ದಿಲ್ಲ
ಮತ್ತೊಂದು ಟ್ರೋಫಿ ಹೊಸ್ತಿಲಿನಲ್ಲಿರೋ ಭಾರತಕ್ಕೆ ಈ ಮೂರೂ ದಾಖಲೆಗಳನ್ನ ಬರೆಯೋ ಅವಕಾಶ ಇದೆ. ಌಂಡ್ ನ್ಯೂಜಿಲೆಂಡ್ ತಂಡದ್ದು ಅಂತಾ ನೋಡೋದಾದ್ರೆ ಟಿ-20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಇದುವರೆಗೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. 2021ರಲ್ಲಿ ಫೈನಲ್ಗೆ ಒಮ್ಮೆ ಬಂದಿದ್ರೂ ಕೂಡ ಆ ಸೀಸನ್ನಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು. ಸೋ ಈಗ ಕಿವೀಸ್ ಬಳಗ ಎರಡನೇ ಬಾರಿ ಫೈನಲ್ಗೆ ಬಂದಿದ್ದು ಚೊಚ್ಚಲ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ನೋಡಿರಿ

