ಆಂಗ್ಲರ ಬೇಟೆಗೂ ಇಲ್ವಾ ವೈಭವ್ ಸೂರ್ಯವಂಶಿ – ಫೇಲ್ಯೂರ್ ಬ್ಯಾಟರ್ ಗಳನ್ನೇ ಆಡಿಸ್ತಾರಾ?
ENGನಲ್ಲಿ ಹೀಗಿರುತ್ತಾ ಪ್ಲೇಯಿಂಗ್ 11?

ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಫ್ಲ್ಯಾಪ್.. ಮಿಡಲ್ ಆರ್ಡರ್ ಅಂತೂ ಇನ್ನೂ ಬರ್ಬಾದ್.. ಬೌಲಿಂಗ್ ಯುನಿಟ್ ಕೂಡ ಸೂಪರ್ ಸ್ಟ್ರಾಂಗ್ ಇಲ್ಲ. ಐರ್ಲೆಂಡ್ನಂಥ ಕ್ರಿಕೆಟ್ ಶಿಶು ಎದುರಲ್ಲೇ ಕ್ಲೀನ್ ಸ್ವೀಪ್ ಆಗಿರೋ ಭಾರತ ಈಗ ಕ್ರಿಕೆಟ್ ಜನಕರ ನಾಡಲ್ಲಿ ಐದು ಪಂದ್ಯಗಳ ಟಿ20ಐ ಸರಣಿ ಗೆಲ್ಬೇಕಿದೆ. ಇಂಗ್ಲೆಂಡ್ನಂಥ ಪಿಚ್, ಅಲ್ಲಿನ ಬೌಲಿಂಗ್ ಯುನಿಟ್ ಎದುರು ಎದೆಯೊಡ್ಡಿ ನಿಲ್ಲೋದು ಸವಾಲಿನ ಕೆಲಸವೇ.
ಇದನ್ನೂ ಓದಿ : ಟಿ20 ವಿಶ್ವಕಪ್ನಿಂದ ಹೊರಬಿದ್ದ ಟೀಂ ಇಂಡಿಯಾ – ಆಸ್ಟ್ರೇಲಿಯಾ ವಿರುದ್ದ ಸೋತ ಭಾರತದ ವನಿತೆಯರು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20ಐ ಸರಣಿ ನಾಳೆಯಿಂದ ಆರಂಭ ಆಗಲಿದೆ. ಚೆಸ್ಟರ್ ಲೆ ಸ್ಟ್ರೀಟ್ನಲ್ಲಿ ನಡೆಯಲಿರೋ ಈ ಪಂದ್ಯದಲ್ಲಿ ಗೆಲ್ಲೋ ಮೂಲಕ ಭಾರತ ಕಂ ಬ್ಯಾಕ್ ಮಾಡ್ಬೇಕಿದೆ. ಮೊನ್ನೆಯಷ್ಟೇ ಐರ್ಲೆಂಡ್ ವಿರುದ್ಧ ಸೋತಿರೋ ಭಾರತಕ್ಕೆ ಓವರ್ ಕಂ ಮಾಡೋಕೆ ಸಾಕಷ್ಟು ಟೈಂ ಕೂಡ ಇಲ್ಲ. ಆನ್ಫೀಲ್ಡ್ ಸಕ್ಸಸ್ ಆಗ್ಬೇಕು ಅಂದ್ರೆ ಆಡುವಂಥ ಬಳಗ ಕೂಡ ಸ್ಟ್ರಾಂಗ್ ಇರ್ಬೇಕು. ಆದ್ರೆ ಈ ಪಂದ್ಯಕ್ಕೂ ಮುನ್ನ ಮೇನ್ಲಿ ಐದು ಚಾಲೆಂಜಸ್ ಕಾಣ್ತಾ ಇದೆ.
ಭಾರತಕ್ಕೆ 5 ಚಾಲೆಂಜ್!
- ಓಪನಿಂಗ್ ಜೋಡಿಯಿಂದ ಬಾರದ ಬಿಗ್ ಪಾರ್ಟ್ನರ್ ಶಿಪ್
- ಎರಡೂ ಪಂದ್ಯಗಳಲ್ಲಿ ಸೇರಿ 5 ರನ್ ಬಾರಿಸಿರೋ ಸಂಜು
- ಮಿಡಲ್ ಆರ್ಡರ್ ನಲ್ಲಿ ದುಬೆ, ತಿಲಕ್ ಮಾತ್ರವೇ ಫೈಟ್
- ಆಂಗ್ಲರ ಸ್ವಿಂಗ್ & ವೇಗದ ಬೌಲಿಂಗ್ ಎದುರು ಬ್ಯಾಟಿಂಗ್ ಕಷ್ಟ
- ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿ & ಬೌಲಿಂಗ್ ರೊಟೇಷನ್
ಇಂಗ್ಲೆಂಡ್ ವಿರುದ್ಧ ಸರಣಿ ಆರಂಭ ಮಾಡೋಕೂ ಮುನ್ನ ಮೊದಲು ಈ ಐದು ಪ್ರಾಬ್ಲಂಗಳಿಗೆ ಸಲ್ಯೂಷನ್ ಹುಡುಕ್ಬೇಕಿದೆ. ಮೇನ್ಲಿ ಭಾರತದ ಬ್ಯಾಟಿಂಗ್ ವೀಕ್ ಆಗಿರೋದು ಗೊತ್ತಾಗ್ತಿದೆ. ಟಾಪ್ ಆರ್ಡರ್, ಮಿಡಲ್ ಆರ್ಡರ್ ನಲ್ಲಿ ರನ್ಸ್ ಬಂದಿಲ್ಲ. ಹೀಗಾಗಿ ಆಂಗ್ಲರನ್ನ ಬೇಟೆಯಾಡ್ಬೇಕು ಅಂದ್ರೆ ಬ್ಯಾಟಿಂಗ್ ಯುನಿಟ್ ಮೇಲೆ ಫೋಕಸ್ ಮಾಡ್ಬೇಕು. ಇದೇ ಕಾರಣಕ್ಕೆ ವೈಭವ್ ಸೂರ್ಯವಂಶಿಯನ್ನ ಆಡ್ಸಿ ಅನ್ನೋ ಕೂಗು ಹೆಚ್ಚಾಗ್ತಿದೆ. ಆದ್ರೆ ಸದ್ಯದ ಡವಲಪ್ಮೆಂಟ್ಸ್ ನೋಡ್ತಿದ್ರೆ ವೈಭವ್ ಇಂಗ್ಲೆಂಡ್ನಲ್ಲೂ ಡೆಬ್ಯೂ ಮಾಡೋದು ಕಷ್ಟ ಎನ್ನಲಾಗ್ತಿದೆ. ಟೀಂ ಇಂಡಿಯಾದ ಸಹಾಯಕ ಕೋಚ್ ರಾನ್ ಟೆನ್ ಡೊಶೆಟ್ ಅವರು ವೈಭವ್ ಸೂರ್ಯವಂಶಿ ಪದಾರ್ಪಣೆ ಬಗ್ಗೆ ಹೇಳಿರೋ ಮಾತುಗಳೇ ಈ ಅನುಮಾನಕ್ಕೆ ಕಾರಣ. ಸೂರ್ಯವಂಶಿ ಆಡಿಸದ ಮ್ಯಾನೇಜ್ ಮೆಂಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಐರಿಷ್ ಸರಣಿ ಬಳಿಕ ಮಾತನಾಡಿದ್ದ ರಾನ್ ಟೆನ್, ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಕಂಪ್ಲೀಟ್ ಫಿಟ್ ಇದ್ದಾರೆ. ಇದ್ರಲ್ಲಿ ಯಾವ ಡೌಟ್ ಇಲ್ಲ. ಆದ್ರೆ ಕೇವಲ ಮೂರು ತಿಂಗಳ ಹಿಂದಷ್ಟೇ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಅವರಂತಹ ಆಟಗಾರನನ್ನು ಸುಮ್ಮನೆ ಕೈಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ಆಂಗ್ಲರ ಬೇಟೆಗೆ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಶಿವಂ ದುವೆ
ಅಕ್ಷರ್ ಪಟೇಲ್
ಸೂರ್ಯಾಂಶ್ ಶೆಡ್ಗೆ
ಹರ್ಷಿತ್ ರಾಣಾ
ಅರ್ಶದೀಪ್ ಸಿಂಗ್
ಪ್ರಿನ್ಸ್ ಯಾದವ್

ನೋಡಿರಿ

