ರೋಹಿತ್ ಟ್ರೆಂಡ್.. KLಗೆ ಟೆನ್ಷನ್! – ಸುಂದರ್ ಬದಲಿಗೆ ಯಾರಿಗೆ ಚಾನ್ಸ್?
ENG ಸರಣಿ ಗೆಲ್ಲಲು ಹೀಗಿದೆ ಪ್ಲೇಯಿಂಗ್ 11

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಭಾನುವಾರ ನಡೆಯಲಿದ್ದು ಇಲ್ಲಿ ಗೆದ್ದವ್ರು ಸರಣಿಯನ್ನೂ ಗೆಲ್ತಾರೆ. ಸೋ ಎರಡೂ ತಂಡಗಳಿಗೆ ಇದು ಮಸ್ಟ್ ವಿನ್ ಮ್ಯಾಚ್. ಅದ್ರಲ್ಲೂ ಟೀಂ ಇಂಡಿಯಾದಲ್ಲಿ ಸದ್ಯ ಆಗ್ತಿರೋ ಡವಲಪ್ಮೆಂಟ್ಸ್ ನೋಡ್ತಿದ್ರೆ ನಾಳಿನ ಪಂದ್ಯ ಇತಿಹಾಸದ ಪುಟದಲ್ಲಿ ಉಳಿದುಹೋಗುತ್ತಾ ಅನ್ನೋ ಆತಂಕವೂ ಇದೆ.
ಇದನ್ನೂ ಓದಿ : PAK ಆಟಗಾರನ ಗಾಂ*ಜಾ ಗಮ್ಮತ್ತು! – ನಶೆಯಲ್ಲಿ T-20WC ಆಡಿದ್ದ ನವಾಜ್
ಏಕದಿನ ಸರಣಿಯ ಮೊದಲ ಪಂದ್ಯವನ್ನ ಭಾರತ 6 ವಿಕೆಟ್ಗಳಿಂದ ಗೆದ್ರೆ ಎರಡನೇ ಪಂದ್ಯವನ್ನು ಇಂಗ್ಲೆಂಡ್ 4 ವಿಕೆಟ್ಗಳಿಂದ ಗೆದ್ದಿತ್ತು. ಈಗ ಮೂರನೇ ಪಂದ್ಯ ಲಾರ್ಡ್ಸ್ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11ನಲ್ಲಿ ಬದಲಾವಣೆಗಳಂತೂ ಗ್ಯಾರಂಟಿ. ಓಪನಿಂಗ್ ಜೋಡಿಯನ್ನ ಚೇಂಜ್ ಮಾಡದೇ ಇದ್ರೂ ವಿಕೆಟ್ ಕೀಪರ್ ಹಾಗೇ ಆಲ್ ರೌಂಡರ್ಸ್ ಸ್ಲಾಟ್ನಲ್ಲಿ ಬದಲಾವಣೆಯಾಗುತ್ತೆ. ಬಟ್ ಇಲ್ಲಿ ಪ್ಲೇಯಿಂಗ್ 11ಗಿಂತ ಜಾಸ್ತಿ ರೋಹಿತ್ ಶರ್ಮಾರಿಗೆ ಇದು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುತ್ತಾ ಅನ್ನೋ ಚರ್ಚೆಯೇ ಜೋರಾಗಿದೆ.
ರೋಹಿತ್ ನಿವೃತ್ತಿ ಟ್ರೆಂಡ್.. ಲಂಡನ್ ನಲ್ಲಿ ಹಿಟ್ ಮ್ಯಾನ್ ಫ್ಯಾಮಿಲಿ!
ಸದ್ಯ ಮೂರನೇ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡ್ತಾರೆ ಅನ್ನೋ ಸುದ್ದಿ ಫುಲ್ ಟ್ರೆಂಡಿಂಗ್ನಲ್ಲಿದೆ. ಬಿಸಿಸಿಐನಲ್ಲೂ ಈ ಬಗ್ಗೆ ಬಾರೀ ಚರ್ಚೆಯಾಗ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಲಾರ್ಡ್ಸ್ ಮೈದಾನದಲ್ಲಿ ನಡೆಯೋ ಮ್ಯಾಚ್ ನೋಡಲು ರೋಹಿತ್ ಶರ್ಮಾ ಅವರ ಪೋಷಕರಾದ ಗುರುನಾಥ್ ಶರ್ಮಾ ಮತ್ತು ಪೂರ್ಣಿಮಾ ಶರ್ಮಾ ಕೂಡ ವಿಮಾನದಲ್ಲಿ ಬಂದಿಳಿದಿದ್ದಾರೆ. ಹೀಗಾಗಿ ರೋಹಿತ್ ಕರಿಯರ್ನಲ್ಲಿ ಇದೇ ಕೊನೆ ಪಂದ್ಯ ಆಗಬಹುದು ಅನ್ನೋ ಸುದ್ದಿ ಜೋರಾಗ್ತಿದೆ. ಅದೂ ಅಲ್ದೇ ಇತ್ತೀಚೆಗೆ ರೋಹಿತ್ ಶರ್ಮಾ ಅವ್ರ ಬ್ಯಾಟ್ ಕೂಡ ಮಂಕಾಗಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 11 ರನ್ ಗಳಿಸಿದ್ದ ರೋಹಿತ್ ಕಾರ್ಡಿಫ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 47 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿದ್ದರು. ಹೀಗಾಗೇ ಮುಂದಿನ ಸರಣಿಗಳಿಗೆ ಬಿಸಿಸಿಐ ಇವ್ರನ್ನ ಕನ್ಸಿಡರ್ ಮಾಡಲ್ಲ ಎಂದು ವರದಿಗಳಾಗಿವೆ. ಮಾಜಿ ಕ್ರಿಕೆಟರ್ಸ್ ಕೂಡ ಈ ಬಗ್ಗೆ ರಿಯಾಕ್ಟ್ ಮಾಡ್ತಿದ್ದಾರೆ. ಆದ್ರೆ ಬಿಸಿಸಿಐ ಈ ಬಗ್ಗೆ ಕ್ಲಾರಿಫಿಕೇಷನ್ ಕೊಟ್ಟಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ ರೋಹಿತ್ ಶರ್ಮಾ ಅವರ ನಿವೃತ್ತಿ ಕುರಿತು ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. 2027 ರ ಏಕದಿನ ವಿಶ್ವಕಪ್ವರೆಗೂ ಆಡ್ಬೇಕು ಅನ್ಕೊಂಡಿದ್ದಾರೆ. ಆದರೆ ಅವರ ಫಾರ್ಮ್ ಮತ್ತು ದೈಹಿಕ ಫಿಟ್ನೆಸ್ ಆಧರಿಸಿ ಆಯ್ಕೆ ಮಂಡಳಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸೈಕಿಯಾ ತಿಳಿಸಿದ್ದಾರೆ. ಹೀಗಿದ್ರೂ ಕೆಲವ್ರಲ್ಲಿ ಡೌಟ್ಸ್ ಅಂತೂ ಇದ್ದೇ ಇದೆ. ಹೀಗಾಗಿ ಭಾನುವಾರದ ಪಂದ್ಯವೆಲ್ಲಾ ರೋಹಿತ್ ಮಯವಾಗಿದೆ. ಮತ್ತೊಂದೆಡೆ ಪಂದ್ಯಕ್ಕೂ ಮುನ್ನ ಮತ್ತೆ ಇಂಜುರಿ ಭೂತ ಕಾಡಿದೆ.
ಮೂರನೇ ಪಂದ್ಯದಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್!
ಇನ್ನು ಮೂರನೇ ಪಂದ್ಯಕ್ಕೂ ಮುನ್ನ ಭಾರತದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇಂಜುರಿಗೆ ಒಳಗಾಗಿದ್ದು ಅವ್ರನ್ನ ಪಂದ್ಯದಿಂದ ಹೊರಗಿಡಲಾಗಿದೆ. ಕಾರ್ಡಿಫ್ನಲ್ಲಿ ನಡೆದ ಎರಡನೇ ಮ್ಯಾಚಲ್ಲಿ ಬ್ಯಾಟಿಂಗ್ ಮಾಡುವಾಗ ಅವ್ರ ಮಂಡಿಗೆ ಗಾಯವಾಗಿತ್ತು. ಆನಂತ್ರ ಎರಡನೇ ಇನ್ನಿಂಗ್ಸ್ನಲ್ಲಿ ಫೀಲ್ಡಿಂಗ್ ಕೂಡ ಮಾಡೋಕೆ ಆಗಿರಲಿಲ್ಲ. ಬೌಲಿಂಗ್ ಮಾಡಲು ಸಹ ಸಾಧ್ಯವಾಗಲಿಲ್ಲ. ಇದ್ರಿಂದಾಗಿ ಭಾರತ ಕೇವಲ ಐದು ಬೌಲರ್ಗಳೊಂದಿಗೆ ಮಾತ್ರ ಆಡಬೇಕಾಯಿತು. ಸರಣಿ ಆರಂಭಕ್ಕೂ ಮೊದ್ಲೇ ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯದಿಂದ ಹೊರಗುಳಿದಿದ್ರು. ಈಗ ಸುಂದರ್ ಕೂಡ ಹೊರಬಿದ್ದಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಕೂಡ ಪ್ಲೇಯಿಂಗ್ 11ನಲ್ಲಿ ಇರ್ಲಿಲ್ಲ. ಅನಾರೋಗ್ಯದಿಂದಾಗಿ ಆಡ್ತಿಲ್ಲ ಅಂತಾ ನಾಯಕ ಶುಭ್ಮನ್ ಗಿಲ್ ಹೇಳಿದ್ರು. ರಾಹುಲ್ ಬದಲಿಗೆ ಇಶಾನ್ ಕಿಶನ್ರನ್ನ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಡಿಸಿದ್ರು. ಆದ್ರೆ ಗೌತಮ್ ಗಂಭೀರ್ ಮತ್ತು ಅಗರ್ಕರ್ಗೆ ಕಿಶನ್ ಮೇಲೆಯೇ ಜಾಸ್ತಿ ಒಲವಿದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿ ವೇಳೆ ಲಾಸ್ಟ್ ಮ್ಯಾಚಲ್ಲಿ ಕೆಎಲ್ ರಾಹುಲ್ ಡ್ರಾಪ್ ಮಾಡಿ ಕಿಶನ್ ಆಡ್ಸಿದ್ರು. ಮುಂದಿನ ದಿನಗಳಲ್ಲೂ ಕಿಶನ್ಗೆ ಪರ್ಮನೆಂಟ್ ಚಾನ್ಸ್ ಕೊಡೋಕೆ ನೋಡ್ತಿದ್ದಾರೆ. ಹೀಗಾಗಿ ರಾಹುಲ್ ಮೇಲೂ ಪರ್ಫಾಮ್ ಮಾಡಲೇಬೇಕಾದ ಪ್ರೆಶರ್ ಕೂಡ ಇದೆ.
ಸರಣಿ ಗೆಲ್ಲಲು ಭಾರತ ರೆಡಿ!
ರೋಹಿತ್ ಶರ್ಮಾ
ಶುಭಮನ್ ಗಿಲ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆಎಲ್ ರಾಹುಲ್
ಶಿವಂ ದುಬೆ
ಅಕ್ಷರ್ ಪಟೇಲ್
ಕುಲ್ದೀಪ್ ಯಾದವ್
ಗುರ್ನೂರ್ ಬ್ರಾರ್
ಜಸ್ಪ್ರೀತ್ ಬುಮ್ರಾ
ಪ್ರಸಿದ್ಧ್ ಕೃಷ್ಣ
ಅಷ್ಟಕ್ಕೂ ಇಲ್ಲಿ ಭಾರತ ಬೌಲಿಂಗ್ ಯುನಿಟ್ ಸ್ಟ್ರಾಂಗ್ ಆಗೇ ಕಾಣ್ತಿದೆ. ಆದ್ರೆ ಬ್ಯಾಟಿಂಗ್ನಲ್ಲಿ ರನ್ಸ್ ಬರ್ತಿಲ್ಲ. ಮೊದಲ ಮ್ಯಾಚಲ್ಲಿ ಭಾರತ ಗೆದ್ದಿದ್ದೇ ಆಂಗ್ಲರನ್ನ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ್ದಕ್ಕೆ. ಆದ್ರೆ ಎರಡನೇ ಪಂದ್ಯದಲ್ಲಿ ಭಾರತ ಫಸ್ಟ್ ಇನ್ನಿಂಗ್ಸ್ ಆಡಿದ್ದು ರನ್ಸ್ ಬಂದಿರಲಿಲ್ಲ. ಆಂಗ್ಲರಿಗೆ ಫೈಟ್ ನೀಡುವಷ್ಟು ಟಾರ್ಗೆಟ್ ಇಲ್ಲದ ಕಾರಣ ಭಾರತ ಸೋಲಬೇಕಾಯ್ತು. ಅಟ್ಲೀಸ್ಟ್ ಮೂರನೇ ಮ್ಯಾಚಲ್ಲಾದ್ರೂ ಬ್ಯಾಟಿಂಗ್ ಯುನಿಟ್ ಕಡೆಯಿಂದ ಸ್ಟ್ರಾಂಗ್ ಸಪೋರ್ಟ್ ಸಿಗ್ಬೇಕಿದೆ.

ನೋಡಿರಿ

