ಆಂಗ್ಲರ ಕೊಬ್ಬಿಳಿಸುತ್ತಾ ಭಾರತ? ಪಂತ್, ಬುಮ್ರಾ ಇಲ್ಲದೆ ಗೆಲ್ತಾರಾ?
5ನೇ ಫೈಟ್ ಗೆ ಹೇಗಿದೆ ಗಿಲ್ ಬಳಗ?

ಆಂಗ್ಲರ ಕೊಬ್ಬಿಳಿಸುತ್ತಾ ಭಾರತ?  ಪಂತ್, ಬುಮ್ರಾ ಇಲ್ಲದೆ ಗೆಲ್ತಾರಾ?5ನೇ ಫೈಟ್ ಗೆ ಹೇಗಿದೆ ಗಿಲ್ ಬಳಗ?

ಇಷ್ಟು ದಿನಗಳ ಪಂದ್ಯದ್ದೇ ಒಂದು ಲೆಕ್ಕ.. ಗುರುವಾರದಿಂದ ಶುರುವಾಗೋ ಮ್ಯಾಚ್ನದ್ದೇ ಮತ್ತೊಂದು ಲೆಕ್ಕ. ಮ್ಯಾಂಚೆಸ್ಟರ್ನಲ್ಲಿ ನಡೆದ ಕೊನೇ ದಿನದಾಟದಲ್ಲಿ ನಡೆದ ಕೆಲವೊಂದು ಘಟನೆಗಳು ಎರಡೂ ತಂಡಗಳ ನಡುವೆ ಕಿಚ್ಚು ಹಚ್ಚಿದೆ. ಹ್ಯಾಂಡ್‌ಶೇಕ್‌ಗೆ ಮುಂದಾಗಿ ಶೇಪ್ ಔಟ್ ಆಗಿದ್ದ ಆಂಗ್ಲರಿಗೆ ಅಕ್ಷರಶಃ ಈಗೋ ಹರ್ಟ್ ಆಗಿದೆ. ಸೋ ಹೇಗಾದ್ರೂ ಮಾಡಿ ಐದನೇ ಪಂದ್ಯವನ್ನ ಗೆದ್ದು ಸರಣಿ ಕೈವಶ ಮಾಡಿಕೊಳ್ಬೇಕು ಅಂತಾ ಕಾಯ್ತಿದ್ದಾರೆ. ಆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ರೋಚಕ ಘಟ್ಟಕ್ಕೆ ಬಂದಿದೆ. ಈಗಾಗ್ಲೇ ನಾಲ್ಕು ಪಂದ್ಯಗಳು ಮುಗಿದಿದ್ದು ಇಂಗ್ಲೆಂಡ್ ತಂಡ ಎರಡದಲ್ಲಿ ಗೆದ್ರೆ ಭಾರತ ಒಂದು ಪಂದ್ಯ ವಿನ್ ಆಗಿದೆ. ಒಂದು ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿದೆ. ಸದ್ಯಕ್ಕಂತೂ ಭಾರತ ಸರಣಿ ಗೆಲ್ಲೋ ಅವಕಾಶ ಕಳ್ಕೊಂಡಾಗಿದೆ. ಉಳಿದಿರೋದು ಒಂದೇ ದಾರಿ. ಸರಣಿ ಡ್ರಾ ಮಾಡಿಕೊಳ್ಳೋದು. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಐದನೇ ಮ್ಯಾಚ್ ನಲ್ಲಿ ಮಸ್ಟ್ ಌಂಡ್ ಶುಡ್ ವಿನ್ ಆದ್ರಷ್ಟೇ ಸರಣಿ ಸಮಬಲ. ಅಥವಾ ಆಂಗ್ಲರೇನಾದ್ರೂ ಕೊನೇ ಪಂದ್ಯ ಗೆದ್ರೂ ಅಥವಾ ಐದನೇ ಪಂದ್ಯ ಡ್ರಾನಲ್ಲಿ ಕೊನೆಗೊಂಡ್ರೂ ಸರಣಿ ಆಂಗ್ಲರ ಕೈವಶ ಆಗುತ್ತೆ. ಸಪ್ಪೆ ಮೋರೆ ಹಾಕಿಕೊಂಡು ಗಿಲ್ ಪಡೆ ಭಾರತಕ್ಕೆ ವಾಪಸ್ ಆಗ್ಬೇಕಾಗುತ್ತೆ. ಹೀಗಾಗೇ ಮಸ್ಟ್ ವಿನ್ ಮ್ಯಾಚ್ಗಾಗಿ ಭಾರತ ಬಲಿಷ್ಠ ಪಡೆಯನ್ನೇ ಅಖಾಡಕ್ಕಿಳಿಸಬೇಕಿದೆ.

ಪಂತ್ ರೂಲ್ಡ್ ಔಟ್.. ಜಗದೀಸನ್ ಗೆ ಸಿಗುತ್ತಾ ಚಾನ್ಸ್?

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಇಂಜುರಿಯಿಂದಾಗಿ ಐದನೇ ಪಂದ್ಯದಿಂದ ರೂಲ್ಡ್ ಔಟ್ ಆಗಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಮೇನ್ ಸ್ಟ್ರೆಂಥ್ ಆಗಿದ್ದ ಪಂತ್ ಗೈರು ಟೀಂ ಇಂಡಿಯಾವನ್ನ ಕಾಡೋದು ಪಕ್ಕಾ ಇದೆ. ಸೋ ಪಂತ್ ಜಾಗಕ್ಕೆ ಸಮರ್ಥ ಆಟಗಾರನನ್ನೇ ರಿಪ್ಲೇಸ್ ಮಾಡಬೇಕು. ಸದ್ಯ 29 ವರ್ಷದ ನಾರಾಯಣ್ ಜಗದೀಸನ್ ಭಾರತ ತಂಡವನ್ನ ಸೇರಿದ್ದಾರೆ. ತಮಿಳುನಾಡು ಮೂಲದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಈತ ಈವರೆಗೆ ಒಟ್ಟು 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 10 ಶತಕಗಳು ಮತ್ತು 14 ಅರ್ಧಶತಕಗಳ ನೆರವಿನೊಂದಿಗೆ ಒಟ್ಟು 3373 ರನ್ಗಳನ್ನು ಗಳಿಸಿದ್ದಾರೆ. ಇದರ ನಡುವೆ ಒಂದು ತ್ರಿಶತಕವನ್ನೂ ಸಹ ಬಾರಿಸಿದ್ದಾರೆ.  ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿದ್ದು, ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿಸ್ತಾರಾ ಕಾದು ನೋಡ್ಬೇಕು.

ಬುಮ್ರಾಗೆ ರೆಸ್ಟ್ ನೀಡಿದ್ರೆ ಅರ್ಷದೀಪ್ ಸಿಂಗ್ ಡೆಬ್ಯೂ?

ಮೊದಲ ಪಂದ್ಯದಿಂದಲೂ ಬುಮ್ರಾ ಈ ಪಂದ್ಯ ಆಡ್ತಾರಾ ಮುಂದಿನ ಪಂದ್ಯ ಆಡ್ತಾರಾ ಅನ್ನೋ ಬಗ್ಗೆ ಚರ್ಚೆಯಾಗ್ತಾನೇ ಇದೆ. ಸದ್ಯ ಐದನೇ ಪಂದ್ಯದ ಆರಂಭಕ್ಕೂ ಮುನ್ನ ಮತ್ತೆ ಅದೇ ವಿಚಾರ ಮುನ್ನಲೆಗೆ ಬಂದಿದೆ. ನಿರ್ಣಾಯಕ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯುತ್ತಾರಾ ಅನ್ನೋ ಕುತೂಹಲ ಇದೆ. ಯಾಕಂದ್ರೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಬುಮ್ರಾ ಕೇವಲ 3 ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ ಎಂದು ಬಿಸಿಸಿಐ ಮೊದಲೇ ಹೇಳಿತ್ತು. ಈಗಾಗ್ಲೇ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ಗಳನ್ನಾಡಿರುವ ಜಸ್ಪ್ರೀತ್ ಬುಮ್ರಾಗೆ 5ನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ರೂ ಅಚ್ಚರಿ ಇಲ್ಲ. ಬುಮ್ರಾರನ್ನ ಕೈಬಿಟ್ರೆ ಎಡಗೈ ವೇಗಿ   ಅರ್ಶ್ದೀಪ್ ಸಿಂಗ್ ಓವಲ್ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಇನ್ನು ಅನ್ಶುಲ್ ಕಾಂಬೋಜ್ ಗೂ ಕೊಕ್ ಕೊಟ್ಟು ಆಕಾಶ್ ದೀಪ್ ರನ್ನ ಮತ್ತೆ ಪ್ಲೇಯಿಂಗ್ 11ನಲ್ಲಿ ಸೇರಿಸಬಹುದು. ಅಂತಿಮವಾಗಿ ಸಂಭಾವ್ಯ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋದನ್ನ ನೋಡೋದಾದ್ರೆ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಓಪನ್ ಮಾಡ್ತಾರೆ. ಆ ನಂತ್ರ 3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಬ್ಯಾಟಿಂಗ್ ಗೆ ಬರ್ತಾರೆ. ನಾಲ್ಕನೇ ಕ್ರಮಾಂಕದಲ್ಲಿ ಕ್ಯಾಪ್ಟನ್ ಶುಭ್ ಮನ್ ಗಿಲ್ ಇರ್ತಾರೆ. ಐದನೇ ಕ್ರಮಾಂಕದಲ್ಲಿ ಜಡ್ಡುಗೆ ಬಡ್ತಿ ನೀಡಿದ್ರೆ 6ನೇ ಸ್ಲಾಟ್ ನಲ್ಲಿ ವಾಷಿಂಗ್ ಟನ್ ಸುಂದರ್ ಬರಬಹುದು. 7ನೇ ಸ್ಲಾಟ್ ನಲ್ಲಿ ಧ್ರುವ್ ಜುರೇಲ್ ಅಥವಾ ಜಗದೀಶನ್ ಅವಕಾಶ ಪಡೆಯಬಹುದು. ಆ ಬಳಿಕ ಆಕಾಶ್ ದೀಪ್, ಅರ್ಷದೀಪ್ ಮತ್ತು ಮೊಹಮ್ಮದ್ ಸಿರಾಜ್ ಬ್ಯಾಟಿಂಗ್ ಗೆ ಬರಬಹುದು.

Kishor KV