KLಗೆ ಗಾಯ.. 4ನೇ ಟೆಸ್ಟ್ ಗೆ OUT? – ಆಸಿಸ್ ಬೌಲರ್ಸ್ ಕಾಡಿದ್ದೇ ರಾಹುಲ್

KLಗೆ ಗಾಯ.. 4ನೇ ಟೆಸ್ಟ್ ಗೆ OUT? – ಆಸಿಸ್ ಬೌಲರ್ಸ್ ಕಾಡಿದ್ದೇ ರಾಹುಲ್

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಗೆಲ್ಬೇಕು ಲೀಡ್ ತಗೊಳ್ಬೇಕು ಅಂತಾ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಗೇಮ್ ಪ್ಲ್ಯಾನ್ ಮಾಡಿಕೊಳ್ತಿವೆ. ಡಿಸೆಂಬರ್ 26ರಿಂದ ಶುರುವಾಗಲಿರುವ ಪಂದ್ಯ ಬಾಕ್ಸಿಂಗ್ ಡೇ ಫೈಟ್ ಆಗಿರೋದ್ರಿಂದ ಹೈವೋಲ್ಟೇಜ್ ಆಗಿ ಮಾರ್ಪಟ್ಟಿದೆ. ಬಟ್ ಪ್ಲೇಯಿಂಗ್ 11 ಸೆಟ್ ಮಾಡಿಕೊಳ್ತಿದ್ದ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬಿದ್ದಿದೆ. ಉತ್ತಮ ಫಾರ್ಮ್​ನಲ್ಲಿರೋ ಕೆಎಲ್ ರಾಹುಲ್ ಮೈದಾನಕ್ಕೆ ಇಳಿಯೋದೇ ಡೌಟಿದೆ. ಕೆಎಲ್​ಗೆ ಏನಾಯ್ತು? ಗಿಲ್ ಕೂಡ ಸದ್ದು ಮಾಡ್ತಿಲ್ಲ ಯಾಕೆ? ಹೊಸ ಆಟಗಾರರಿಗೆ ಸಿಗುತ್ತಾ ಚಾನ್ಸ್? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹಗ್ಗಾಜಗ್ಗಾಟ – ಭಾರತದ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಎಫೆಕ್ಟ್!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಸರಣಿಯಲ್ಲಿ ಈಗಾಗ್ಲೇ ಮೂರು ಪಂದ್ಯಗಳು ಮುಗಿದಿವೆ. ಫಸ್ಟ್ ಮ್ಯಾಚ್​ನಲ್ಲಿ ಭಾರತ ಗೆದ್ದಿದ್ರೆ ಸೆಕೆಂಡ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಮೂರನೇ ಮ್ಯಾಚ್ ಡ್ರಾ ಆಗಿದೆ. ಸೋ ಅಲ್ಲಿಗೆ ಸರಣಿ ಸಮಬಲವಾಗಿದೆ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಗೆದ್ದು ಮುನ್ನಡೆ ಕಾಯ್ದುಕೊಳ್ಳೋಕೆ ಉಭಯ ತಂಡಗಳೂ ಪ್ಲೇಯಿಂಗ್ 11 ಸ್ಟ್ರಾಟಜಿಯನ್ನ ಮಾಡಿಕೊಳ್ತಿವೆ. ಬಟ್ ಈ ವಿಚಾರದಲ್ಲಿ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ. ಒಳ್ಳೆ ಫಾರ್ಮ್​ನಲ್ಲಿರೋ ಕೆಎಲ್ ರಾಹುಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ.

ಅಭ್ಯಾಸದ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡ ಕೆಎಲ್!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಮ್ಯಾಚ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಮಾಡ್ತಿವೆ. ಬಟ್ ಪಂದ್ಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಸರಣಿಯುದ್ದಕ್ಕೂ ಕಾಂಗರೂ ಬೌಲರ್​ಗಳನ್ನು ಕಾಡಿದ್ದ ಕನ್ನಡಿಗ ಕೆಎಲ್ ರಾಹುಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ರಾಹುಲ್ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಗಾಯಗೊಂಡ ಬೆರಳಿಗೆ ತಂಡದ ಫಿಸಿಯೊ ಚಿಕಿತ್ಸೆ ನೀಡುತ್ತಿದ್ದಾರೆ. ಆದ್ರೆ ಈ ಗಾಯ ಎಷ್ಟು ಗಂಭೀರವಾಗಿದೆ ಮತ್ತು ಎಷ್ಟು ದಿನ ತಂಡದಿಂದ ಹೊರಗುಳಿಯಬೇಕಾಗುತ್ತೆ ಅನ್ನೋ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.

ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ ರಾಹುಲ್!

ಸದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಬೆಸ್ಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ತಂಡದ ಇತರೆ ಬ್ಯಾಟ್ಸ್‌ಮನ್‌ಗಳಿಗೆ ಹೋಲಿಸಿದರೆ ರಾಹುಲ್ ಹೆಚ್ಚು ಕ್ರೀಸ್​ನಲ್ಲಿ ನಿಂತು ಆಸೀಸ್ ವೇಗಿಗಳನ್ನು ಕಾಡುತ್ತಿದ್ದಾರೆ. ಈ ಸರಣಿಯಲ್ಲಿ ಇದುವರೆಗೆ ಆಡಿರುವ ಆರು ಇನ್ನಿಂಗ್ಸ್‌ಗಳಲ್ಲಿ 47 ಸರಾಸರಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 235 ರನ್ ಗಳಿಸಿದ್ದಾರೆ. ಈ ಮೂಲಕ ಈ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಆಗಿದ್ದಾರೆ.

ಭಾರತದ ಪರ ಏರಿಳಿತದ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್!

ಸದ್ಯ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಬ್ಯಾಟಿಂಗ್​ನಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ.  ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 16 ರನ್ ಗಳಿಸಿದ್ದ ಕೆಎಲ್ ರಾಹುಲ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 22 ರನ್ ಬಾರಿಸಿದ್ರು. ಹಾಗೇ ಎರಡನೇ ಪಂದ್ಯದ ಫಸ್ಟ್ ಇನ್ನಿಂಗ್ಸ್​ನಲ್ಲಿ 68 ರನ್ ಸಿಡಿಸಿ ಅಬ್ಬರಿಸಿದ್ರು. ಬಟ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಚಾನ್ಸ್ ಸಿಗುವಷ್ಟ್ರಲ್ಲಿ ಭಾರತ ಪಂದ್ಯವನ್ನ ಗೆದ್ದಾಗಿತ್ತು.  ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಡಕ್​ಔಟ್ ಆಗಿದ್ದ ಕೆಎಲ್ ಎರಡನೇ ಇನ್ನಿಂಗ್ಸ್​ನಲ್ಲಿ 12 ರನ್ ಗಳಿಸಿದ್ರು. ಎರಡೂ ಇನ್ನಿಂಗ್ಸ್​ನಲ್ಲಿ ಸದ್ದು ಮಾಡದ ಕೆಎಲ್​ರನ್ನ ಮುಂದಿನ ಎರಡು ಪಂದ್ಯಗಳಲ್ಲಿ ಪ್ಲೇಯಿಂಗ್ 11ನಿಂದ ಡ್ರಾಪ್ ಮಾಡಲಾಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯ ಮೊದಲ ಇನ್ನಿಂಗ್ಸ್​ನಲ್ಲಿ 26 ರನ್, ಎರಡನೇ ಇನ್ನಿಂಗ್ಸ್​ಗೆ 77 ರನ್ ಕಲೆ ಹಾಕಿದ್ರು. ಸೆಕೆಂಡ್ಸ್ ಮ್ಯಾಚ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ 37 ರನ್ ಸೆಕೆಂಡ್ ಇನ್ನಿಂಗ್ಸ್​ಗೆ 7 ರನ್ ಬಾರಿಸಿದ್ರು. ಗಾಬ್ಬಾದಲ್ಲಿ ನಡೆದ ಮೂರನೇ ಪಂದ್ಯದ ಫಸ್ಟ್ ಇನ್ನಿಂಗ್ಸ್​ನಲ್ಲಿ  84 ರನ್ ಬಾರಿಸಿದ್ರೆ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 4 ರನ್ ಸಿಡಿಸಿದ್ರು. ಅಷ್ಟ್ರಲ್ಲಿ ಪಂದ್ಯ ಡ್ರಾ ಆಗಿತ್ತು.

ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಓಪನರ್ ಯಾರು?

ಆಸ್ಟ್ರೇಲಿಯಾ ಸರಣಿಯಲ್ಲಿ ಕೆಎಲ್ ರಾಹುಲ್ ರೋಹಿತ್ ಶರ್ಮಾ ಅವ್ರ ಓಪನಿಂಗ್ ಸ್ಲಾಟ್​ನಲ್ಲಿ ಕಣಕ್ಕಿಳಿದು ಸಾಲಿಡ್ ಪರ್ಪಾಮೆನ್ಸ್ ಕೊಡ್ತಿದ್ದಾರೆ. ಫಸ್ಟ್ ಮ್ಯಾಚ್​ನನಲ್ಲಿ ರೋಹಿತ್ ಶರ್ಮಾ ಆಡಿರಲಿಲ್ಲ. ಸೋ ಕೆಎಲ್ ಆರಂಭಿಕರಾಗಿ ಕಾಣಿಸಿಕೊಂಡಿದ್ರು. ಆ ಬಳಿಕ 2 ಮತ್ತು ಮೂರನೇ ಪಂದ್ಯಗಳಿಗೂ ರೋಹಿತ್ 6ನೇ ಸ್ಲಾಟ್​ನಲ್ಲಿದ್ರೆ ಕೆಎಲ್ ಓಪನರ್ ಆಗೇ ಇದ್ರು. ಬಟ್ ರೋಹಿತ್ ಶರ್ಮಾ ಕಳೆದ ಎರಡು ಪಂದ್ಯಗಳಲ್ಲಿ ಕಂಪ್ಲೀಟ್ ಫೇಲ್ಯೂರ್ ಆಗಿದ್ದಾರೆ. ಹೀಗಾಗಿ ಮತ್ತೆ ನಾಲ್ಕನೇ ಪಂದ್ಯಕ್ಕೆ ಓಪನರ್ ಆಗಿ ಕಣಕ್ಕಿಳಿಸೋಕೆ ಮ್ಯಾನೇಜ್​ಮೆಂಟ್ ಪ್ಲ್ಯಾನ್ ಮಾಡ್ತಿದೆ. ಹಾಗೇನಾದ್ರೂ ರೋಹಿತ್ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ರೆ ಕೆಲ್ ರಾಹುಲ್ ಮೂರನೇ ಸ್ಲಾಟ್​ಗೆ ಬರ್ತಾರೆ. 3ನೇ ಸ್ಲಾಟ್​ನಲ್ಲಿದ್ದ ಶುಭ್​ಮನ್ ಗಿಲ್​ರನ್ನ ಪ್ಲೇಯಿಂಗ್ 11ನಿಂದ ಡ್ರಾಪ್ ಮಾಡೋ ಸಾಧ್ಯತೆ ಇದೆ.

Shwetha M

Leave a Reply

Your email address will not be published. Required fields are marked *